21 Apr 2020

ಭಗವಾನ್ ಶ್ರೀ ನಾರಾಯಣ ಗುರುದೇವನ- ಪರಮ ಮಹಾಸಂದೇಶ

!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* !!

*ಓ ಮಿತ್ರ*
*ಭಗವಾನ್ ಶ್ರೀ ನಾರಾಯಣ ಗುರು #ಶೇಂದಿ ಇಳಿಸುವುದರ ಬಗ್ಗೆ ಪರಮ ಸತ್ಯದ ಬಹಳ ಸ್ಪಷ್ಟವಾಗಿರುವ ಸುಂದರವಾದ* *ಉದಾಹರಣೆಯನ್ನು ಒಬ್ಬ ಭಕ್ತಿನಿಗೆ ಹೇಳುತ್ತಾರೆ* *ಹೀಗೆ...ಮಹಾಗುರುಗಳು..*
*ಶೇಂದಿ ಇಳಿಸುವುದು ಒಂದು #ಮಹಾವ್ಯಾದಿ.ಒಂದು ಅಂಗದಲ್ಲಿ ಕುಷ್ಠರೋಗ ಹಿಡಿದರೆ ಆ ದೇಹವೆಲ್ಲ ಕೆಡುವುದು.ಅದರಂತೆ ಕೆಲವರು ಶೇಂದಿ ಇಳಿಸುವುದರಿಂದ #ಸಮಾಜವೇ ಕೆಡುತ್ತದೆ.ರೋಗದ ಅಂಗ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಂತೆ  ಹೆಂಡ ಇಳಿಸುವವರನ್ನು ಸಮಾಜದಿಂದ ಬೇರ್ಪಡಿಸಬೇಕು.ಅವರೊಂದಿಗೆ ಕೂಡಿಕೊಳ್ಳಬಾರದು.ಅವರು ಹೆಂಡದ ವೃತ್ತಿ ತ್ಯಜಿಸಿದರೆ ಅವರನ್ನು ಶುದ್ದೀಕರಿಸಿ ಸ್ವೀಕರಿಸಬಹುದು.*
*ಭಕ್ತ ಕೇಳುತ್ತಾನೆ ಗುರು ಸ್ಥಾಮಿಯಲ್ಲಿ ಜೀವನಕ್ಕೆ ಬೇರೆ ಉಪಾಯವಿಲ್ಲದೆ ಆ ಕೆಲಸಕ್ಕೆ ಹೋಗುವರು...! ಎಂದು..*
*ಅದಕ್ಕೆ ಗುರುದೇವರ ಉತ್ತರ: ಮೂರ್ತೆ ಕತ್ತಿಯಿಂದ ನಾಲ್ಕು ಕ್ಷೌರದ ಕತ್ತಿಗಳನ್ನು ತಯಾರಿಸಿಕೊಂಡು #ಉದ್ಯೋಗ ಮಾಡಿ ಜೀವಿಸುವುದು ಹೆಂಡ ಇಳಿಸುವ ಕೆಲಸಕ್ಕಿಂತ ಅಭಿಮಾನಕರವೂ ಲಾಭಕರವೂ ಆಗಿದೆ. (ಇದನ್ನು ಕೇಳಿ ಮೌನವಾಗಿದ್ದ ಭಕ್ತನೊಡನೆ ಪುನಃ )* *ಹೆಂಡ ಇಳಿಸುವ ಕೆಲಸ ಮಹಾ ಪಾತಕ.ಅದು ಮೀನು ಹಿಡಿಯುವ ಕೆಲಸಕ್ಕಿಂತ ಪಾಪಕರ. ಕಳ್ಳು ತೆಗೆಯುವ ಬದಲು ಕಾಯಿ ತೆಗೆಯುವುದು ಮೇಲು. ಇದರಲ್ಲಿ ಕಷ್ಟ ಕಡಿಮೆ. ಆದರೆ ಕ್ರಮೇಣ ಗೊನೆಯನ್ನು ಬಿಟ್ಟು ಮೇಲೇರಿ* *ಬಿಟ್ಟಾನು,ಜೋಕೆ...!! ( ಗೊನೆ ಬಿಟ್ಟು ಕೊಂಬು ಕತ್ತರಿಸಿ ‌ಬಿಟ್ಟಾನು)" ಆಗ ಎಲ್ಲರೂ ನಕ್ಕರು.*
*ಆಧಾರ: ಬ್ರಹ್ಮ ಶ್ರೀ ನಾರಾಯಣ ಗುರು ಜೀವನ ಚರಿತ್ರೆ 1970 ರಲ್ಲಿ ಮುದ್ರಣಗೊಂಡ ಪುಸ್ತಕದಿಂದ ಸಂಗ್ರಹ.*
*ಪುಟ ಸಂಖ್ಯೆ123 ಮತ್ತು 124.*
*ಪ್ರಚಾರ ಕೃಪೆ : ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.*

https://m.facebook.com/story.php?story_fbid=237832700790935&id=100036926209472?sfnsn=wiwspwa&extid=V9UmvyycxZEsIIVb

ಸಹಾಯದ ನಿರೀಕ್ಷೆಯಲ್ಲಿ- ಬಡಕುಟುಂಬ


ಮಂಗಳೂರು :*ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ*
*ಗಾಯದ ಮೇಲೆ ಬರೆ ಎಳೆದ ವಿಧಿ*
*ಮಗ ಅಂಗವಿಕಲ, ಮಗಳು ಬುದ್ದಿಮಾಂದ್ಯೆ, ತಂದೆಗೆ ಪಾರ್ಶ್ವವಾಯು*

ಅಂಗವೈಕಲ್ಯದಿಂದ ಬಳಲುತ್ತಿರುವ ಮಗ, ಬುದ್ಧಿಮಾಂದ್ಯೆಯಾದ ಮಗಳ ಆರೈಕೆ ಮಾಡುತ್ತಾ ಮನೆಗೆ ಆಧಾರವಾಗಿದ್ದ ಮನೆಯೊಡೆಯ ಪಾರ್ಶ್ವವಾಯುಗೆ ತುತ್ತಾಗಿ ಆ ಕುಟುಂಬ ದಿಕ್ಕು ಕಾಣದೇ ಕುಳಿತ ಕರುಣಾಜನಕ ಕತೆ ಇದು. 
ಪಾಲಕರಿಗೆ 50 ವರ್ಷವಾಗುವ ಹೊತ್ತಿಗೆ ಮಕ್ಕಳು ಉದ್ಯೋಗ ಮಾಡುವ ಹಂತಕ್ಕೆ ಬಂದಿರುತ್ತಾರೆ. ನಮ್ಮ ಬೇಕು ಬೇಡಗಳನ್ನು ಪೂರೈಸುತ್ತಾ ಆಸರೆಯಾಗಬೇಕು ಎಂಬುದು ಎಲ್ಲಾ ಪಾಲಕರ ಆಸೆ. ಆದರೆ ಮುಡಿಗೇರೆ.ಯ  ಬಾಳೂರು ಗ್ರಾಮದ ಚನ್ನಡ್ಲಿನ *ಸುಂದರ್ ಪೂಜಾರಿ* ಹಾಗೂ *ಅರುಣಾ ಎಸ್‌. ಪೂಜಾರಿ*  ದಂಪತಿಗಳಿಗೆ ಈ ಭಾಗ್ಯವಿಲ್ಲ. ಏಕೆಂದರೆ ಮಗ ರಾಕೇಶನಿಗೆ ಈಗ 30 ವರ್ಷ. ಎರಡೂ ಕೈಕಾಲುಗಳು ಊನವಾಗಿದೆ. ನೋಡಲು ಪುಟ್ಟ ಹುಡುಗನಂತೆ ಕಾಣುತ್ತಾನೆ. ಕೈಕಾಲುಗಳಲ್ಲಿ ಶಕ್ತಿ ಇಲ್ಲ. ಎತ್ತಲ್ಲೊ ನೋಡಿ ಸುಮ್ಮನೆ ನಗುತ್ತಾನೆ. ವಿಚಿತ್ರ ಚಿತ್ಕಾರ ಹೊರಡಿಸುತ್ತಾನೆ. ಈತನ ತಂಗಿ ರೇಖಾಗೆ 28 ವರ್ಷ. ಈಕೆಯೂ ಮಾತನಾಡಲು ಕಷ್ಟ ಪಡುತ್ತಾಳೆ. ದೈಹಿಕ ನ್ಯೂನತೆ ಜತೆ ಬುದ್ದಿಮಾಂದ್ಯಳು. ಮಕ್ಕಳಿಬ್ಬರಿಗೂ ಮಂಗಳೂರು, ಬೆಂಗಳೂರು, ಕೇರಳದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಣ ಖರ್ಚಾಯಿತೆ ಹೊರತು ಗುಣವಾಗಲಿಲ್ಲ.
ಈಗ ಗಾಯದ ಮೇಲೆ ಬರೆ ಎಳೆದಂತೆ ಈ ಇಬ್ಬರು ಮಕ್ಕಳು ಹಾಗೂ ಮನೆಗೆ ಆಧಾರವಾಗಿದ್ದ ಮನೆ ಯಜಮಾನ *ಸುಂದರ್ ಪೂಜಾರಿ* 2 ದಿನದ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿದ್ದು ದೇಹದ ಒಂದು ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ.  ವೃತ್ತಿಯಲ್ಲಿ ಚಾಲಕರಾಗಿದ್ದ *ಸುಂದರ್ ಪೂಜಾರಿ*  ಅವರ ದುಡಿಮೆಯಿಂದಲೆ ಮನೆ ಖರ್ಚು ನಡೆಯುತ್ತಿತ್ತು. ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಸರಿಯಾಗಿ ಕೆಲಸವಿಲ್ಲದೇ ಹೊತ್ತಿನ ಊಟಕ್ಕೆ ತೊಂದರೆಯಾಗಿದ್ದ ಸಂದರ್ಭದಲ್ಲಿ ಸುಂದರ್ ಅವರು ಪಾರ್ಶ್ವವಾಯು ಪೀಡಿತರಾಗಿರುವುದು ಕುಟುಂಬದ ಸದಸ್ಯರಿಗೆ ದಿಕ್ಕೆ ತೋಚದಂತಾಗಿದೆ. 
ಬುದ್ದಿಮಾಂಧ್ಯ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುವುದೋ ಅಥವಾ ಪಾರ್ಶ್ವವಾಯು ಪೀಡಿತವಾಗಿ ಹಾಸಿಗೆ ಹಿಡಿದಿರುವ ಗಂಡನನ್ನು ನೋಡಿಕೊಳ್ಳುವುದೋ ತಿಳಿಯುತ್ತಿಲ್ಲ. ನಾಳೆ ದಿನ ನನಗೆನಾದರೂ ಆದರೆ ಇವರನ್ನು ನೋಡಿಕೊಳ್ಳುವುದು ಯಾರು ಎಂದು ಕಣ್ಣೀರಿಡುತ್ತಾರೆ ಸುಂದರ್ ಅವರ ಪತ್ನಿ ಅರುಣಾ.
ಸುಂದರ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದ್ದು ಈ ಕತೆ ಕೇಳಿದ ಮೇಲ ಯಾರಿಗಾದರೂ ಧನಸಹಾಯ ಮಾಡಬೇಕು. ನಾವೂ ಅವರ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ಆಧಾರವಾಗಿ ನಿಲ್ಲಬೇಕು ಎನಿಸಿದರೆ ಸುಂದರ್ ಅವರ ಪತ್ನಿ ಅರುಣ ಅವರ *ಕೊಟ್ಟಿಗೆಹಾರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಖಾತೆ ಸಂಖ್ಯೆ *12269100004988 ಐಎಪ್ಎಸ್ ಸಿ ಕೋಡ್* *ಪಿಕೆಜಿಬಿ0010506* ಗೆ ಧನಸಹಾಯ ಮಾಡಬಹುದು.

 ಮಾಹಿತಿಗೆ  ಕರೆ ಮಾಡಿ
9481029818

 ಈ. ಮನವಿಗೆ ಸ್ಪಂದಿಸ ಬೇಕಾಗಿ  
ವಿನಂತಿಸುವ 
*ಸೇವಾಲಯ ಸೇವಾ ಸಮಿತಿ ಟ್ರಸ್ಟ್ (ರಿ)*
9110411084