25 Nov 2019

ಬಹುಮುಖ ಕಲಾವಿದ...

#ತುಳುನಾಡಿನ_ಮಣ್ಣಿನ_ಹುಡುಗ_ಮುದ್ದು_ಮುಖದ_ಚೆಲುವ.
      #ಸ್ತ್ರೀ_ಪಾತ್ರದಾರಿ
 #ಸತೀಶ್_ಪೂಜಾರಿ_ಅಳಿಯೂರು
      ದಿ|| ಶಿವಪ್ಪ ಪೂಜಾರಿ ಹಾಗೂ ನೀಲಮ್ಮ ಪೂಜಾರ್ತಿಯವರ ಪುತ್ರ ರಂಗಭೂಮಿ ಕಲಾವಿದ 
  #ಸತೀಶ್_ಪೂಜಾರಿ_ಅಳಿಯೂರು
      ಕಲೆ ಎಂಬುದು ಪ್ರಾರ್ಥಿಸಿದರೆ ಬರುವಂತದು ಅಲ್ಲ.ಅದು ಹುಟ್ಟಿನಿಂದಲ್ಲೆ ರಕ್ತದಲ್ಲಿ ಬಂದಿರುತ್ತದೆ..ಅದಕ್ಕೆ ಜೀವ ತುಂಬುವ ಕೆಲಸ ಮಾಡಬೇಕಷ್ಟೆ. ಅಂತಹ ಕಲೆಗೆ ಜೀವ ತುಂಬಿದ ಪರಿಶ್ರಮ ಅವರನ್ನು ಸನ್ಮಾನಿಸುವ ಮೂಲಕ ಎದ್ದು ಕಾಣುತ್ತದೆ.
       ಸತೀಶ್ ಪೂಜಾರಿ ಅಳಿಯೂರು ಇವರಿಗೆ ಚಿಕ್ಕ ವಯಸ್ಸಿನಿಂದಲ್ಲೂ ನಾಟಕಗಳಲ್ಲಿ ಬಹಳ ಆಸಕ್ತಿ ಹೊಂದಿದ್ದು .ಇವರಿಗೆ ಶನೇಶ್ವರ ಪೂಜಾ ಸಮಿತಿಯಿಂದ ಮೊಟ್ಟ ಮೊದಲ ಬಾರಿಗೆ ಶನೇಶ್ವರ  ದೇವಸ್ಥಾನ ಅಳಿಯೂರು ನಲ್ಲಿ ರಮೇಶ್ ಆಚಾರ್ಯ ನೂರಲ್ ಬೆಟ್ಟು ರವರ ನಿರ್ದೇಶನದಲ್ಲಿ ಮೂಡಿಬಂದ #ದೇವೆರ್ ಗತಿ ಎಂಬ  ನಾಟಕ ಮಾಡುವ ಮೂಲಕ ರಂಗ ಭೂಮಿಗೆ ಮೊದಲ ಹೆಜ್ಜೆಯನ್ನು‌ ಇಟ್ಟರು.
         #ಗಲಿಗೆದ_ಉಲಾಯಿ, #ಎನ್ನ_ಕಥೆ_ಬರೆಪಾರ.ಹೀಗೆಯೇ ಹಲವಾರು ನಾಟಕಗಳು ರಮೇಶ್ ಆಚಾರ್ಯ ನೂರಲ್ ಬೆಟ್ಟು ರವರ ನಿರ್ದೇಶನದಲ್ಲಿ ಮೂಡಿ ಬಂದು ಅದರಲ್ಲಿ ಸತೀಶ್ ಪೂಜಾರಿಯವರ ಪಾತ್ರ ಕೂಡ ಪ್ರಮುಖವಾಗಿರುತ್ತದೆ.

  ಹಾಗೂ ವಿಲಾಸ್ ಕುಮಾರ್ ರವರ ನಿರ್ದೇಶನದಲ್ಲಿ ಕೂಡ ಮೂಡಿಬಂದ #ಕಥೆ_ಕಟ್ಟುವೆರ್, #ಗಗ್ಗರ,#ತಮ್ಮನ್ನ, #ಪನಾರ_ಧೈರ್ಯ_ಇಜ್ಜಿ.ಹೀಗೆಯೇ ಅನೇಕ ಅನೇಕ ನಾಟಕಗಳಲ್ಲಿ ಭಾಗವಹಿಸಿದ ಕೀರ್ತಿ ಇವರದ್ದು.
      ಹಾಗೂ ದಿನಾಕರ್ ಭಂಡಾರಿ ಕಾನಂಜರ್ ರವರ ನಿರ್ದೆಶನದಲ್ಲಿ - #ಪಿರ_ಬನ್ನಾಗ ,#ತೂವಾರ #ಬರ್ಪೆರ್,#ಗುಂಪುಡ್_ಒರಿ_ಗೋವಿಂದೆ.,#ಒಟ್ರಸಿ #ಮಂಡೆ_ಬೆಚ್ಚ.
    ಹಾಗೂ ಗಣೇಶ್ ಬಿ ಅಳಿಯೂರು ರವರ ತಂಡದೊಂದಿಗೆ #ಗೌರಿ_ಗಣಪ, #ನಂಕ್_ನಾಸಿಬ್ #ಇಜ್ಜಿ, #ಪಾರಿಜಾತ,  #ಬರಿತ್ತ_ಇಲ್ಲದ_ಭಾರತಿ, #ಮೂರ್ತೆ_ಮುದರ್ , #ನಮ_ಮೂಲು_ಬಾಡಿಗೆಗ್ , 
    ಹೀಗೆಯೇ ಸರಿ ಸುಮಾರು "1500 " ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು.
ಹೆಣ್ಣು ಕುಲವೇ ನಾಚುವಂತ ಪಾತ್ರಗಳನ್ನು ಮಾಡುತ್ತಿದ್ದರು.ಒಂದು ಹಾಡಿಗೆ #ಹತ್ತು_ಸೀರೆಗಳನ್ನು ಬದಲಾಯಿಸಿ ಪ್ರೇಕ್ಷಕರನ್ನೇ ಮೂಕಸ್ಮಿತವಾಗಿ ಮಾಡಿ ಎಲ್ಲರ ಮನ ಗೆದ್ದವರು.

ಇವರ ಪ್ರತಿಭೆಯನ್ನು ಕಂಡು ಹಲಾವರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

 ಇವರ ಅಭಿನಯವನ್ನು ಗುರುತಿಸಿ ಇವರಿಗೆ ಮೇಕಪ್ ಯಿಂದ ಹಿಡಿದು ಪ್ರತಿಯೊಂದು ವಿಷ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸಹಕರಿಸಿದ ಇವರ ಗುರು ಅಚ್ಯುತ ಮಾರ್ನಾಡ್ ರವರು.
       ಹಾಗೂ ಇವರ ಪ್ರತಿಭೆಯನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಿ ಎಲ್ಲಾ ಕಲಾ ತಂಡಗಳಲ್ಲಿ ಅಭಿನಯಿಸಲು ಕಾರಣರಾದವರು ದಿ|| ಸುರೇಂದ್ರ ಕುಮಾರ್  ಕಲಾತ್ರಪಾದೆ.
   ಇವರ ತಂಡಗಳೊಂದಿಗೆ - #ಮೇಘಾ_ಮುರರಿ
#ಬೈಲಾ_ಕುರಾಲ್,  #ಗುರ್ಕರೆ_ಗುವೆಲ್ಡ್,  #ದೇವೆರ್ #ಮುನಿಂಡ,  #ಕಾಲ_ಕಲ್ಜಿಗ #ಬಾಜೆಲ್ #ಬಾಬು,#ದ್ರುವ_ರಾಶಿ, #ಚಂಡಮಾರುತ,ಹೀಗೆಯೇ ಹಲಾವರು ನಾಟಕಗಳಲ್ಲಿ ಅಭಿನಯಿಸಿದರು..
  
ರಂಗಭೂಮಿಗೆ ಮೊದಲು ಹೆಜ್ಜೆ ಇಡಲು ಅವಕಾಶ ಕೊಟ್ಟ ಶನೇಶ್ವರ ಪೂಜಾ ಸಮಿತಿ ಅಳಿಯೂರು ಇವರಿಗೆ ಹೃದಯಪೂರ್ವಕವಾಗಿ ಕೃತಜ್ಞರಾಗಿರುತ್ತಾರೆ.

    ಇವರ ಪ್ರತಿಭೆಯು ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ.ರಂಗಭೂಮಿಯಲ್ಲಿ ಇನ್ನಷ್ಟೂ  ಹೆಸರು ಬರುವಂತಾಗಲಿ ಎಂಬುದು ನಮ್ಮ ಆಶಯ.
     ತುಳುನಾಡಿನ ಕೀರ್ತಿ ಪಾತಕೆಯನ್ನು ಬಹು ಎತ್ತರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿ.
   #ಶುಭವಾಗಲಿ.
@ಬಿಲ್ಲವ nivas

ಸ್ವ ಉದ್ಯೋಗ ಮಾಹಿತಿ ಶಿಬಿರ

*ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಗ್ರಾಮಚಾವಡಿ* ಇದರ ಆಶ್ರಯದಲ್ಲಿ *ಸ್ವ - ಉದ್ಯೋಗ ಮಾಹಿತಿ ಶಿಬಿರ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ಶಿಬಿರ* *ದಿನಾಂಕ 24-11-2019 ಆದಿತ್ಯವಾರ* ನಾರಾಯಣ ಗುರು ಸಮುದಾಯ ಭವನ ಗ್ರಾಮಚಾವಡಿ ಕೊಣಾಜೆಯಲ್ಲಿ ಜರಗಿತು‌‌. ಶಿಬಿರವನ್ನು ಪಿ.ಎ ಇಂಜಿನಿಯರಿಂಗ್ ಕಾಲೇಜು ಇದರ ಪ್ರಾದ್ಯಾಪಕರಾದ *ಡಾ| ಶರ್ಮಿಳಾ ಭೋಜ ಪೂಜಾರಿ* ಉದ್ಘಾಟಿಸಿದರು‌.‌ ಸ್ವ - ಉದ್ಯೋಗವನ್ನು ಮಾಡಲು ಆರ್ಥಿಕ ಬಂಡವಾಳಕ್ಕಿಂತ ನಮ್ಮಲ್ಲಿರುವ ಅಭಿರುಚಿ ಅತೀ ಅಗತ್ಯ. ಉದ್ಯೋಗಕ್ಕಾಗಿ ಅಲೆದಾಡುವ ಬದಲಾಗಿ ಉದ್ಯೋಗದಾತರಾಗುವ ಬಗ್ಗೆ ನಾವು ಅಲೋಚಿಸಬೇಕು ಎಂದು ಉದ್ಘಾಟಣಾ ಭಾಷಣದಲ್ಲಿ ತಿಳಿಸಿದರು.. ಮುಖ್ಯ ಅತಿಥಿಗಳಾಗಿ ಬ್ರೈಟ್ ಎಚ್‌. ಆರ್. ಸೊಲ್ಯೂಷನ್ ಇದರ ಮಾಲಕರಾದ *ಶ್ರೀ ಮೋಹನ್ ರಾಜ್*, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ *ಶ್ರೀ  ಅಣ್ಣಪ್ಪ‌. ಪಿ* ಉಪಸ್ಥಿತರಿದ್ದರು‌‌‌‌‌.   ಸಂಪನ್ಮೂಲ ವ್ಯಕ್ತಿಗಳಾಗಿ ಬಿರುವೆರ್ ಕುಡ್ಲ ಮಹಿಳಾ ಘಟಕದ ಅಧ್ಯಕ್ಷರಾದ *ಶ್ರೀಮತಿ  ವಿದ್ಯಾ ರಾಕೇಶ್* ಹಾಗೂ *ಶ್ರೀಮತಿ ರೇಖಾ ಗೋಪಾಲ್* ಸ್ವ ಉದ್ಯೋಗ ತರಬೇತಿ ನೀಡಿದರು‌. ಸಿಡಾಕ್ ಜಿಲ್ಲಾ ಕೈಗಾರಿಕಾ ಕೇಂದ್ರ ಯೆಯ್ಯಾಡಿ ಇದರ ಸಂಪನ್ಮೂಲ ವ್ಯಕ್ತಿಯಾದ *ಶ್ರೀ ಸತೀಶ್ ಮಾಬೆನ್* ಮಂಗಳೂರು ಸ್ವ- ಉದ್ಯೋಗ ನಡೆಸಲು ಸರಕಾರದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.‌‌‌  *ವಿಜಯ ಕುಮಾರ್ ಪಾವೂರು ಭಂಡಾರಮನೆ* ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿಯಾದ *ರವೀಂದ್ರ ಬಂಗೇರ* ಅತಿಥಿಗಳನ್ನು ಸ್ವಾಗತಿಸಿದರು. *ಅಜಿತ್ ಪೂಜಾರಿ* ಕಾರ್ಯಕ್ರಮ ನಿರೂಪಿಸಿದರು. *ಶ್ರೀಮತಿ ಬಬಿತಾ ಬಾನಬೆಟ್ಟು* ವಂದಿಸಿದರು..

ಬಹುಮುಖ ಪ್ರತಿಭೆ..

ನ.30ರಂದು #ಅನಿತಾ #ಪೂಜಾರಿ ಅವರಿಗೆ #ಎಂ.#ಬಿ.#ಕುಕ್ಯಾನ್ #ಬಂಗಾರದ #ಪದಕ ಪ್ರದಾನ..
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ 2019 ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ. ಪೂಜಾರಿ ತಾಕೊಡೆ ಅವರು ಚೊಚ್ಚಲ ‘ಎಂ.ಬಿ.ಕುಕ್ಯಾನ್’ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

ಇದೇ ಬರುವ ನವೆಂಬರ್ 30ರಂದು ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರಗುವ ಸಮಾರಂಭದಲ್ಲಿ ಈ ಪದಕವನ್ನು ವಿಶ್ವವಿದ್ಯಾಲಯದ ವತಿಯಿಂದ ಪ್ರದಾನಿಸಲಾಗುವುದು. ಮುಖ್ಯ ಅತಿಥಿsಗಳಾಗಿ ಹಿರಿಯ ಸಾಹಿತಿ ಎಂ.ಬಿ.ಕುಕ್ಯಾನ್, ರಂಗತಜ್ಞ ಜಿ.ಲೋಕೇಶ್, ಸಾಹಿತಿ ಅನುಬೆಳ್ಳೆ, ಅಖಿಲ ಭಾರತೀಯ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಾಹಿತಿ ಶಾಂತಾರಾಮ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೂಲತಃ ಮೂಡಬಿದರೆಯ ತಾಕೊಡೆಯವರಾದ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಇವರು ಪ್ರತಿಭಾವಂತ ವಿದ್ಯಾರ್ಥಿ. ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. ಎಂ.ಎ. ಪದವಿಗೆ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಿಂದ ಸಿದ್ಧಪಡಿಸಿದ, ಡಾ.ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆ ಶೋಧ ಸಂಪ್ರಬಂಧ, ‘ಸವ್ಯಸಾಚಿ ಸಾಹಿತಿ’, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ‘ಮೋಹನ ತರಂಗ’ ಹೊಸ ಪ್ರಕಟಿತ ಕೃತಿಗಳಾಗಿವೆ. ‘ಅಂತರಂಗದ ಮೃದಂಗ’ ಕೃತಿಗೆ ಜಗಜ್ಯೋತಿ ಕಲಾವೃಂದ (ರಿ) ದಿಂದ ‘ಶೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸಿ’್ತ ಹಾಗೂ ಶಿಕಾರಿಪುರದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿಯೂ ಭಾಗವಹಿಸಿದ್ದಾರೆ. ಅನಿತಾ ಪೂಜಾರಿ ಅವರ ಸಾಧನೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಅವರು ಮನಪೂರ್ವಕ ಶ್ಲಾಘಿಸಿದ್ದಾರೆ.