!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ!!
ಮಂಗಳೂರು :ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ
#ಕೋವಿಡ್_19 ಲಾಕ್ ಡೌನ್ ಸಂಕಷ್ಟದ ಸ್ಥಿತಿಯನ್ನು ಗಮನಿಸಿ ಪ್ರತಿದಿನ ಮಂಗಳೂರು ನಗರದ ಕೂಳೂರು,ಪಂಜಿಮೊಗರು,ಎಂ.ಬಿ.ಶೆಟ್ಟಿ ಸರ್ಕಲ್, ಬರ್ಕೆ,ಮಣ್ಣಗುಡ್ಡ,ಉರುಂದಾಡಿ ಭಾಗದಲ್ಲಿರುವ ಸುಮಾರು 1000 ಮಂದಿ ನಿರಾಶ್ರಿತರಿಗೆ, ಬಡಕೂಲಿ ಕಾರ್ಮಿಕರಿಗೆ ,ಅಶಕ್ತರಿಗೆ ಕ್ಷೇತ್ರದ ವತಿಯಿಂದ ಕಳೆದ 27 ದಿನಗಳಿಂದ ಅನ್ನ ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ.ಜೊತೆಗೆ ಇಲ್ಲಿಯವರೆಗೆ ಸುಮಾರು 205 ಕ್ವಿಂಟಾಲ್ ಅಕ್ಕಿ ಕೂಡಾ ಯಾವುದೇ ಜಾತಿ ಮತ ಧರ್ಮ ಭೇದ ಭಾವ ಇಲ್ಲದೇ ಬೇರೆ ಬೇರೆ ಸಂಘ ಸಂಸ್ಥೆಗಳ ಮೂಲಕ ವಿತರಣೆ ಮಾಡಲಾಯಿತು... ಎಲ್ಲವೂ ಭಗವಾನ್ ಶ್ರೀ ನಾರಾಯಣ ಗುರುವಿನ ಪ್ರೇರಣೆ ಸಂಕಲ್ಪ ಅನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ.
ಹಾಗೂ ಶ್ರೀಯುತ ಜನಾರ್ದನ ಪೂಜಾರಿಯವರ ಮಾರ್ಗದರ್ಶನ.
ಅದೇ ಅನ್ನ ಪ್ರಸಾದ ವಿತರಣೆಯ ಸೇವೆಯನ್ನು ಕಲ್ಪ ಟ್ರಸ್ಟ್ ನ ಸರ್ವ ಸದಸ್ಯರು ಸೇವಾ ರೂಪದಲ್ಲಿ ಮಾಡುತ್ತಿದ್ದಾರೆ. ಜೊತೆಗೆ ಈ ಸೇವೆಗೆ ಸಹಕಾರ ನೀಡಿದ ಎಲ್ಲರಿಗೂ ಶ್ರೀ ನಾರಾಯಣ ಗುರುದೇವರು,ಶ್ರೀ ಗೋಕರ್ಣನಾಥ ದೇವರು, ಅನ್ನಪೂರ್ಣೇಶ್ವರಿ ದೇವಿ ಹಾಗೂ ಕ್ಷೇತ್ರದ ಸರ್ವ ಶಕ್ತಿಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ವಂದನೆಗಳು
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ.