8 Sept 2020

ಗುರು ಸ್ಮರಣೆ ‌- ಶ್ರೀಯುತ ಕೆ.ರಾಮಚಂದ್ರ ಪೂಜಾರಿ ದೇರಬೈಲ್ ಇವರಿಂದ

ಕೆ.ರಾಮಚಂದ್ರ ಪೂಜಾರಿ ದೇರಬೈಲ್ ರವರಿಂದ ಯುವವಾಹಿನಿ(ರಿ) ಕಂಕನಾಡಿ ಘಟಕದ ಗುರುಸ್ಮರಣೆ ಯಲ್ಲಿ ಗುರುಸಂದೇಶ.
ಮಂಗಳೂರು ಲಕ ಸುದ್ದಿ:
ಬ್ರಹ್ಮ ಶ್ರೀ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ಯುವವಾಹಿನಿ(ರಿ) ಕಂಕನಾಡಿ ಘಟಕ ಇದರ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಕಂಕನಾಡಿಯ ಸಮೃದ್ಧಿ ಸಭಾಭವನದಲ್ಲಿ ಜರಗಿತು.

     ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾಧರ್ಶಗಳ ಬಗ್ಗೆ ಮಾತನಾಡಿದ  ರಾಮಚಂದ್ರ ಪೂಜಾರಿ ಯವರು ಗುರುಗಳು ಕೇವಲ ವ್ಯಕ್ತಿಯಲ್ಲ ಸಮಾಜದಲ್ಲಿರುವ ದೇವರು ಮತ್ತು ಧರ್ಮದ ಹೆಸರಿನಲ್ಲಿ ರುವ ಅಂಧಕಾರವನ್ನು  ಹೋಗಲಾಡಿಸಿ ಜಾತಿ ಭೇಧ ಮತ ದ್ವೇಷ ಇಲ್ಲದ ಮಾನವೀಯ ನಾರಾಯಣ ಗುರು ಧರ್ಮವನ್ನು ಜಗತ್ತಿಗೆ ಸಾರಲು ಬಂದ  ಪರ ಬ್ರಹ್ಮ ಸ್ವರೂಪ. ದೇವರು ಮನುಷ್ಯನ ರೂಪದಲ್ಲಿ ಬಂದು ಸಮಾಜಕ್ಕೆ  ಜ್ಞಾನದ ಬೆಳಕನ್ನು ನೀಡಿದ ವಿಶ್ವಗುರು ಬ್ರಹ್ಮ ಶ್ರೀ ನಾರಾಯಣ ಗುರು ಎಂದರು. ನಾವೆಲ್ಲರೂ ಗುರುಗಳ ತತ್ವಗಳನ್ನು ಅನುಸರಿಸುವ ಮೂಲಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಧನೆ ಯನ್ನು ಮಾಡ ಬೇಕಾಗಿದೆ ಎಂದರು.   

ಕಾರ್ಯಕ್ರಮದಲ್ಲಿ ಕಿಶೋರ್ ಉಜೋಡಿ, ಜಗದೀಶ್ ಸುವರ್ಣ ರವೀಂದ್ರ ಪೂಜಾರಿ, ಸುಮಾವಸಂತ್, ಹರೀಶ್ ಕೆ ಸನಿಲ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.

ಒಂದು ಕಾಲದ ಕ್ಲೀನರ್ ಇಂದು 10 ಸಾವಿರ ಮಂದಿಗೆ ಬಾಸ್*.....!!! ಜಯರಾಮ್ ಬನಾನ್


ಮಂಗಳೂರು ಲಕ ಸುದ್ದಿ:
ಹೊಟೇಲ್ ಉದ್ಯೋಗಕ್ಕೆ ಸೇರಿದ ಬಾಲಕ 150 ಹೊಟೇಲ್ ಮಾಲಕನಾದ ಕಥೆ.
ಒಂದು ಕಾಲದ ಕ್ಲೀನರ್ ಇಂದು 10 ಸಾವಿರ ಮಂದಿಗೆ ಬಾಸ್

*📝ರಾಮಚಂದ್ರ ಬರೆಪ್ಪಾಡಿ*

*ತನ್ನ* 13ನೇ ವಯಸ್ಸಿಯಲ್ಲಿ ಉದ್ಯೋಗ ಅರಸಿ ಮುಂಬೈ ಸೇರಿದ ಕಾರ್ಕಳದ ಬಾಲಕನಿಗೆ ದೊರಕಿದ್ದು ಹೊಟೇಲ್‍ನಲ್ಲಿ ಕ್ಲೀನರ್ ಕೆಲಸ. ಮುಂಬೈಯಲ್ಲಿ ಹೊಟೇಲ್ ಕ್ಲೀನರ್ ಆಗಿ ಸೇರಿದ ಬಾಲಕ ಇಂದು ಬರೋಬ್ಬರಿ 150 ಹೊಟೇಲ್‍ಗಳ ಮಾಲಕ.  
ಮುಂಬೈನ ಬೇರೆ ಬೇರೆ ಕ್ಯಾಂಟಿನ್‍ನಲ್ಲಿ 6 ವರ್ಷಗಳ ಕಾಲ ದುಡಿದ ಬಾಲಕ ಅಲ್ಲಿಂದ ದಿಲ್ಲಿಗೆ ತೆರಳಿ ಅಲ್ಲೊಂದು ಸಣ್ಣ ಟಿ ಸ್ಟಾಲ್ ತೆರೆದು ಹೊಸ ವೃತ್ತಿ ಜೀವನ ಆರಂಭಿಸಿದ. ಬಳಿಕ ಬಾಲಕನ ಬದುಕು  ಅಚ್ವರಿ ಎಂಬಂತೆ ಬದಲಾಯಿತು. ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಆ ಹಣದಲ್ಲಿ ಪ್ರಥಮವಾಗಿ ದಿಲ್ಲಿಯ ಡಿಫೆನ್ಸ್ ಕಾಲನಿಯಲ್ಲಿ ಸಾಗರ್ ಎಂಬ ಹೆಸರಿನಲ್ಲಿ ಹೊಟೇಲ್ ತೆರೆದರು. ಹಂತ ಹಂತವಾಗಿ ಮೇಲೇರಿದ ಅವರು 150 ಹೊಟೇಲ್ ಮಾಲಕನಾಗಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗದಾತರಾಗಿ ಬದುಕು ಕಟ್ಟಿಕೊಟ್ಟಿದ್ದಾರೆ. 

*ಈ ಕಥೆಯ ಹಿರೋ ಜಯರಾಮ ಬನಾನ್*. ಮೂಲತಃ ಕಾರ್ಕಳ ತಾಲೂಕಿನ ಮಠದಬೆಟ್ಟು ನಿವಾಸಿ ಜಯರಾಮರು ಇಂದು ದೇಶದ ನಾನಾ ಭಾಗಗಳಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಹೊಟೇಲ್ ಉದ್ಯಮ ನಡೆಸುವ ಮೂಲಕ ಖ್ಯಾತರಾಗಿದ್ದಾರೆ. ಮಂಗಳೂರು, ಉಡುಪಿ  *ಓಸಿಯನ್ ಪರ್ಲ್* ಸೇರಿದಂತೆ ಒಟ್ಟು ಒಂಬತ್ತು 4 ಸ್ಟಾರ್ ಹೊಟೇಲ್‍ಗಳನ್ನು ಹೊಂದಿದ್ದಾರೆ. ಅಲ್ಲದೇ ಹಲವಾರು ಪ್ರತಿಷ್ಠಿತ ಕಂಪೆನಿಗಳಲ್ಲಿ ಕ್ಯಾಂಟೀನ್ ಕೂಡ ನಡೆಸುತ್ತಿದ್ದಾರೆ. 

*ಯಶಸ್ವಿ ಹೊಟೇಲ್ ಉದ್ಯಮಿ*
ಸಾಗರ್, ಸ್ವಾಗತ್, ಶ್ರೀರತ್ನ, ಓಸಿಯನ್ ಪರ್ಲ್ ಹೆಸರಿನಲ್ಲಿ ಪ್ರಮುಖ ನಗರಗಳಲ್ಲಿ ಹೊಟೇಲ್ ಹೊಂದಿರುವ ಇವರು ಯಶಸ್ವಿ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದಾರೆ. ಸದ್ಯದಲ್ಲಿ ಸಿಂಗಾಪುರ, ದುಬೈ,  ನ್ಯೂಯಾರ್ಕ್ ನಲ್ಲಿ ಹೊಟೇಲ್ ಪ್ರಾರಂಭಿಸಲಿದ್ದಾರೆ. ಇಂದಿಗೂ ದಿನದ 16 ಗಂಟೆ ದುಡಿಯುತ್ತಿರುವ ಜಯರಾಮರು ಅನೇಕರಿಗೆ ಪ್ರೇರಣೆ, ಸ್ಫೂರ್ತಿ. 

*ಸಂಪಾದನೆಯಲ್ಲಿ 10%  ಧಾರ್ಮಿಕ ಕ್ಷೇತ್ರಕ್ಕೆ*
ದೇವರ ಅನುಗ್ರಹದಿಂದ ತಾನು ಈ ಹಂತಕ್ಕೆ ಏರಿದ್ದೇನೆ ಎನ್ನುವ ಜಯರಾಮ ಬನಾನ್ ತನ್ನ ಸಂಪಾದನೆಯ ಶೇ.10ರ ಪಾಲನ್ನು ಧಾರ್ಮಿಕ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದಾರೆ. ಕುಷ್ಠ ರೋಗಿಗಳಿಗೆ ನೆರವು ನೀಡುತ್ತಿರುವುದು ಬನಾನ ಅವರ ಮಾನವೀಯ ಕಾರ್ಯಕ್ಕೆ ಸಾಕ್ಷಿ.

*ಸಿಬ್ಬಂದಿ ಕಷ್ಟಕ್ಕೆ ಸ್ಪಂದನೆ*
ಸಿಬ್ಬಂದಿ ವರ್ಗ ಕಷ್ಟದಲ್ಲಿದ್ದರೆ ತತ್‍ಕ್ಷಣ ಸ್ಪಂದಿಸಿ ಅಂತವರಿಗೆ ನೆರವಾಗುತ್ತಾರೆ. ಸಿಬ್ಬಂದಿ ಕುರಿತಾಗಿ ವಿಶೇಷ ಕಾಳಜಿ ಹೊಂದಿರುವ ಅವರು ಸ್ನೇಹಿತರಂತೆಯೇ ಬೆರೆಯುತ್ತಾರೆ ಎಂದು ಕಾರ್ಕಳದ ಸಿಬ್ಬಂದಿಯೋರ್ವರು ಹೇಳುತ್ತಾರೆ.  

*ಸ್ಟಾಫ್ ನನ್ನ ಸ್ಟ್ರೆಂಥ್*
ನಮ್ಮಲ್ಲಿಗೆ ಉದ್ಯೋಗಕ್ಕೆ ಬಂದವರು ಬಿಟ್ಟು ಹೋಗುವುದು ವಿರಳ. 35 ವರ್ಷಗಳ ಹಿಂದೆ ಹೊಟೇಲ್‍ಗೆ ಸೇರಿದವರು ಈಗಲೂ ಇದ್ದಾರೆ. ಸ್ಟಾಫ್ ನನ್ನ ಸ್ಟ್ರೆಂಥ್. ದೇವರ ಅನುಗ್ರಹ, ಕಠಿಣ ಪರಿಶ್ರಮ, ಸಿಬ್ಬಂದಿ ಸಹಕಾರ, ಶುಚಿತ್ವ, ಗ್ರಾಹಕರ ಬೆಂಬಲದಿಂದಾಗಿ ಹೊಟೇಲ್ ಉದ್ಯಮ ವಿಸ್ತಾರವಾಗಿ ಬೆಳೆಯುವಂತಾಗಿದೆ ಎನ್ನುತ್ತಾರೆ ಜಯರಾಮ್ ಬನಾನ್.