8 Apr 2020

ಉದಯೋನ್ಮುಖ- ಸಾಧಕಿ ಕುಮಾರಿ ತಾಸ್ವಿ

#ಉದಯೋನ್ಮಖ_ಸಾಧಕಿ_ಕುಮಾರಿ_ತಾಸ್ವಿ
#ಕರಾಟೆ_ಡ್ಯಾನ್ಸಿಂಗ್_ಸಂಗೀತ_ಕ್ರೀಡಾ_ಕ್ಷೇತ್ರದಲ್ಲಿ_ಮಿಂಚುತ್ತಿರುವ_ಪ್ರತಿಭೆ
"ಬೆಳೆಯುವ ಸಿರಿ ಮೊಳಕೆಯಲ್ಲಿ"
ಎನ್ನುವಂತದ್ದು ಸಹಜವಾಗಿ ಮಕ್ಕಳ ಚಾಣಕ್ಷತೆಗೆ ಅನುಗುಣವಾಗಿ ಹೇಳುವ ಮಾತು.
ಎಲ್ಲಾ ವಿಚಾರಗಳಲ್ಲೂ ಅಪ್ರತಿಮ ಪ್ರತಿಭೆ ತೋರುವ ಮಕ್ಕಳಿಗೆ ಹೇಳಿ ಮಾಡಿಸಿರುವ ಗಾದೆ ಮಾತು,
ಈ ಮಾತಿಗೆ ಅನುಸಾರವಾಗಿ ತನ್ನ ಸಣ್ಣ ಪ್ರಾಯದಲ್ಲೆ ಅಗಾಧ ಸಾಧನೆ ಮೆರೆದು ಕೀರ್ತಿ ತಂದ ಕುಮಾರಿ ತಾಸ್ವಿ ಯವರನ್ನು ನಿಮ್ಮ ಮುಂದೆಪರಿಚಯಿಸುತ್ತಿದ್ದೆವೆ.

ಮೂಲತಃ ಬೆಳ್ತಂಗಡಿ ತಾಲೂಕಿನವರಾದ ವಿಶ್ವನಾಥ್ ಪೂಜಾರಿ,ಹಾಗೂ ರವಿಕಲಾ ದಂಪತಿಗಳ ಸುಪುತ್ರಿಯಾಗಿರುವ ತಾಸ್ವಿಯವರು ಪ್ರಸ್ತುತ ಕುಟುಂಬ ಸಮೇತರಾಗಿ ಮಂಗಳೂರಿನ ವಾಮಾಂಜೂರಿನಲ್ಲಿ ವಾಸಿಸುತ್ತಿದ್ದಾರೆ.
ಶುಭೋಧಯ ವಿದ್ಯಾಲಯ ಮೂಡುಶೆಡ್ಡೆ ಇಲ್ಲಿಯ ಎಂಟನೇತರಗತಿಯಲ್ಲಿ ಓದುತ್ತಿರುವ ಇವರು ಕರಾಟೆ, ಡ್ಯಾನ್ಸ್ , ಸಂಗೀತ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪಳಗಿರುವ ಅಪ್ರತಿಮ ಪ್ರತಿಭೆ.

ಗುರುಗಳಾದ ನಿತೀನ್ ಸುವರ್ಣ ಇವರ ಗರಡಿಯಲ್ಲಿ ಕರಾಟೆಯನ್ನು ಅಭ್ಯಾಸಿಸುತ್ತಿರುವ ತಾಸ್ವಿ,ಬ್ಲೂ ಬೇಲ್ಟ್ ಪಡೆದಿದ್ದಾರೆ.ಅನೇಕ ಭಾರಿ ತಾಲೂಕು,ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು, ಎರಡು ಭಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೋಲ್ಡ್ ಮೆಡಲ್ ಪಡೆದುಕೊಂಡ ಕೀರ್ತಿ ಇವರದು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಿನಿ ಒಲಿಂಫಿಕ್ಸ್ನಲ್ಲಿ ಭಾಗವಹಿಸಿ ಬಾಕ್ಸಿಂಗ್ನಲ್ಲಿ ಗೋಲ್ಡ್ ಮೆಡಲ್ ವಿಜೇತೆಯಾಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನಮ್ಮ ತುಳುನಾಡಿನ ಹೆಮ್ಮೆಯ ಬಾಲ ಪ್ರತಿಭೆ.
ರಾಷ್ಟ್ರೀಯ ಮಟ್ಟದಲ್ಲೂ ಕರಾಟೆಯಲ್ಲಿ ತನ್ನ ಛಾಪನ್ನು ಮೆರೆದು ಸಿಲ್ವರ್ ಮೆಡಲ್ ಪಡೆದುಕೊಂಡಿದ್ದಾರೆ.
ಕಳೆದ ಆರು ವರುಷಗಳಿಂದ ಕರಾಟೆ ಅಭ್ಯಾಸಿಸುತ್ತಿದ್ದು, ಡ್ಯಾನ್ಸ್, ಭಜನೆ ಸಂಗೀತ ಕ್ಷೇತ್ರದಲ್ಲೂ ತನ್ನನ್ನು ತಾನು ತೋಡಗಿಸಿಕೊಂಡಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲೂ ಬಹಳಷ್ಟು ಆಸಕ್ತಿವಹಿಸುವ ತಾಸ್ವಿ, ತ್ರೋಬಾಲ್ನಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ.
ಸಣ್ಣ ಪ್ರಾಯದಲ್ಲೆ ಸಾಧನೆಯ ಶಿಖರವೇರುತ್ತಿರುವ ಪುಟಾಣಿಯ ಸಾಧನೆಯನ್ನು ಮನಗಂಡು, ಆತ್ಮ ಶಕ್ತಿ ಕೋ-ಅಪರೆಟೀವ್ ಸೋಸೈಟಿಯವರು ಕ್ರೀಡಾ ಸಾಧಕಿ ಎಂದು ಗುರುತಿಸಿ ಸನ್ಮಾನಿಸಿದ್ದಾರೆ, ಹಾಗೆಯೇ ಯುವ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಶಿರ್ಲಾಲು, ಹಾಗೂ ಇತ್ತೀಚೆಗೆ ಮಡಿಲು ಸಮ್ಮಾನ್ ಪುರಸ್ಕಾರ್2019ರ ಸಾಧಕಿ ಎಂದು ಗುರುತ್ತಿಸಿ ಸನ್ಮಾನಿಸಿದ್ದಾರೆ.
ಇನ್ನಷ್ಟು ಸಾಧಿಸುತ್ತ, ಪ್ರಶಸ್ತಿ-ಪುರಸ್ಕಾರಗಳು ಲಭಿಸುತ್ತ,ಸಾಧನೆಯ ಸಶಿಖರವೇರಲಿ ತಾಸ್ವಿಯವರು ಎಂದು ಮಡಿಲು ತಂಡ ಶುಭಾ ಹಾರೈಸುತ್ತೆ.

#ಮಡಿಲು
#ಇದು_ಕೊನೆಯಾಗದ_ಆಸರೆ.
ಕೃಪೆ: ಕೋಟಿ ಚೆನ್ನಯ FB page

ಯುವ ಪ್ರತಿಭೆ - ಕುಮಾರಿ ಪ್ರಜ್ಞಾ ಪೂಜಾರಿ

#PrajnaPoojary
#ಅಭಿನಯ ಕಲಾವಿದರು

ಬಿಲ್ಲವ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಗುವಂತಹ  ಯುವ ಪ್ರತಿಭೆ  #ಪ್ರಜ್ಞಾ ಪೂಜಾರಿ ಉಡುಪಿ 
ಬಿಲ್ಲವ ಸಮಾಜದ ಪ್ರತಿಭೆಗಳೆಂದರೆ ಅಕ್ಷಯ ಪಾತ್ರೆಯಿದ್ದಂತೆ  ತೆಗೆದಷ್ಟು ಕಾಲಿಯಾಗದ್ದು ಅಂತೇಯೇ ನಮ್ಮ ಸಮಾಜದ ಸಾಧಕರ ಪಟ್ಟಿಯಲ್ಲಿ ಕಾಣಸಿಕ್ಕಿದ್ದು ಪ್ರಜ್ಞಾ ಪೂಜಾರಿ ಉಡುಪಿಯ ಕುರ್ಕಾಲ್ ನವರಾದ ಇವರು ಆಟೋಟ  ಮಾತ್ರವಲ್ಲದೆ ಅಭಿನಯ ರಂಗದಲ್ಲೂ ಸೈ ಎನಿಸಿಕೊಂಡವರು. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದು ಶಂಕರಪುರದಲ್ಲಿ ಡಿಪ್ಲೊಮಾವನ್ನು ಡಾ. ಟಿ.ಎಂ.ಎ. ಪೈ  ಪಾಲಿಟೆಕ್ನಿಕ್  ಮಣಿಪಾಲದಲ್ಲಿ ಪೂರ್ಣಗೊಳಿಸಿದರು.

ಬಾಲ್ಯದಲ್ಲಿಯೇ ನೃತ್ಯದಲ್ಲಿ ಆಸಕ್ತಿ ಹೊಂದಿದ  ಇವರು ಅನೇಕ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.ವಾಲ್ಲಿಬಾಲ್ ಹಾಗೂ ಥ್ರೋ ಬಾಲ್ ಆಟಗಾರ್ತಿ ಯಾದ ಇವರು ಚಿಕ್ಕಬಳ್ಳಾಪುರದಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯ ಇಂಟೆರ್ ಕಾಲೇಜು ಸ್ಪೋರ್ಟ್ಸ್ ಮೀಟಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ.

ಉಡುಪಿಯ ಪ್ರಸಿದ್ಧ ನಾಟಕ ತಂಡವಾದ ಅಭಿನಯ ಕಲಾವಿದರು ತಂಡದಲ್ಲಿ ಕಲಾವಿದೆಯಾಗಿರುವ ಇವರು ಸ್ನೇಹ ಧರೆ ಎಂಬ ಕಿರುಚಿತ್ರದಲ್ಲಿ ಕೂಡ ನಟಿಸಿದ್ದಾರೆ.

ಸಂಭ್ರಮ ಫೆಸ್ತ್ ೨೦೧೮ ಕಿರುಚಿತ್ರ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಕಾಮಿಡಿ ಫೀಮೇಲ್ ಆಕ್ಟ್ರೆಸ್ಸ್ ಅವಾರ್ಡ್ ಕೂಡ ಪಡೆದಿರುತ್ತಾರೆ. ಇನ್ನೂ ಹೆಚ್ಚಿನ್ನ ಸಾಧನೆಗಳು  ಇವರಿಂದ ಆಗಲಿ ಪ್ರತಿ ಹೆಜ್ಜೆಯಲ್ಲೂ  ಯಶಸ್ವಿಯಾಗಿ ಮುನ್ನಡೆಯಲಿ ಇವರ ಸಾಧನೆಗಳಿಗೆ ನಮ್ಮ ಕಡೆಯಿಂದ  ತುಂಬುಹೃದಯದ  ಅಭಿನಂದನೆಗಳು.
ಕೃಪೆ : ಕೋಟಿ ಚೆನ್ನಯ FB page