16 Mar 2020

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಗೆ - ಭಕ್ತಿ ಪೂರ್ವಕ ಸ್ಥಳದಾನ


ಪುತ್ತೂರು: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ‌ ಬೈದೆತಿ ಮೂಲ ಸಮಾದಿ‌ ಇರುವ ಪಡುಮಲೆ ಎರುಕೊಟ್ಯ,  ಬೆರ್ಮೆರೆ ಗುಡಿ,‌ ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳಿರುವ ಸ್ಥಳದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬದ 9ಜನ ಹಕ್ಕುದಾರರು 16-03-2020 ರಂದು‌ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿರುವ ಉಪನೋಂದಣೆ ಅಧಿಕಾರಿ ಕಛೇರಿಗೆ ಬಂದು ಈ  ಪಡುಮಲೆಯ ದೇಯಿ ಬೈದೆದಿ ಸಮಾಧಿಯ ಪುಣ್ಯ ಸ್ಥಳವನ್ನು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಕೆ.ಹರಿಕೃಷ್ಣ ಬಂಟ್ವಾಳರಿಗೆ ಇದರ ಹಕ್ಕು ಪತ್ರದ ದಾಖಲೆಗಳನ್ನು ದಾನದ ರೂಪದಲ್ಲಿ  ರಿಜಿಸ್ಟ್ರಾರ್ ಕಚೇರಿಯ ಮುಂದೆಯೇ ಭಕ್ತಿ ಪೂರ್ವಕವಾಗಿ  ಸ್ಥಳದ ಹಕ್ಕುಪತ್ರವನ್ನು‌ ಪಡುಮಲೆಯ ಅಭಿವೃದ್ಧಿ ಸಮಿತಿಯ ಹೆಸರಿಗೆ  ಹಸ್ತಾಂತರಿಸಿದರು.ಅವರಿಗೆ ಮತ್ತು ಅವರ ಸಮಸ್ತ ಕುಟುಂಬಕ್ಕೆ ಕಾರಣಿಕ ಶಕ್ತಿಗಳಾದ ಕೋಟಿ ಚೆನ್ನಯ್ಯರ ಮತ್ತು ಮಹಾಮಾತೆ ತಾಯಿ ದೇಯಿಬೈದೆದಿಯ ಅನುಗ್ರಹ ಕೃಪೆ ಸದಾ ಇರುವುದು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ, ಪ್ರ.ಕಾರ್ಯದರ್ಶಿ ಪುತ್ತೂರಿನ ಶ್ರೀಧರ ಪಟ್ಲ ,ಖಂಚಾಚಿ ಬೆಳ್ತಂಗಡಿಯ ಶೈಲೇಶ್ ,ಸಂಚಾಲಕರಾದ ರತನ್ ನ್ಯಾಕ್,ಗ್ರಾಮ ಪಂಚಾಯತು ಸದಸ್ಯ ಗುರು ಪ್ರಸಾದ್ ರೈ , ಹಾಗೂ ನವೀನಚಂದ್ರ ರೈ ಮುಂತಾದವರು ಪ್ರಮುಖರು ಉಪಸ್ಥಿತರಿದ್ದರು.

ಜೊತೆಗೆ ಸಹಕರಿಸಿದ ಬಹುಭಾಷಾ ನಟರಾದ ಶ್ರೀಯುತ ವಿನೋದ್ ಆಳ್ವರಿಗೆ ಅಭಿವಂದನೆಗಳು.

ಪಡುಮಲೆ ಸತ್ಯ ಧರ್ಮದ ಬೀಡು...ಅದೇ ಕೋಟಿ ಚೆನ್ನಯ್ಯರ ಜನ್ಮಸ್ಥಳ

ಪುತ್ತೂರು:ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ‌ ಬೈದೆತಿ ಮೂಲ ಸಮಾದಿ‌ ಇರುವ ಪಡುಮಲೆ ಎರುಕೊಟ್ಯ,  ಬೆರ್ಮೆರೆ ಗುಡಿ,‌ ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳಿರುವ ಸ್ಥಳದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಇಂದು‌ ಪುತ್ತೂರು ನೊಂದನಿ‌ ಕಚೇರಿಯಲ್ಲಿ ಸ್ಥಳದ ಹಕ್ಕುಪತ್ರವನ್ನು‌ ಪಡುಮಲೆಯ ಅಭಿವೃದ್ಧಿ ಸಮಿತಿಯ ಹೆಸರಿಗೆ ದಾನದ ರೂಪದಲ್ಲಿ‌‌ ಹಸ್ತಾಂತರಿಸಿದರು.ಜೊತೆಗೆ ಸಹಕರಿಸಿದ ಬಹುಭಾಷಾ ನಟರಾದ ಶ್ರೀಯುತ ವಿನೋದ್ ಆಳ್ವರಿಗೆ ಅಭಿವಂದನೆಗಳು.