9 Jun 2021

*ಸಜ್ಜನರು ಅಂದರೆ ಯಾರು*??ದೇವರಲ್ಲಿ ದೇವರ ಭಕ್ತರಲ್ಲಿ ಭಕ್ತಿ ಯನ್ನು ಮಾಡುವವರು*,*ಭಗವಂತ ಇದ್ದಾನೆ ಎನ್ನುವ ನಂಬಿಕೆ ಶ್ರದ್ಧೆ ಉಳ್ಳವರು*,*ಹರಿಭಕ್ತರ,**ದೊಡ್ಡವರ,ನಿಂದನೆ ಮಾಡದೇ ಇರುವುದು.......

*ಸಜ್ಜನರು ಅಂದರೆ ಯಾರು*??
****
*ದೇವರಲ್ಲಿ ದೇವರ ಭಕ್ತರಲ್ಲಿ ಭಕ್ತಿ ಯನ್ನು ಮಾಡುವವರು*,
*ಭಗವಂತ ಇದ್ದಾನೆ ಎನ್ನುವ ನಂಬಿಕೆ ಶ್ರದ್ಧೆ ಉಳ್ಳವರು*,
*ಹರಿಭಕ್ತರ,*
*ದೊಡ್ಡವರ,ನಿಂದನೆ ಮಾಡದೇ ಇರುವುದು ಹಾಗೂ ತಮ್ಮ ಆತ್ಮ ಪ್ರಶಂಸೆ ಮಾಡದೇ ಇರುವಂತಹವರು*
*ಸದಾ ಬಿಂಬರೂಪಿ ಪರಮಾತ್ಮನ ಧ್ಯಾನ ಮಾಡತಕ್ಕವರು*
*ಹಾಳು ಹರಟೆ ಬಿಟ್ಟು ಪರಮಾತ್ಮನ ಸ್ಮರಣೆಯನ್ನು ಸದಾ ಮಾಡುವವರು*
*ಮತ್ತು ಸಂಯಮ ಗುಣವನ್ನು ಉಳ್ಳವರು*
ಇಂತಹ ಗುಣಗಳನ್ನು ಹೊಂದಿದವರ ಜೊತೆಯಲ್ಲಿ ಎಂದಿಗು ವಿರಸ ಬೇಡ.
*ಅವರ ಜೊತೆಯಲ್ಲಿ ಜಗಳವಾಡಿದರೆ, ದೂರವಾದರೆ ಭಗವಂತನ ಧ್ಯಾನ ಮಾಡುವ ಅವರ ಸಂಗ ನಮಗೆ ಸಿಗದು*.
*ಅವರ ಜೊತೆಯಲ್ಲಿ ಇದ್ದರೆ ನಮಗೆ ಸಹ ಅದೇ ರೀತಿಯಲ್ಲಿ ಭಗವಂತನ ಸ್ಮರಣೆಯನ್ನು ಮಾಡುವ ಬುದ್ದಿ ಬರಬಹುದು* ಅದಕ್ಕಾಗಿ ಅಂತಹವರ ಸಂಗ ಸದಾ ಇರಲಿ ಅಂತ ಹೇಳುತ್ತಾರೆ.

🙏🙏
*ರಂಗ ನಿನ್ನ ಕೊಂಡಾಡುವ* *ಮಂಗಳಾತ್ಮರ*
*ಸಂಗ ಸುಖವಿತ್ತು ಕಾಯೋ ಕರುಣಾ ಸಾಗರ*🙏

🌹🌹🌹🌹🌹🌹
ಸಂಗ್ರಹ: ಸೋಶಿಯಲ್ ಮೀಡಿಯಾದಿಂದ...

No comments:

Post a Comment