ಮಂಗಳೂರು ಲಕ ಸುದ್ದಿ:*ಶಿಕ್ಷಣ ಶುಲ್ಕದಲ್ಲಿ ಶೇ 50 ವಿನಾಯಿತಿ*
*ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕದಲ್ಲಿ ಶೇ 50 ರಷ್ಟು ವಿನಾಯಿತಿ ನೀಡಲಾಗುತ್ತಿದೆ*.
ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಹಾಗೂ ಪದವಿಯಲ್ಲಿ ಬಿಎ, ಬಿಕಾಂ, ಎಂಕಾಂನಲ್ಲಿ ಶಿಕ್ಷಣ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಶುಲ್ಕ ಕಟ್ಟಲು ಸಾಧ್ಯವೇ ಇಲ್ಲ ಎಂದು ಅಸಹಾಯಕರಾಗಿರುವ ತೀರಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಅವರಿಗೆ ಉಚಿತ ಶಿಕ್ಷಣ ನೀಡುವಂತೆ ಜನಾರ್ದನ ಪೂಜಾರಿ ಅವರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಆದೇಶ ನೀಡಿದ್ದಾರೆ. ಆಸಕ್ತರು ದೂ.ಸಂ. 0824-2457226, ಮೊ.ಸಂ. 9900919369 ಸಂಪರ್ಕಿಸಬಹುದು.