24 Feb 2020

ಗೆಜ್ಜೆ ಗಿರಿ ಕ್ಷೇತ್ರಕ್ಕೆ - ಹೊರೆಕಾಣಿಕೆ

🍁ಗೆಜ್ಜೆ ಗಿರಿ ನಂದನ ಬಿತ್ತಿಲ್ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಕೊಲ್ಯ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ದಿಂದ ಹೊರಟ ಹೊರೆಕಾಣಿಕೆ ಗೆ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ವಸ್ತು ರೂಪದಲ್ಲಿ ಹೊರೆಕಾಣಿಕೆ ನೀಡಲಾಯಿತು.🕉
         ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ, ಕಾರ್ಯಧ್ಯಕ್ಷರಾದ ಸತೀಶ್ ಕರ್ಕೇರ, ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಎ.ಜೆ.ಶೇಖರ್, ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ, ಬಿ.ಜೆ.ಪಿ.ಯ ಕ್ಷೇತ್ರ ಅಧ್ಯಕ್ಷರಾದ ಚಂದ್ರಹಾಸ ಪಂಡಿತ್ ಹೌಸ್,  ವೇದಿಕೆಯ  ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು, ಗೆಜ್ಜೆ ಗಿರಿ ಉಳ್ಳಾಲದ ಪ್ರ.ಕಾ. ರವೀಂದ್ರ ಬಂಗೇರ, ಪ್ರಮುಖರಾದ ಹರೀಶ್ ಅಂಬ್ಲಮೊಗರು, ಸುಜೀತ್ ಮಾಡೂರು, ಅನಿಲ್ ಬಗಂಬಿಲ, ಪ್ರವೀಣ್ ಬಗಂಬಿಲ,ಸಂಪತ್ ಉಪಸ್ಥಿತರಿದ್ದರು. 🙏

ಬಿಲ್ಲವ ವಿದ್ಯಾರ್ಥಿ ಹಾಸ್ಟೆಲ್

*ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ, ಮಂಗಳೂರು*
🌷🌷🌷🌷🌷🌷🌷
ಆತ್ಮೀಯರೇ,

 ನಮ್ಮ ಸಮಾಜದ ವಿಧ್ಯಾರ್ಥಿಗಳು ಮೆರಿಟ್ ನಲ್ಲಿ ಸೀಟುಗಳನ್ನು ಪಡೆದರೂ, ದುಬಾರಿದ ದರದ ಹಾಸ್ಟೆಲ್ ಫೀಸ್ ಗಳನ್ನು ಪಾವತಿಸಲು ಅನಾನುಕೂಲವಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿರುತ್ತಾರೆ. ಇದನ್ನು ಮನಗಂಡು ನಮ್ಮ ಸಮಾಜಕ್ಕೂ ಒಂದು ಹಾಸ್ಟೆಲ್ ಬೇಕು ಎಂಬ ಕಲ್ಪನೆಯನ್ನು‌ ಬಹಳ ವರ್ಷಗಳಿಂದ ಇಟ್ಟು, ಅದಕ್ಕಾಗಿ ಹಗಲಿರುಲು ಸತತ ಪರಿಶ್ರಮ ಪಟ್ಟು ಹಾಸ್ಟೆಲ್ ನಿರ್ಮಾಣದ ಕಾರ್ಯ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತಿದೆ.
*ಮಂಗಳೂರಿನ ಕುಂಜತ್ತಬೈಲ್ ನಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ 5.25 ಕೋಟಿ ವೆಚ್ಚದಲ್ಲಿ ಬಿಲ್ಲವ ವಿಧ್ಯಾರ್ಥಿಗಳ ಹಾಸ್ಟೆಲ್ ನಿರ್ಮಣಗೊಂಡಿದೆ*.
ಇದರ ಲೋಕಾರ್ಪಣಾ ಸಮಾರಂಭ ಎಪ್ರೀಲ್ 19 ಭಾನುವಾರ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
*ಬಿಲ್ಲವ ವಿಧ್ಯಾರ್ಥಿಗಳ ಹಾಸ್ಟೆಲ್ ನ್ನು ಕರ್ನಾಟಕ ಸರಕಾರದ ಘನವೆತ್ತ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ*.
ಹಾಗೆಯೇ ಮಾನ್ಯ ಸಚಿವರುಗಳು, ಶಾಸಕರುಗಳು, ಸಮಾಜದ ಹಿರಿಯರುಗಳು ಭಾಗವಹಿಸಲಿದ್ದಾರೆ.

ಬಿಲ್ಲವ ಸಮಾಜದ ಪ್ರಪ್ರಥಮ ಹಾಸ್ಟೆಲ್ ಎಂಬ ಹೆಗ್ಗಲಿಕೆ ಇರುವ ಈ ಲೋಕಾರ್ಪಣಾ ಸಮಾರಂಭಕ್ಕೆ ಸಮಾಜಭಾಂದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

*ಶ್ರೀ ನವೀನ್ ಚಂದ್ರ ಡಿ. ಸುವರ್ಣ*
ಅದ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ).

ಪಡುಮಲೆ ಕೋಟಿ ಚೆನ್ನಯ್ಯರ ಜನ್ಮಸ್ಥಾನ- ಐತಿಹಾಸಿಕ ಕುರುಹುಗಳು ಪ್ರತ್ಯಕ್ಷ ಸಾಕ್ಷಿ..!!!

ಪಡುಮಲೆ ಕಾರಣಿಕ ಪರಮ ಶಕ್ತಿಗಳಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ... ಸತ್ಯ.. ಆ ಜನ್ಮಸ್ಥಳದಲ್ಲಿ..ಅಂದಿನ ಕುರುಹುಗಳು ಇನ್ನೂ ಇರುವುದು ಅಂತೂ ಸತ್ಯ... ಇದು ಪರಮ ಶಕ್ತಿ ಕೋಟಿ ಚೆನ್ನಯ್ಯರ ಮಹಾಶಕ್ತಿಗೆ ಪರಮ ಸಾಕ್ಷಿ..
ಇದು ಇತಿಹಾಸ ಚರಿತ್ರೆ..