8 May 2020

ಸಾಧನೆ ಪಥದಲ್ಲಿ....ನಿಖಿತಾ ಪೂಜಾರಿ ಎರ್ಲಪಾಡಿ

*ನಿರೂಪಣೆಯ ಹಾದಿಯಲಿ ಮುನ್ನಡೆಯುತ್ತಿರುವ ಸ್ವರ ಶಾರದೆ..ನಿಖಿತಾ ಪೂಜಾರಿ ಎರ್ಲಪಾಡಿ.*
ಮನುಷ್ಯನಲ್ಲಿ ಛಲವೆಂದು ಬಂದರೆ ಆತ ಎಷ್ಟರ ಮಟ್ಟಿಗೆ ಬೇಕಾದರು ಮೇಲೆರಬಲ್ಲ. ಕೆಲವೊಂದಿಷ್ಟು ಜನರ ಚುಚ್ಚು ಮಾತುಗಳು, ತತ್ಸಾರದ ನುಡಿಯಿಂದ ಕೆಲವೊಂದಿಷ್ಟು ಜನ ದುರ್ಬಲರಾದರೆ ,ಇನ್ನೂ ಕೆಲವರು ಹಠ ಛಲದಿಂದ ಪ್ರಬಲಗೊಳ್ಳುತ್ತಾರೆ.. ಇಲ್ಲೊಬ್ಬರು ನಿರೂಪಣೆಯ ಹಾದಿ ಹಿಡಿದು ನಿರೂಪಣಾ ರಂಗದಲ್ಲಿ ಛಾಪು ಮೂಡಿಸಲು ಹೊರಟ್ಟಿದ್ದಾರೆ ಅವರೇ ಕಾರ್ಕಳ ಬೈಲೂರಿನ ,ನಿಖಿತಾ ಪೂಜಾರಿ ಎರ್ಲಪಾಡಿ.
   ದಿ.ಉಮೇಶ್ ಪೂಜಾರಿ ಹಾಗೂ ಸುಮಿತ್ರ ಪೂಜಾರಿ ದಂಪತಿಗಳ ಇಬ್ಬರು ಹೆಣ್ಣುಮಕ್ಕಳಲ್ಲಿ ಎರಡನೆಯವರಾದ ಇವರು ದಿನಾಂಕ 05/05/2001 ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಂತರಗೋಳಿ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ಏರ್ಲಪಾಡಿಯಲ್ಲಿ ಮುಗಿಸಿ,ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸರಕಾರಿ ಪದವಿ ಪೂರ್ವ ಕಾಲೇಜ್ ಬೈಲೂರಿನಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ..ಪ್ರಸ್ತುತ ಎ.ಜೆ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್ ಅ್ಯಂಡ್ ಮ್ಯಾನೆಜ್ಮೆಂಟ್ನಲ್ಲಿ ಪ್ಯಾರಮೆಡಿಕಲ್ ವಿಭಾಗದಲ್ಲಿ ನ್ಯೂರೋಸೈನ್ಸ್ ಕಲಿಯುತ್ತಿದ್ದಾರೆ..

  ಶಾಲಾ ದಿನಗಳಿಂದ ಸಾಂಸ್ಕೃತಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.. ಮೈಸೂರಿನಲ್ಲಿ ನಡೆದ ಜಾನಪದ ನೃತ್ಯದಲ್ಲಿ ಇಂಗ್ಲಿಷ್ ಶಿಕ್ಷಕರಾದಂತಹ ಪ್ರಕಾಶ್ ನಾಯಕ್ ಹಾಗೂ ಚಿತ್ರಕಲಾ ಶಿಕ್ಷಕಿ ಸುಜಾತ ಇವರ ಮಾರ್ಗದರ್ಶನದೊಂದಿಗೆ   ಪ್ರಥಮ ಸ್ಥಾನ ಪಡೆದು ,ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದು ಕಾರ್ಕಳ ತಾಲೂಕಿಗೆ ಹೆಸರನ್ನು ತಂದಿರುತ್ತಾರೆ..ಚಿಕ್ಕ ವಯಸ್ಸಿನಲ್ಲಿಯೇ ಧಾರ್ಮಿಕ ಒಲವನ್ನು ಹೊಂದಿದಂತಹ ಇವರು ಸತ್ಯಶ್ರೀ ಮಹಿಳಾಭಜನಾ ಮಂಡಳಿಯಲ್ಲಿ ಕುಣಿತಾ ಭಜನೆಯಲ್ಲಿ ಭಾಗವಹಿಸುತ್ತಿದ್ದಾರೆ..

ರಂಗಭೂಮಿ ಕಲಾವಿದೆಯಾಗಿಯು ಬಣ್ಣ ಹಚ್ಚಿದ ಇವರು ಶಾಲೆಯಲ್ಲಿ ಪೌರಾಣಿಕ ನಾಟಕದಲ್ಲಿ ಅಭಿನಯಿಸಿ, 4 ತುಳು ನಾಟಕಗಳಿಗೂ ಬಣ್ಣ ಹಚ್ಚಿದ್ದಾರೆ.. ಮುಗಲ್ ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ.ಅದಲ್ಲದೆ ಸ್ಯಾಕ್ಸೋಪೋನ್ ನುಡಿಸುವುದನ್ನು ಶಿವರಾಮ ದೇವಾಡಿಗರೊಂದಿಗೆ ಕಲಿಯುತ್ತಿದ್ದಾರೆ,ಸಂಗೀತವನ್ನು ಪೂರ್ಣಿಮಾ ಗೋರೆಯವರೊಂದಿಗೆ ಕಲಿತಿದ್ದಾರೆ..

  10ನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಪಥಮವಾಗಿ ಸಭಾಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಇವರ ನಿರೂಪಣಾ ಶೈಲಿಗೆ ಮನಸೋತ ಹಲವಾರು ಗಣ್ಯರು, ಶಿಕ್ಷಕರು ,ಕುಟುಂಬವರ್ಗ ಹಾಗೂ ಗೆಳೆಯರು ಹಾಡಿ ಹೊಗಳಿದ್ದಾರೆ..ನಂತರದ ದಿನಗಳಲ್ಲಿ ಹಲವಾರು ಸಭೆ ಸಮಾರಂಭ,ಮೆಹಂದಿ ಮುಂತಾದ ಕಾರ್ಯಕ್ರಮಗಳಲ್ಲಿ ನಿರೂಪಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.ಕಳೆದ 5 ತಿಂಗಳಿನಿಂದ ವಿ4 ನ್ಯೂಸ್ ದೃಶ್ಯ ಮಾದ್ಯಮದಲ್ಲಿ ನಿರೂಪಣಾ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಇವರು ,ನಮ್ಮ ಕುಡ್ಲ 24×7 ನಲ್ಲಿ ಪ್ರಸಾರವಾಗುತ್ತಿರುವ ಸುರೇಂದ್ರ ಮೋಹನ್ ಸಾರಥ್ಯದ "ತುಳುನಾಡ ಬಂಗಾರ್ ಗರೋಡಿಲು" ಸಾಕ್ಷಚಿತ್ರದ ನಿರೂಪಕಿಯಾಗಿದ್ದಾರೆ…
   ತನ್ನ ಸ್ಪಷ್ಟ ಹಾಗೂ ದೃಢ ನಿಲುವಿನಿಂದ ನಿರೂಪಣೆಯಲ್ಲಿ ಮಿಂಚುತ್ತಿರುವ ಈ ಪ್ರತಿಭೆ ಇನ್ನೂ ಹಲವಾರು ಸಾಧನೆಯನ್ನು ಮಾಡಿ ಮನೆಯವರು ಹಾಗೂ ಊರಿನವರಿಗೆ ಕೀರ್ತಿಯನ್ನು ತಂದು ಕೊಡಲಿ ಎಂದು ಹಾರೈಸೋಣ..
ಬರಹ :   ನೀತು ಬೆದ್ರ