12 Jun 2021

ಘನಘೋರ ಯುದ್ದ ನಡೆಯುತ್ತಿತ್ತು.......ಅರ್ಜುನ ಶ್ರೀ ಕೃಷ್ಣ ನಿಗೆ ಕೇಳಿದ....!!!

ಘನಘೋರ ಯುದ್ಧ ನಡೆಯುತ್ತಿತ್ತು.....
ಅರ್ಜುನ ಕೃಷ್ಣನಿಗೆ ಕೇಳಿದ...
"ಮಾಧವಾ...
ಯಾಕೆ
ನೀನು ಯಾವಾಗಲೂ ಬಹಳ ತಡ ಮಾಡಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತೀಯಾ  ?...   ?....
ತತಕ್ಷಣ
ನಿರ್ಣಯಗಳನ್ನು ಯಾಕೆ ತೆಗೆದುಕೊಳ್ಳುವದಿಲ್ಲ..  ?..."..
ಕೃಷ್ಣನ
ತುಟಿಯಲ್ಲಿ ಮುದ್ದಾದ ಕಿರು ನಗು ಇತ್ತು...
"ಕೃಷ್ಣಾ....
ಕಂಸ .. ದುರುಳ.. ದುಷ್ಟ ಅಂತ ನಿನಗೆ ಗೊತ್ತಿತ್ತು ತಾನೆ ?....
ಈ
ಕೌರವ ಅಹಂಕಾರಿ.. ಕೆಟ್ಟವ ಅಂತ ಗೊತ್ತಿತ್ತು ತಾನೆ ?...
ಕೌರವ
ನಮ್ಮನ್ನು ಅರಗಿನ ಮನೆಯಲ್ಲಿ ಇಟ್ಟು ಸುಡಲು ಪ್ರಯತ್ನಿಸಿದ...
ಕುತಂತ್ರದಿಂದ
ಪಗಡೆ ಆಟ ಆಡಿ ನಮ್ಮನ್ನು ಸೋಲಿಸಿ ಅರಣ್ಯವಾಸಕ್ಕೆ ಕಳುಹಿಸಿದ..
ದ್ರೌಪದಿಯ
ಸೀರೆ ಸೆಳೆದು ಮಾನಭಂಗಕ್ಕೆ ಪ್ರಯತ್ನಿಸಿದ..
ಇಂಥಹ
ಕೆಟ್ಟ ಕೆಲಸಗಳನ್ನು ಮಾಡಿದಾಗಲೇ
ಅವನನ್ನು 
ಸಾಯಿಸಬಹುದಿತ್ತಲ್ಲ..!
ಯಾಕೆ
ಕೋಟ್ಯಾಂತರ ಜನ ಸೇರಿ.. ಯುದ್ಧ ಮಾಡಿ..
ಇಷ್ಟೆಲ್ಲ 
ಸಾವು ನೋವು.. ಇವೆಲ್ಲ ಅಗತ್ಯವಿತ್ತಾ   ?..
ಇದನ್ನೆಲ್ಲ ತಡೆಯಬಹುದಿತ್ತಲ್ಲ ..."...
ಮುದ್ದಾದ
ಕಿರುನಗು ಕೃಷ್ಣನ ತುಟಿಗಾಗಿಯೇ ಇತ್ತು...
"ಪಾರ್ಥಾ...
ಅರಗಿನ ಮನೆಯಲ್ಲಿಟ್ಟು
ಸುಡುವ ಪ್ರಯತ್ನ ಮಾಡಿದಾಗಲೇ.. ಕೌರವನನ್ನು ಸಾಯಿಸಬಹುದಿತ್ತು..
ತುಂಬಿದ
ಸಭೆಯಲ್ಲಿ 
ದ್ರೌಪದಿಯ ಮಾನ ಉಳಿಸಲು ಸೀರೆಯನ್ನು 
ಕೊಡುವಾಗಲೇ
ಕೌರವನನ್ನು ಹತ ಮಾಡಬಹುದಿತ್ತು...
ಆದರೆ..
ಪಾರ್ಥಾ.. ಸ್ವಲ್ಪ ಯೋಚಿಸು...
ಕೌರವನ
ಈ ಕೆಟ್ಟ ಕೆಲಸಗಳಿಗೆ 
ಜೊತೆಯಾದವರು 
ಯಾರ್ಯಾರು ಅಂತ ಗೊತ್ತಾಗುತ್ತಿತ್ತಾ   ?...
ಆಗ
ನಿರ್ಣಯ ತೆಗೆದುಕೊಂಡಿದ್ದರೆ..
ಕೌರವ
ಒಬ್ಬ ಮಾತ್ರ ಸಾಯುತ್ತಿದ್ದ..!
ಈಗ ನೋಡು...
ಎಲ್ಲರ ಕೆಟ್ಟ ಕೆಲಸಗಳು ಬಯಲಾಗಿದೆ....
ಶಕುನಿ ಯಾರು..?
ಕರ್ಣ ಯಾರು... ದುಃಶ್ಯಾಸನ ಯಾರು ..?..
ಎಲ್ಲರೂ ಈಗ ಬೆತ್ತಲಾಗಿದ್ದಾರೆ..!
ಅಷ್ಟೇ ಅಲ್ಲ...
ತುಂಬಿದ ಸಭೆಯಲ್ಲಿ..
ಒಂದು 
ಹೆಣ್ಣಿನ ಮಾನಭಂಗವಾಗುವಾಗ.. 
ಸುಮ್ಮನಿದ್ದ
ಸಾತ್ವಿಕರ ಬಣ್ಣವೂ ಬಯಲಾಗಿದೆ... 
ತಪ್ಪು ಯಾರದ್ದೆಂದು ಚರ್ಚೆಯಾಗಿದೆ...
ತಪ್ಪು
ನಡೆಯುತ್ತಿರುವಾಗ.. 
ಅಪರಾಧ ನಡೆಯುತ್ತಿರುವಾಗ..
ಸಾತ್ವಿಕರ
ಮುಖವಾಡ ಹಾಕಿಕೊಂಡು 
ಇರುವದೂ ಕೂಡ ಅಪರಾಧವಲ್ಲವಾ   ?...
"ನಾನು
ಆ ಕಡೆಯೂ ಇಲ್ಲ..
ಈ ಕಡೆಯೂ ಇಲ್ಲ..."  
ಎನ್ನುವ ಬಣ್ಣ ರಹಿತರ ನಾಟಕವೂ ಬದಲಾಗಿದೆ....
ಈಗ ನೋಡು...
" ಉಪ್ಪಿನ ಋಣ "..
ಅಂತ
ಧರ್ಮ.. 
ಅಧರ್ಮದ ಬಗೆಗೆ ಮಾತಾಡುವ
ಕೌರವನ ಜೊತೆಯಾದ ಭೀಷ್ಮ.. ದ್ರೋಣ.. ಕೃಪರ ಬಣ್ಣವೂ ಬಯಲಾಗಿದೆ...
ಈಗ ಧರ್ಮಯಾವುದು  ?.. ಅಧರ್ಮಯಾವುದು ಅಂತ ಸ್ಪಷ್ಟವಾಗಿದೆ....
ಈ
ಯುದ್ಧ ಈಗ ನಿರ್ಣಾಯಕ...."...
ಅರ್ಜುನ ಕೃಷ್ಣನಿಗೆ ಕೈಮುಗಿದು ನಿಂತಿದ್ದ..
"ಕೃಷ್ಣಾ...
ಅಲ್ಲಿ ಇರುವವರು ಕೆಟ್ಟವರಿದ್ದಾರೆ..
ಅದೇನೋ ಸರಿ...
ಇಲ್ಲಿ
ಧರ್ಮದ ಜೊತೆ ಇದ್ದವರೂ.. ಸಾಯುತ್ತಾರಲ್ಲ...... ಅವರೇನು ಮಾಡಿದ್ದಾರೆ ?...
ಪಾಂಚಜನ್ಯ ಮೊಳಗಿಸುವ
ಮುದ್ದಾದ ತುಟಿಗಳು ಮತ್ತೊಮ್ಮೆ ನಕ್ಕವು...
"ಪಾರ್ಥಾ...
ಅನಿವಾರ್ಯವಾಗಿ 
ಅಧರ್ಮದ.. ಅನ್ಯಾಯದ ಪ್ರತೀಕ....
ಕೌರವನ 
ಜೊತೆ ಸೇರಿದವರೂ ಸಾಯುತ್ತಾರೆ..
ಅಷ್ಟೇ ಅಲ್ಲ...
ಧರ್ಮದ ಜೊತೆ ಇದ್ದೇವೆ ಅಂತ
ಇಲ್ಲಿ
ಜೊತೆಯಾದ ಸೋಗಲಾಡಿಗಳೂ ಸಾಯುತ್ತಾರೆ....
" ಸಾವು .."
ಅವರವರ ಕರ್ಮಕ್ಕೆ ತಕ್ಕಂತೆ ಸಿಗುತ್ತದೆ...
ಅದಕ್ಕೆಲ್ಲ
ಚಿಂತೆ ಬೇಡ....ಇಂದಿನ ಯುದ್ಧಕ್ಕೆ ಅಣಿಯಾಗು...."..
ಕೃಷ್ಣ ಪಾಂಚಜನ್ಯ ಮೊಳಗಿಸಿದ...

ವೈರಿ ಸೈನ್ಯದ ಗುಂಡಿಗೆ ನಡುಗುವ ಹಾಗೆ.....!
ಸಂಗ್ರಹ: ಸಾಮಾಜಿಕ ಜಾಲತಾಣದಿಂದ

No comments:

Post a Comment