ನನ್ನ ಪತಿಯವರಾದ ಸುಸ್ಮಿತ್ ಕುಮಾರ್ ಅವರು ಕಳೆದ ಹತ್ತು ವರ್ಷಗಳಿಂದ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ (ಮೊದಲು ಜಯಕಿರಣ ಮತ್ತು ಈಗ ವಾರ್ತಾಭಾರತಿ) ದುಡಿಯುತ್ತಿದ್ದಾರೆ. ಕೆಲದಿನಗಳ ಹಿಂದೆ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು ವೈದ್ಯರು ಬಹಳ ಶ್ರಮ ಪಟ್ಟು ಅವರನ್ನು ಬದುಕಿಸಿದ್ದಾರೆ. ನನ್ನ ಪತಿಯ ಒಂದು ಶ್ವಾಸಕೋಶವನ್ನು ಈಗಾಗಲೇ ತೆಗೆಯಲಾಗಿದ್ದು ಇದೀಗ ಇನ್ನೊಂದು ಶ್ವಾಸಕೋಶವೂ ದುರ್ಬಲವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ೨.೫೦ ಲಕ್ಷ ರೂ. ಖರ್ಚಾಗಿದೆ. ಅವರಿಗೆ ಮನೆಯಲ್ಲಿ ರಾತ್ರಿ ಸಮಯ ಉಸಿರಾಡಲು ಆಮ್ಲಜನಕದ ಯಂತ್ರವನ್ನು ಅಳವಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ನನ್ನ ಪತಿಯ ತಿಂಗಳ ಔಷಧಿಯ ವೆಚ್ಚ ಮತ್ತು ಯಂತ್ರದ ಬಾಡಿಗೆ ೧೦,೦೦೦ರೂ. ಮೇಲಾಗುತ್ತದೆ. ನಾನು ದಿನಗೂಲಿ ಕೆಲಸ ಮಾಡುತ್ತಿದ್ದು ಅದರಿಂದ ಬರುವ ಹಣ ಮನೆ ಖರ್ಚಿಗೂ ಸಾಕಾಗುವುದಿಲ್ಲ. ಇನ್ನು ಮುಂದೆ ನನ್ನ ಗಂಡ ಕೆಲಸಕ್ಕೆ ಹೋಗುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಮಗೆ ಇಬ್ಬರು ಮಕ್ಕಳಿದ್ದು (ಕಶ್ವಿ ೮ವ. ಮಂಥನ್ ೬ವ) ನಾವು ಬಾಡಿಗೆ ಮನೆಯಲ್ಲಿ ಜೀವಿಸುತ್ತಿದ್ದೇವೆ. ಮುಂದೆ ಇವರ ಔಷಧಿಯ ಖರ್ಚು ಮತ್ತು ನಮ್ಮ ಜೀವನದ ಬಗ್ಗೆ ಚಿಂತಿತಳಾಗಿದ್ದೇನೆ. ಸಹ್ರದಯ ದಾನಿಗಳು ನಮಗೆ ಸಹಾಯ ಮಾಡುವಿರೆಂದು ನಂಬಿದ್ದೇನೆ.
ಇತೀ ನಿಮ್ಮ ವಿಶ್ವಾಸಿ
ಶಕುಂತಲಾ
Sushmith kumar
01792200032346 Syndicate bank yeyyadi branch
ifsc SYNB0000179