2 May 2020

ಬಡವರ ಬಾಳಿಗೆ ನೆರವಾದ ಭಗವಾನ್ ಶ್ರೀ ನಾರಾಯಣ ಗುರುದೇವನ್ ಪ್ರತಿಷ್ಠಾಪಿಸಿದ ಕುದ್ರೋಳಿ ಪುಣ್ಯ ಕ್ಷೇತ್ರ..!!

*ಬಡವರ ಬಾಳಿಗೆ ನೆರವಾದ ಕುದ್ರೋಳಿ ಕ್ಷೇತ್ರ*,

 *ಪ್ರತಿನಿತ್ಯ 1000ಮಂದಿಗೆ ಅನ್ನದಾನ*

*300 ಕ್ವಿoಟಾಲ್ ಅಕ್ಕಿ ವಿತರಣೆ*


 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ದಕ್ಷಿಣ ಕನ್ನಡ ಜಿಲ್ಲೆಯ ದಿನಗೂಲಿ ಕಾರ್ಮಿಕರಿಗೆ, ಬಡವರು, ಜನಸಾಮಾನ್ಯರಿಗೆ ಜೀವನ ಸಾಗಿಸಲು ಅನುಕೂಲವಾಗುವಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ 300ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಪ್ರತಿನಿತ್ಯ 1ಸಾವಿರ ಮಂದಿಗೆ ದೇವಸ್ಥಾನದಿಂದಲೇ ಅನ್ನದಾನ ವಿತರಣೆ ಮಾಡಲಾಗುತ್ತಿದೆ.
ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ರಾಜಕೀಯ ನೇತಾರ ಬಿ.ಜನಾರ್ದನ ಪೂಜಾರಿಯವರ ಸಲಹೆಯಂತೆ ಈ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಾರಂಭದಲ್ಲಿ 100 ಕ್ವಿಂಟಾಲ್ ಅಕ್ಕಿ ನೀಡುವ ಉದ್ದೇಶ ಹೊಂದಲಾಗಿತ್ತಾದರೂ, ಬಳಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈವರೆಗೆ 298 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ ಎನ್ನುತ್ತಾರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.

ಕುದ್ರೋಳಿ ಕ್ಷೇತ್ರದಿಂದ ನೀಡಲಾಗುವ ಬಡವರ ನೆರವಿಗೆ ಕ್ಷೇತ್ರದ ಭಕ್ತರು ಮಾತ್ರವಲ್ಲದೆ ಕೊಡುಗೈದಾನಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ದೇವಾಲಯದಲ್ಲಿ ಅಕ್ಕಿ ವಿತರಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆಯಿರುವ ಪ್ರದೇಶದಲ್ಲಿರುವ ಸ್ಥಳೀಯ ಅಂಗಡಿಯಿಂದಲೇ ಅಕ್ಕಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ದ.ಕ.ಜಿಲ್ಲೆಯ ನಾನಾ ಊರಿನ ಸಂಘ ಸಂಸ್ಥೆಗಳ ಮೂಲಕ ವಿತರಿಸಲು ಉದ್ದೇಶಿಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.

ಸರ್ವಧರ್ಮದವರಿಗೂ ಅಕ್ಕಿ: ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಕುದ್ರೋಳಿ ಕ್ಷೇತ್ರದಲ್ಲಿ ಜಗತ್ತಿಗೆ ಏಕತೆಯನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಚಿಂತನೆಯಂತೆ ಲಾಕ್‌ಡೌನ್ ಸಂದರ್ಭ ಸರ್ವಧರ್ಮದ ಬಡವರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಅವರಿಗೆ ನಿರಾಸೆ ಮಾಡದಂತೆ ವಿಳಂಬ ಮಾಡದಂತೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ.

*ಸಂಘಟನೆಗಳಿಗೂ ಸಹಕಾರ*: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಅಕ್ಕಿಗೆ ಬೇಡಿಕೆ ಬಂದಿದ್ದು ಯಾರನ್ನೂ ನಿರಾಸೆಗೊಳಿಸದೆ ಅಕ್ಕಿ ವಿತರಣೆ ಮಾಡಲಾಗಿದೆ. ಇದು ಮಾತ್ರವಲ್ಲದೆ ಟೈಲರ್ ಅಸೋಸಿಯೇಶನ್, ಫೋಟೋ ಗ್ರಾಫರ್ ಅಸೋಸಿಯೇಶನ್ ಕೂಡಾ ಅಕ್ಕಿ ಬೇಡಿಕೆ ಸಲ್ಲಿಸಿದ್ದು ಅವರಿಗೂ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

*1000 ಮಂದಿಗೆ ನಿತ್ಯ ಅನ್ನದಾನ*: ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು, ನಿರಾಶ್ರಿತರು, ಕೆಲಸವಿಲ್ಲದೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸುಮಾರು 1000 ಮಂದಿಗೆ ನಿತ್ಯ ಅನ್ನದಾನ ಮಾಡುತ್ತಿದೆ. ಈ ಮೂಲಕ ಸುಮಾರು ಮಾರ್ಚ್ 26  ರಿಂದ ಬಡವರ ಹೊಟ್ಟೆ ತಣಿಸುವ ಕೆಲಸವನ್ನು ಶ್ರೀ ಕ್ಷೇತ್ರದಿಂದ ಮಾಡಲಾಗುತ್ತಿದೆ.
ಲಾಕ್‌ಡೌನ್ ಜಾರಿಯಾದ ಬಳಿಕ ಬಹಳಷ್ಟು ಜನ ಹೊರ ರಾಜ್ಯದ, ಹೊರ ಜಿಲ್ಲೆಯ ಕಾರ್ಮಿಕರು ಮಾಡಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಈ ಅನ್ನದಾನ ಮಾಡುವ ಕಾರ್ಯಕ್ಕೆ ದೇವಳ ಕೈ ಹಾಕಿದೆ. ಈಗ ಪ್ರತಿನಿತ್ಯ ದೇವಾಲಯದ ವತಿಯಿಂದಲೇ ಎಲ್ಲ ಆಹಾರ ಸಾಮಾಗ್ರಿಗಳನ್ನು ಭರಿಸಿ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

*ಪ್ರೇರಣೆಯಾದ ಕುದ್ರೋಳಿ ಕ್ಷೇತ್ರ*
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಹಲವಾರು ಸಂಘ ಸಂಸ್ಥೆಗಳು ಕಿಟ್ ವಿತರಣೆ ಮಾಡಿದ್ದು, ಕೆಲವು ಸಂಸ್ಥೆಗಳಿಗೆ ಕುದ್ರೋಳಿ ಕ್ಷೇತ್ರವೇ ಪ್ರೇರಣೆಯಾಗಿ ನಿಂತಿವೆ. ಜಿಲ್ಲೆಯ ಕೆಲವು ಸಂಘಗಳು ಕುದ್ರೋಳಿ ಕ್ಷೇತ್ರದಿಂದ ಅಕ್ಕಿ ಪಡೆದು ಅದಕ್ಕೆ ಮತ್ತೆ ಹೆಚ್ಚುವರಿಯಾಗಿ ಅಕ್ಕಿ, ದಿನಸಿ ಸಾಮಾಗ್ರಿ ಸೇರಿಸಿ ಕಿಟ್ ನೀಡುತ್ತಿದ್ದಾರೆ. ಇದರಿಂದ ಕುದ್ರೋಳಿ ಕ್ಷೇತ್ರ ಒಂದು ರೀತಿ ಪ್ರೇರಣೆ, ಮಾದರಿಯಾಗಿವೆ.

ಗೋಕರ್ಣನಾಥ ಸೇವಾದಳ
ಲಾಕ್‌ಡೌನ್ ಆರಂಭದ ದಿನದಿಂದ ಕುದ್ರೋಳಿ ಕ್ಷೇತ್ರದ ಅಕ್ಕಿ, ಅನ್ನದಾನ ವಿತರಣೆ ಸೇವೆಯಲ್ಲಿ ಕುದ್ರೋಳಿ ಗೋಕರ್ಣನಾಥ ಸೇವಾದಳವು ಅವಿತರವಾಗಿ ದುಡಿಯುತ್ತಿವೆ. ಕೊರೋನಾ ಭೀತಿಯ ನಡುವೆಯೂ ಜೀವದ ಹಂಗು ತೊರೆದು ಸೇವಾದಳವು ಮಾಡುತ್ತಿರುವ ಸೇವೆಗೆ ಎಲ್ಲೆಡೆಯಿಂದಲೂ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದೆ. ಬಿ.ಜನಾರ್ದನ ಪೂಜಾರಿಯವರೂ ಯುವಕರ ಸೇವೆಯನ್ನು ಕೊಂಡಾಡಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಕೊರೊನಾ ಜಾಗೃತಿ ಹಿನ್ನಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 290 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ. ಇದು ಮಾತ್ರವಲ್ಲದೆ ಕ್ಷೇತ್ರದ ವತಿಯಿಂದ ಪ್ರತಿನಿತ್ಯ 1ಸಾವಿರ ಕುಟುಂಬಕ್ಕೆ ಅನ್ನದಾನ ನಡೆಯುತ್ತಿದ್ದು, ಇದನ್ನು ಲಾಕ್‌ಡೌನ್ ತೆರವು ಆಗುವವರೆಗೆ ಮುಂದುವರಿಸಲಾಗುವುದು 
 ಎಂದು  ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ಇದರ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್ ತಿಳಿಸಿರುತ್ತಾರೆ.

ಮಹಾಗುರು ವರ್ಣ ವೈಭವ ಚಿತ್ರಕಲಾ ಸ್ಪರ್ಧೆ

!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ!!*
*ಕಲಾ ಮಿತ್ರರೇ..*
*ಇದು ರಾಜ್ಯ ಮಟ್ಟದ..*
*ಮಹಾಗುರು*  *ವರ್ಣ ವೈಭವ ಚಿತ್ರಕಲಾ ಸ್ಪರ್ಧೆ ( ಮುಕ್ತ ವಿಭಾಗದಲ್ಲಿ ಮಾತ್ರ ಇರುವುದು.)*
*ಚಿತ್ರಕಲಾಸಕ್ತರು*
*ಭಗವಾನ್ ಶ್ರೀ ನಾರಾಯಣ* *ಗುರುದೇವನ ಚಿತ್ರವನ್ನು ಬರೆದು  ನಮಗೆ  WhatsApp ಮಾಡಿರಿ..*
*ಗುರುದೇವನ ಚಿತ್ರಗಳನ್ನು ನಮಗೆ ದಿನಾಂಕ:18-5-2020 ರೊಳಗೆ ನಮ್ಮ ಈ WhatsApp* *9483024279 ಸಂಖ್ಯೆಗೆ ಕಳುಹಿಸಿರಿ.*
*ಸ್ಪರ್ಧೆಗೆ ಯಾವುದೇ* *ಪ್ರವೇಶ_ಶುಲ್ಕ ಇರುವುದಿಲ್ಲ. ಉಚಿತ.*
*ಈ ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ವ ಮಾನವ ಧರ್ಮವೂ* *ಭಾಗವಹಿಸಬಹುದು.  ಇಲ್ಲಿ ಯಾವುದೇ ಜಾತಿ ಮತ_ಧರ್ಮ ಭೇದ ಭಾವ ಇಲ್ಲ...!!!*
*ಅದೇ ಅತ್ಯುತ್ತಮವಾದ 9 ಚಿತ್ರಕ್ಕೆ* *ಬಹುಮಾನ ನೀಡಲಾಗುತ್ತದೆ.*
*ಆಯೋಜನೆ: ಶ್ರೀ ನಾರಾಯಣ* *ಗುರು ಸ್ಕೂಲ್ ಆಫ್ ಆರ್ಟ್ ,ಮಂಗಳೂರು,ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರುದೇವ* *ಪ್ರತಿಷ್ಠಾನ. ಹಾಗೂ ಸಮಸ್ತ ಗುರು ಭಕ್ತರು,ಸೇವಕರು.*
*ಹೆಚ್ಚಿನ ಮಾಹಿತಿಗಾಗಿ*: *9483024279* *ಸಂಪರ್ಕ ಮಾಡಬಹುದು.*

ಸಮಾಜಮುಖಿ ಸೇವೆಗೆ ಶ್ರೀ ನಾರಾಯಣ ಗುರುಗಳ ತತ್ವ ಧರ್ಮ ಸಂದೇಶಗಳೇ ನನಗೆ ಪ್ರೇರಣೆ.. - ಶ್ರೀಯುತ ಪದ್ಮರಾಜ್


✍️✍️✍️✍️✍️ *ನವೀಶ್ ಎರ್ಮಾಳ್*
*ಸೇವಾ ಬದುಕಿನ ಹಾದಿಯಲ್ಲಿ ಪದ್ಮರಾಜ್*
ಸಮಾಜದ ಹಿತಕ್ಕಾಗಿ,ಸಮಾಜದ ಜನರ ಒಳಿತಿಗಾಗಿ,ತನ್ನ ಅಮೂಲ್ಯ ಸಮಯವನ್ನು ಜನರ ಹಿತಕ್ಕಾಗಿ ಮೀಸಲಿಟ್ಟ ಯುವ ಸೇವಾ ಮಾಣಿಕ್ಯ: *ಪದ್ಮರಾಜ್*

ಸವಾಲನ್ನು ಸವಾಲಾಗಿ ಸ್ವೀಕರಿಸಿ  ನಿಸ್ವಾರ್ಥ ಸೇವೆ ಯೇ ನನ್ನ ಸರ್ವಸ್ವ  ದ ಮೂಲ ನೆಲೆಯಲ್ಲಿ ಪಣತೊಟ್ಟ *ನಿಸ್ವಾರ್ಥ ಸೇವಾ ಮನಸ್ಸಿನ ಧೀಮಂತ ಸೇವಾ ನಾಯಕ:ಪದ್ಮರಾಜ್*

ಈಗಿನ ಆಧುನಿಕ ಯುಗದಲ್ಲಿ ರಾಜಕೀಯ ನೇತಾರರನ್ನು ಫಿಲ್ಮ್ ಸ್ಟಾರ್ ಗಳನ್ನು ದೇವರೆಂದು ಪೂಜಿಸುವ ಸೋಷಿಯಲ್ ಮೀಡಿಯಾ ಒಂದು ಕಡೆಯಾದರೆ ನಿಮ್ಮಂತ ನಿಸ್ವಾರ್ಥ ಸೇವಾ ಕಣ್ಮಣಿ ಗಳನ್ನು ಪರಿಚಯಿಸಬೇಕಾದ  ಕಾಲ ಮೂಡಿ ಬಂದಿದೆ.

 ಯುವ ಪೀಳಿಗೆ ಬದಲಾವಣೆ ಯ ಪರ್ವಕ್ಕೆ ಮುನ್ನುಡಿ ಬರೆಯಬೇಕಾಗಿದೆ.ನಿಮ್ಮಂತ ನಿಜವಾದ ಸೆಲೆಬ್ರೆಟಿ ಗಳನ್ನು ಸಮಾಜಕ್ಕೆ ಗುರುತಿಸಲು ಉತ್ಸುಕರಾಗಬೇಕಾಗಿದೆ.

ಬಡವ,ಬಲ್ಲಿದರ ಸೇವಾದಾತ. ಬಡವರ ಉದ್ದಾರಕ್ಕಾಗಿ ನಾವು ಸಲ್ಲಿಸಬೇಕಾದ ಸಾಮಾಜಿಕ ಋಣವನ್ನರಿತ ಎಲ್ಲರ ಮೆಚ್ಚುಗೆಗೆ ಪಾತ್ರ ರಾದ ನಿಜವಾದ ಜನ ಸೇವಕರು.

ತನ್ನ ಸಮಯದಲ್ಲಿ ಬಹುಪಾಲು ಸಮಯವನ್ನು ಸಮಾಜದ ಮತ್ತು ಬಡವರ ಸೇವೆಗಾಗಿ ಮೀಸಲಿಡುವ ಪುಣ್ಯವಂತನಿಗೆ ದೇವರು ಸಕಲ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಇನ್ನಷ್ಟು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಗೈಯ್ಯುವ ಶಕ್ತಿಯನ್ನು ನೀಡಲಿ ಎಂದು ದೈವ ದೇವರಲ್ಲಿ ನಮ್ಮ ಪ್ರಾರ್ಥನೆ.
ಕೃಪೆ: ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ