ಮಂಗಳೂರು: ಲಲಿತಕಲಾಮೃತ ಸುದ್ದಿ:
*ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ 2022 - 23 ನೇ ಸಾಲಿನ ಶೈಕ್ಷಣಿಕ ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭ.*
ಬ್ರಹ್ಮಶ್ರೀ ಬಿಲ್ಲವ ವೇದಿಕೆಯು 20 ನೆ ವರುಷದ ಸಂಭ್ರಮದಲ್ಲಿದೆ. ಸಂಸ್ಥೆಯ ಮಹತ್ವದ ಮತ್ತು ಪ್ರಮುಖ ಕಾರ್ಯಕ್ರಮವಾದ ಬಡ ಕುಟುಂಬದ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ಮೇ 29 ರಂದು ರವಿವಾರ ನಡೆಯಲಿದೆ.
ಆ ಪ್ರಯುಕ್ತ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದೇವೆ. *ಅಧ್ಯಕ್ಷರು, ಬ್ರಹ್ಮಶ್ರೀ ಬಿಲ್ಲವ ವೇದಿಕೆ, (ರಿ.,) ಉಳ್ಳಾಲ, ಮಂಗಳೂರು, ದ.ಕ.* ಇವರಿಗೆ ಮನವಿ ಮೂಲಕ ಅರ್ಜಿ ಸಲ್ಲಿಸಿ, ಸ್ಥಳೀಯ ಬಿಲ್ಲವ ವೇದಿಕೆಯ ಪ್ರಮುಖರ ಹೆಸರು, ಮೊಬೈಲ್ ನಂಬರ್, ಮತ್ತು ತಮ್ಮ ಮೊಬೈಲ್ ನಂಬರ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
ಯಾವುದೇ ಕಾರಣಕ್ಕೂ ಶಿಫಾರಸ್ಸು, ಸ್ವಹಿತಾಶಕ್ತಿಗಳಿಗೆ ಅವಕಾಶವಿಲ್ಲ. ವೇದಿಕೆಯ ಪದಾಧಿಕಾರಿಗಳು ಮನೆಗಳಿಗೆ ಬೇಟಿ ನೀಡಿ ಆಯ್ಕೆ ಮಾಡಲಿದ್ದಾರೆ.
ಅರ್ಜಿಯನ್ನು ಮೇ 10 ಒಳಗೆ ಸಲ್ಲಿಸ ತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ: 9743659490, 9972562858
ಧನ್ಯವಾದಗಳು..
ಅಧ್ಯಕ್ಷರು/ಪದಾಧಿಕಾರಿಗಳು/ಸರ್ವಸದಸ್ಯರು.
ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.) ಉಳ್ಳಾಲ, ದ.ಕ.