*ಮಂಗಳೂರು ವಿಶ್ವ ವಿದ್ಯಾ ನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ*
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಮ್ಮೆಲ್ಲರ ಆರಾಧ್ಯಮೂರ್ತಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ದ ಸ್ಥಾಪನೆ ಗಾಗಿ ಈಗಾಗಲೇ ಸರಕಾರದ ವತಿಯಿಂದ ಒಂದು ಎಕರೆ ಜಾಗ ಮಂಜೂರಾಗಿರುತ್ತದೆ. ವಿಶ್ವ ವಿದ್ಯಾನಿಲಯವೊಂದರಲ್ಲಿ ವಿಶ್ವ ಮಾನವ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸ್ವಂತ ನಿವೇಶನದಲ್ಲಿ ನಿರ್ಮಾಣವಾಗುವ ಅದ್ಭುತ/ಆಕರ್ಷಕ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ವನ್ನು *2020 ಜನವರಿ* ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಸಂಧರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿ ಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಹಾಗೂ ಶ್ರೀ ಗುರುಗಳ ತತ್ವ ಆದರ್ಶಗಳ ಅಧ್ಯಯನ ದೊಂದಿಗೆ ವಿಶ್ವದಾದ್ಯಂತ ಗುರುಸೂಕ್ತಿಗಳ ಪ್ರಚಾರ ಕ್ಕಾಗಿ ಸೂಕ್ತವೇದಿಕೆ ನಿರ್ಮಾಣ ಕ್ಕೆ ಸರ್ವರ ಸಹಕಾರ ಕೋರಲಾಗಿದೆ.
*ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಶ್ರೀ ನಾರಾಯಣ ಗುರು ಅಧ್ಯಯನ ಪೀಠ*