*ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಹೂಡೆ ಇವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ವತಿಯಿಂದ ಸನ್ಮಾನ*:-
*ZEE ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪ್ರಸಿದ್ಧ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು ಸೀಸನ್-3 ಇದರ ವಿಜೇತರಾದ ರಾಕೇಶ್ ಪೂಜಾರಿ ಅವರ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಬಿಲ್ಲವ ಯುವ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು*.
*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಇದರ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಎಮ್.ಪೂಜಾರಿ ಅವರು ರಾಕೇಶ್ ಪೂಜಾರಿ ಅವರ ಸಾಧನೆಯ ಬಗ್ಗೆ ಪ್ರಶಂಸೆಯ ನುಡಿಗಳನ್ನು ಆಡಿ ನೆನಪಿನ ಸ್ಮರಣಿಕೆಯನ್ನು ನೀಡಿ ಗೌರವಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ, ಅವಕಾಶ ವನ್ನು ಬ್ರಹ್ಮ ಶ್ರೀ ನಾರಾಯಣ ಗುರುಗಳು ಮತ್ತು ಕೋಟಿ ಚೆನ್ನಯರು ನೀಡಲಿ ಎಂದು ಶುಭ ಹಾರೈಸಿದರು*.
. *ಈ ಸಂದರ್ಭದಲ್ಲಿ ಪ್ರ.ಕಾರ್ಯದರ್ಶಿ ಗಳಾದ ವಿಶ್ವನಾಥ ಕಲ್ಮಾಡಿ ,ಉಪಾಧ್ಯಕ್ಷರು ಗಳಾದ ಮಹೇಶ್ ಕುಮಾರ್ ಮಲ್ಪೆ,ಶಿವು ಬೆಂಗ್ರೆ, ಸಂ.ಕಾರ್ಯದರ್ಶಿ ಶರತ್ ಕಲ್ಯಾಣಪುರ, ಸಮಿತಿ ಸದಸ್ಯರು ಗಳಾದ ವಿಜಯ ಕೋಟ್ಯಾನ್ ಉದ್ಯಾವರ, ವಿಶುಕುಮಾರ್ ಕಲ್ಯಾಣಪುರ,ನಿತೇಶ್ ಪೂಜಾರಿ ಮಾಣಿಬೆಟ್ಡು,ಮಿತೇಶ್ ಕುಮಾರ್, ದಿನೇಶ್ ಪೂಜಾರಿ ಪರ್ಕಳ, ಸುನಿಲ್ ಪೂಜಾರಿ ಮೂಡಬೆಟ್ಟು, ಅಜಿತ್ ಪೂಜಾರಿ ಮೂಡಬೆಟ್ಟು, ರತನ್ ಪೂಜಾರಿ ಹೂಡೆ, ರಮೇಶ್ ಪೂಜಾರಿ ಹೂಡೆ, ಬಾಲಕೃಷ್ಣ ಪೂಜಾರಿ ಹೂಡೆ, ಹಿತೇಶ್ ಪೂಜಾರಿ ಉಪಸ್ಥಿತರಿದ್ದರು*.
*ವಿಶ್ವನಾಥ್*
*ಪ್ರ. ಕಾರ್ಯದರ್ಶಿ*