4 Dec 2019

ಬಡ ಜೀವಕ್ಕೆ ನಿಮ್ಮ ನೆರವು ಬೇಕಿದೆ.....

*ಈ ನತದೃಷ್ಟ ಬಡಜೀವಕ್ಕೆ ನೆರವಾಗುವಿರಾ*
ಇವರ ಹೆಸರು ಶ್ಯಾಮಲಾ..ಕಾರ್ಕಳ ತಾಲೂಕು ಮಿಯಾರು ಗ್ರಾಮ ಸೂರಲು ನಿವಾಸಿಯಾದ ಇವರು ಬೀಡಿ ಕಟ್ಟಿ ಮನೆಯ ನೂರೆಂಟು ಜವಾಬ್ದಾರಿ ಮೂವರು ಮಕ್ಕಳ ವಿದ್ಯಾಭ್ಯಾಸ ಎನ್ನುತ್ತ ಜೀವನ ನಡೆಸುತ್ತಿದ್ದವರು ಅದಕ್ಕೆ ಬೆನ್ನೆಲುಬಾಗಿ ಇವರ ಗಂಡ ಕೂಡ ಕೂಲಿನಾಲಿ ಮಾಡಿ ಸಹಾಯವಾಗುತ್ತಿದ್ದರು 
ಇಂತಹ ಕಷ್ಟದ ಜೀವನ ನಡೆಸುತ್ತಿರುವ ಈ ಹೊತ್ತಿನಲ್ಲಿ ಶ್ಯಾಮಲಾ ಅವರಿಗೆ ಕ್ಯಾನ್ಸರ್ ಪತ್ತೆಯಾಗುತ್ತದೆ 
ಸಾಮಾನ್ಯವಾಗಿ ಕ್ಯಾನ್ಸರ್ ಅಂದರೆ ಅದರ ಪಡಿಪಾಟಲು ಎಷ್ಟೆಂದು ನಮಗೆಲ್ಲ ತಿಳಿದೇ ಇದೆ..
ಮಾಧ್ಯಮವರ್ಗ ಅಥವಾ ಶ್ರೀಮಂತರು ಕೂಡ ಹೆಣಗಾಡುವಂತೆ ಮಾಡುವ ಕ್ಯಾನ್ಸರ್ ಈ ಬಡಜೀವಗಳನ್ನ ಇದೀಗ ಕಣ್ಣೀರ ಕೂಪದಲ್ಲೇ ಮುಳುಗಿಸಿದೆ..
ಅದರ ಖರ್ಚುವೆಚ್ಚಗಳನ್ನ ನಿಭಾಯಿಸುವುದು ಸಾಧ್ಯವೇ ಇಲ್ಲ ಅನ್ನುವಂತಹ ಸ್ಥಿತಿಯಲ್ಲಿದ್ದ ಈ ಬಡಕುಟುಂಬದಲ್ಲಿ  ಮತ್ತೊಂದು ದುರಂತ ಸಂಭವಿಸಿದೆ 
ಕೂಲಿನಾಲಿ ಮಾಡಿ ಸಾಲಮೈತುಂಬ ಹೊದ್ದು ಅದುಹೇಗೋ ಹೆಣಗಾಡುತ್ತಿದ್ದ ಶ್ಯಾಮಲಾ ಅವರ ಗಂಡ *ಕೃಷ್ಣ ಅವರಿಗೂ ಹಾರ್ಟ್ ಅಟ್ಯಾಕ್ ಆಗಿ ಇದೀಗ ಅವರೂ ಮನೆಯಲ್ಲಿ ಮಲಗಿ ಓಡಾಡದ ಸ್ಥಿತಿಯಲ್ಲಿದ್ದಾರೆ*
ನೈಜ್ಯ ದುರ್ದೈವ ಇನ್ನೊಂದು ಇದೆ 
ಅಲ್ಪಸ್ವಲ್ಪ ಇಂದಿನವರೆಗೆ ಬದುಕಲು ಹಣಕಾಸಿನ ನೆರವಾಗಿದ್ದ *ಇವರ ತಂಗಿ ವಿಜಯಲಕ್ಷ್ಮಿ ತಾರೀಕು 24/11/2019 ರಂದು ಬ್ರೈನ್ ಹ್ಯಾಮರೇಜ್ ಆಗಿ ತೀರಿಕೊಂಡಿರುತ್ತಾರೆ* 
ಬದುಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿರುವ ಇವರಿಗೆ ಮಾನವೀಯ ದೃಷ್ಠಿಯಿಂದ ಆದರೂ ಸಾರ್ವಜನಿಕರು ಒಂದಿಷ್ಟು ಸಹಾಯ ಆಗಲೇಬೇಕಾಗಿದೆ ಗೆಳೆಯರೇ..
ನಾವೆಲ್ಲ ಕಷ್ಟದಲ್ಲೇ ಇದ್ದೇವೆ ಆದರೆ ಅವರ ಸ್ಥಿತಿ ನೆನೆಸಿಕೊಂಡರೇ ಬಹುಷಃ ಅವರಿಗೆ ಸಹಾಯ ಮಾಡುವುದಕ್ಕೆ ನಾವು ಶಕ್ತರಾಗಿದ್ದೇವೆ 
ಹನಿ ಹನಿಗೂಡಿದರೆ ಹಳ್ಳ..ಅಷ್ಟು ಇಷ್ಟು ಅಂತೇನಿಲ್ಲ ಕೈಲಾದಷ್ಟು ನಮ್ಮ ಶಕ್ತಿಮೀರಿ ಪ್ರಯತ್ನಿಸಿ ಇವರ ಕಷ್ಟಕ್ಕೆ ನೆರವಾಗೋಣ 
ಬಡಕುಟುಂಬದ ಕಣ್ಣೀರನ್ನು ಈಮೂಲಕ ಒರೆಸೋಣ ಈ ಮೂಲಕ ಮನುಷ್ಯತ್ವ ಮೆರೆಯೋಣ

Shamala
Syndicate bank
Miyar branch
Ac 02692210006429
IFSC SYNB0000269
Contact number
8747821183
7892980023

ಮಹಾಗುರು ಮಹಾ ಸಂಕಲ್ಪದಿಂದ ಮಾತ್ರ ಬದಲಾವಣೆ ಈ ಜಗದಲ್ಲಿ...!!!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ...
ನೀನು ಯಾವುದೇ ಪುಣ್ಯ ಕ್ಷೇತ್ರಕ್ಕೆ ದೇವರ ದರ್ಶನ ಪಡೆಯಲ್ಲೆಂದು ಹೊದರೇನಂತೆ...!! ಅದೇ ನಿನ್ನ ಮನಸ್ಸು ಸದಾ ದ್ವೇಷವೂ...ಅಹಂಕಾರವೂ...ನಿಂದನೆಯು...ಟೀಕೆಯು...ಇದ್ದಾರೆ ಮಾತ್ರ... ನೀನು ಯಾವುದೇ ಪುಣ್ಯಕ್ಷೇತ್ರದ ದರ್ಶನ ಪಡೆದರು ಕೂಡಾ... ನಿನಗೆ ಆ ಪರಮಾತ್ಮನ.,ಆ  ದೇವರ, ಆ ಭಗವಂತನ, ಪೂರ್ಣ ಕೃಪೆ ಅನುಗ್ರಹ ಸಿಗದು ...ಇದು ಸತ್ಯ... ನೀನು ಹೊರಟು ಹೋದ ಕ್ಷೇತ್ರ ದರ್ಶನಕ್ಕೆ ನಿನಗೆ ಸಿಕ್ಕಿದು ಮಾತ್ರ ಪ್ರಯಾಣದ ಆಯಾಸ ಅಷ್ಟೇ...!!! ಮಿತ್ರ ನಿನ್ನ ಇಷ್ಟ ದೇವನಲ್ಲಿ ಪೂರ್ಣ ಕೃಪೆಗಾಗಿ... ಶರಣಾಗತಿಯ ಭಕ್ತಿ ಭಾವ ...ಒಂದೇ ಬೇಕು ನಿನ್ನಲ್ಲಿ....!!! ಆದನ್ನು ಮಾತ್ರ ಗಮನಿಸುತ್ತಾನೆ ಆ ಪರಮಾತ್ಮ..!!!
.ಅದು ಸುಲಭವಾಗಿ ನಿನಗೆ ಪ್ರಾಪ್ತಿಯಾಗದು.....!!!!
ನಿನ್ನ ಮನಸ್ಸಿನಲ್ಲೇ ಈಗ ಹೆಚ್ಚಿನ ಪ್ರಮಾಣದಲ್ಲಿ  negative ಚಿಂತನೆ, ಯೋಚನೆ, ಆಲೋಚನೆಗಳೇ ಇರುವುದೇ....!!! ಉಂಟೇ....!!! ಇದರಿಂದ ನಿನ್ನ ಮನಸ್ಸುನ್ನು ಹತೋಟಿಗೆ ತರಲು ಬಹಳ ಕಷ್ಟ ಉಂಟು... ಅದರೂ ಸಾಧ್ಯ ಉಂಟು...!!! ಅದಕ್ಕಾಗಿ ನೀನು ಮೊದಲು ನಿನ್ನ ಇಷ್ಟ ದೇವನ ಆಧ್ಯಾತ್ಮಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳು, ಜೊತೆಗೆ ಆಧ್ಯಾತ್ಮ ಪ್ರವಚನಗಳನ್ನು ಕೇಳು...ಆಥವಾ ಆಧ್ಯಾತ್ಮ ಚಿಂತಕರು, ಹೇಳುವ ಪ್ರತಿಯೊಂದು ವಿಚಾರ,ಸಂದೇಶ, ಅನುಭವಗಳನ್ನು ಸರಿಯಾಗಿ ಕೇಳು,ಅದನ್ನು ಆರ್ಥ ಮಾಡಿಕೋ..,ಜೊತೆಗೆ ಆತ್ಮ ವಿಮರ್ಶೆ ಮಾಡು ಸತ್ಯನೇ...!!! ಎಂದು..ತಿಳಿದ ನಂತರ ಅದನ್ನು ನಿನ್ನ ಬದುಕು ಜೀವನದಲ್ಲಿ ಅನುಷ್ಠಾನ ಮಾಡು ಆವಾಗಲ್ಲೇ ಸಾಧ್ಯ ಉಂಟು ನಿನ್ಮಲ್ಲಿಯು ಮಹಾ ಬದಲಾವಣೆ ಇದು ಸತ್ಯ... ಅದೇ ತಾಳಿದವನ್ನು ಬಾಳಿಯನ್ನೂ ಈ ಪರಮಾತ್ಮ ಸೃಷ್ಟಿಯ  ಪುಣ್ಯ ಭೂಮಿಯಲ್ಲಿ... ಅದೇ ಅರಿತುಕೊಂಡು ಮುನ್ನಡೆ... ಯಾರಲ್ಲಿಯೂ ದ್ವೇಷ ಅಹಂಕಾರ ಪಡಬೇಡ....!!!ಮುಂದೆ ಅವರಿಂದ ನಿನಗೆ ಏನೋ ಕೂಡಾ ದೊರಕದ್ದು...ಸಿಗದು...ಇದು ಸತ್ಯ
ಅದೇ ಬಹಳ ಎಚ್ಚರಿಕೆಯಿಂದ ನಡೆ..ಮುಂದೆ...ಬದುಕು ಬಹಳ ಸುಲಭ ಇದೆ ಎಂದೂ ಎನ್ನುವ ಅಗತ್ಯ ಇಲ್ಲ.... ಅದೇ ನೀನು ಹೇಳಿದ ಹಾಗೆಯೇ ಅಷ್ಟು ಸುಲಭ ಅಲ್ಲ...ಆಗುವುದಿಲ್ಲ..ಎಲ್ಲದಕ್ಕೂ ನಿನ್ನ ಗುರು ಪರಮಾತ್ಮನ ಇಚ್ಚೆ ಶಕ್ತಿ ಸಂಕಲ್ಪ ಪ್ರೇರಣೆ ಬೇಕೇ ಬೇಕು.....!!!
ಪರಮಾತ್ಮ ಒಬ್ಬನೇ ಈ ಸೃಷ್ಟಿ ನಿಯಮದ ಬದಲಾವಣೆಯ ಮಹಾ ರೂವಾರಿ.....!!! .ಇದು ಸತ್ಯ.... ಅದುವೇ ಪರಮ ಸತ್ಯ .
ಇದೇ ಸತ್ಯ. ಅದೇ ಪರಮಾತ್ಮ.
ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama

ಕಾಂತಬಾರೆ_ಬೂದಬಾರೆ ಅವಳಿವೀರ ಪುರುಷರು ಕಾರಣಿಕ ಶಕ್ತಿಗಳು....!!!

ಕಾಂತಬಾರೆ_ಬೂದಬಾರೆ
ತುಳುನಾಡು ವಿಷೇಶವಾದ ಸಂಸ್ಕ್ರತಿ, ಸಂಪ್ರದಾಯ, ದೈವದತ್ತವಾದ ಸೌಂದರ್ಯ ಈ ಮಣ್ಣಿನ ಕಲೆಯಾಗಿದೆ.
ಇಂತಹ ಮಣ್ಣಲ್ಲಿ ಅಧರ್ಮ ಭುಗಿಲೆದ್ದಾಗ‌ ಮಾನವನ ರೂಪದಲ್ಲಿ ದೈವ ಸಂಭೂತರು ಜನಿಸಿ‌ ಈ ಮಣ್ಣಿನ ಪಾವಿತ್ರ್ಯತೆಯನ್ನು ಮೆರೆದು ಆರಾಧನಾ ಲೋಕದಲ್ಲಿ ಸ್ಥಾನವನ್ನು ಪಡೆದು, ನಂಬಿ ಬಂದಂತಹ ಭಕ್ತರಿಗೆ ಇಂದಿಗೂ ಕಾಯುವ ಶಕ್ತಿಗಳಾಗಿದ್ದಾರೆ. ಇಂತಹ ಶಕ್ತಿಗಳಲ್ಲಿ ಕೋಟಿ ಚೆನ್ನಯರು , ಕಾಂತಬಾರೆ ಬೂದ ಬಾರೆ ಎನ್ನುವ ಅವಳಿ ಸಹೋದರರ ಚಾರಿತ್ರಿಕ ಹಿನ್ನಲೆ ವಿಶೇಷವಾದದ್ದು.
ಕಾಂತಬಾರೆ ಬೂದಬಾರೆ ತಾಯಿ " ಆಚು ಬೈದೆತಿ ‍" ಎನ್ನುವ ತಾಯಿಯ ಪುಣ್ಯಗರ್ಭದಲ್ಲಿ ಜನಿಸಿ, ಮುಲ್ಕಿ ಸೀಮೆಯ ಸುತ್ತ ಮುತ್ತಲಿನಲ್ಲಿ ಅಂದು ಇದ್ದಂತಹ ನೀರಿನ ಸಮಸ್ಯೆ, ಕೃಷಿಯಲ್ಲಿ ಎದುರಿಸುತ್ತಿದ್ದಂತಹ ಹಲವಾರು ಸಮಸ್ಯೆಗಳಿಗೆ ತಾವು ಸುತ್ತಾಡಿ ಅಂತಹ ಪ್ರದೇಶಗಳನ್ನು ಸರಿಪಡಿಸುತ್ತಾ. ಹಗಲು ರಾತ್ರಿ ಎನ್ನದೆ ಜನರು ಎದುರುಸುತ್ತಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮಹಾನ್ ಪುರುಷರಿವರು, ಸತ್ಯ ನ್ಯಾಯ ಧರ್ಮವನ್ನು ಎತ್ತಿ ಹಿಡಿದ ಮಹಾತ್ಮರಿವರು, ಬಪ್ಪನಾಡಿನ ತಾಯಿ , ಮುಂಡ್ಕೂರಿನ ತಾಯಿಯ ದರುಶನವನ್ನು ಪಡೆದು ಮುಲ್ಕಿ ಸೀಮೆಗೆ ಒಳಪಟ್ಟಂತಹ ಗರಡಿಗಳಲ್ಲಿ ಆರದನೆಯನ್ನು ಪಡೆಯುತ್ತಾ ಬಂದಂತಹ ಭಕ್ತರನ್ನು ಪೊರೆಯುವ ವೀರ ಕಾರ್ಣಿಕ ಪುರುಷರಿವರು.
ತುಳುನಾಡಿನಾದ್ಯಂತ ಕೋಟಿ ಚೆನ್ನಯರು, ಕಾಂತಬಾರೆ ಬೂದಬಾರೆ, ಬಬ್ಬು ಸ್ವಾಮಿ, ಬ್ರಹ್ಮ ಮೊಗೆರರು ಇಂತಹ ಹಲವು ವೀರರು ನೈಜ ಜೀವನದಲ್ಲಿ ನಡೆದ ದಾರಿ ಇಂದಿನ ಸಮಾಜವು ತಿಳಿಯಬೇಕಾಗಿದೆ ಇವರ ಚರಿತ್ರೆ ಇವರು ಪಟ್ಟ ಶ್ರಮದ ಬದುಕು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕಾಗಿದೆ.
ಬಿಲ್ಲವ ಸಮಾಜದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಮಗೆ ಸಮಾನುಭಾವತೆಯ ಜ್ಞಾನವನ್ನು ಮನವರೆಸಿದ ಬ್ರಹ್ಮಶ್ರೀ ನಾರಾಯಣಗುರುವನ್ನು ಹೇಗೆ ನೆನಪಿಸುತ್ತೇವೆಯೊ ಅಂತೆಯೆ ಈ ಮಣ್ಣಲ್ಲಿ ಮೇಲು ಕೀಲೆನ್ನುವ ಧರ್ಪವನ್ನು ಮುರಿದ ವೀರರು ಕೋಟಿಚೆನ್ನಯರು
ದುಡಿಮೆ ಶ್ರಮವನ್ನು ಮೆರೆಯುವ ಕಾಂತಬಾರೆ ಬೂದಬಾರೆಯರನ್ನು ನಮ್ಮ ಸಮಾಜ ಮರೆಯಲೇ ಬಾರದು
ಇಂದು ಒಬ್ಬ ಬಿಲ್ಲವ ತನ್ನ ಜಾತಿಯನ್ನು ಗೌರವಿಸಬೇಕಾದರೆ ಅಂತಹ ಗೌರವ ತಂದು ಕೊಟ್ಟವರು ಈ ವೀರರು, ನಮ್ಮ ಸಂಸ್ಕ್ರತಿ ಚಾರಿತ್ರಿಕ ಇತಿಹಾಸ ಹೊರತು
ಯಾವ ರಾಜಕೀಯನು ಅಲ್ಲಾ...
 ಮುಂದಿನ ಯುವ ಪೀಳಿಗೆಯ ಏಳಿಗೆ ನಮ್ಮ ಗುರಿಯಾಗಲಿ.
ಬಡತನ ನಿರ್ಮೂಲನೆ, ವಿಧ್ಯೆಗೆ ಪ್ರೋತ್ಸಾಹ, ನಿರುದ್ಯೋಗಕ್ಕೆ ಪರಿಹಾರ, ಮಾನವೀಯತೆಯ ಗುಣ ನಮ್ಮ ಮೂಲ ಉದ್ದೇಶವಾಗಲಿ.

ಮಹಾ ಚಂಡಿಕಾಯಾಗ- ಬಲ್ಯೊಟ್ಟು ಶ್ರೀ ಕ್ಷೇತ್ರದಲ್ಲಿ...

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*ಶ್ರೀ ಕ್ಷೇತ್ರ ಬಲ್ಯೊಟ್ಟು ನಲ್ಲಿ ಲೋಕಕಲ್ಯಾಣಾರ್ಥವಾಗಿ*
 ಶಿವಗಿರಿ ಮಠಾಧಿಪತಿಯವರಾದ ಪದ್ಮ ಶ್ರೀ ಶ್ರೀಮದ್ ವಿಶುದ್ದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಉಪಸ್ಥಿತಿ.
*ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ* *ನೇತೃತ್ವದಲ್ಲಿ  ಜರಗುವ*
*ಮಹಾ ಚಂಡಿಕಾ ಯಾಗಕ್ಕೆ* *ಸಮಸ್ತ ಪರಮ ಭಕ್ತರಿಗೆ ಪ್ರೀತಿಯ ಆಮಂತ್ರಣ... *ಕ್ಷೇತ್ರದಲ್ಲಿ  ದಿನಾಂಕ 17 - 12- 2019 ನಡೆಯುವ ಮಹಾ ಚಂಡಿಕಾಯಾಗಲ್ಲಿ ಭಾಗವಹಿಸಿ ಪರಮ ಮಹಾಶಕ್ತಿ ಆದಿಮಾಯೇ  ಮಹಾದೇವಿಯ ಕೃಪೆಗೆ ಪಾತ್ರರಾಗಿರಿ..ನಿರಂತರ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ನೆಲೆಯಾಗಲಿ ಎಂದು ಮಹಾ ಜಗನ್ಮಾತೆ ಅಮ್ಮನಲ್ಲಿ ನಮ್ಮ ಪ್ರಾರ್ಥನೆ.