ಮಂಗಳೂರು: ಲಲಿತ ಕಲಾಮೃತ ವಿಶೇಷ ಸುದ್ದಿ
ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ.
ಶರಾವತಿ ಹಿನ್ನೀರಿನ ಸರ್ಕಾರಿ ಶಾಲೆಗಳಿಗೆ ನಮ್ಮೂರ ಶಾಲಾ ಅಂದ ಚೆಂದದ ಅಂಗವಾಗಿ ಶ್ರೀ ಕ್ಷೇತ್ರ ಸಿಗಂದೂರು ವತಿಯಿಂದ ಐದನೇ ಹೆಜ್ಜೆ ಅಂಗವಾಗಿ ಕುದರೂರು ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಮಾಡಲಾಯಿತು.
ಸಾಗರ:
ರಾಜ್ಯದ ಪ್ರಸಿದ್ಧ ಶಕ್ತಿ ಕೇಂದ್ರ ಹಾಗೂ ಧಾರ್ಮಿಕ ಭಕ್ತಿ ಕೇಂದ್ರವು ಆಗಿರುವ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ವತಿಯಿಂದ ಶರಾವತಿ ಹಿನ್ನೀರಿನ ಸರ್ಕಾರಿ ಶಾಲೆಗಳ ಉಳಿವಿಗೆ ಹೆಚ್ಚಿನ ಒತ್ತು ನೀಡಿರುವುದು ಉತ್ತಮ ಬೆಳವಣಿಗೆಯಾಗಿದ್ದು.
ಶ್ರೀ ಸಿಗಂದೂರು ಚೌಡಮ್ಮ ದೇವಿ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಸಿಗಂದೂರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ.ಅದರಂತೆ ಈ 2021-22ನೇ ವರ್ಷದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶೈಕ್ಷಣಿಕ ದೇಗುಲವಾದ ಸರ್ಕಾರಿ ಶಾಲೆಗಳ ಉಳಿಸುವಿಕೆ ಮತ್ತು ಅಂದ ಚಂದದ ಸುಂದರವಾದ ಶಾಲೆಯಾಗಿಸಲು ಸರ್ಕಾರಿ ಶಾಲೆಗಳ ಉಳಿವಿಗೆ ಶ್ರೀ ಕ್ಷೇತ್ರ ಸಿಗಂದೂರು ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಒಂದು ಹೆಜ್ಜೆ ಮುಂದಿಟ್ಟಿದೆ. ಶ್ರೀ ಕ್ಷೇತ್ರ ಸಿಗಂದೂರಿನ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ಆರ್ ರವಿಕುಮಾರ್ ಅವರ ವಿಶೇಷ ಕಾಳಜಿಯಿಂದ ಶರಾವತಿ ಹಿನ್ನೀರಿನ ಹಿಂದುಳಿದ ಆಯ್ದ ಸುಮಾರು 10 ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡುವ ವಿಶೇಷ ಕಾಯಕಲ್ಪಕ್ಕೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಿರುವುದು ಈ ಭಾಗದ ಜನರಿಗೆ ಹಾಗೂ ಶಿಕ್ಷಕರಿಗೆ ಸಂತಸ ತಂದಿದೆ. "ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ" ಎಂಬ ವಿಶೇಷ ಮುನ್ನುಡಿಯೊಂದಿಗೆ ಅಕ್ಟೋಬರ್ ತಿಂಗಳ ಮಹಾತ್ಮ ಗಾಂಧಿ ಜಯಂತಿಯಂದು ತಾಲ್ಲೂಕಿನ ತೀರಾ ಹಿಂದುಳಿದ ಪ್ರದೇಶವಾದ ಚನ್ನಗೊಂಡ ಗ್ರಾಮದ ಕಟ್ಟಿನಕಾರು ಕ್ಲಸ್ಟರ್ ನಲ್ಯಾರ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಮೂಲಕ ನಡೆಯಿತು.ಸರ್ಕಾರಿ ಶಾಲೆಗಳ ಉಳಿವಿಗೆ ಶ್ರೀ ಕ್ಷೇತ್ರದ ಜೊತೆಗೆ ಹಿನ್ನೀರಿನ ಸುಮಾರು 11ಜನರ ಸಮಾನ ಮನಸ್ಕರ ಶಿಕ್ಷಕರ ತಂಡದ ಪಾತ್ರವು ಸಹ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಂಡದಲ್ಲಿ 3ಜನ ಸಿ.ಆರ್.ಪಿ ಶಿಕ್ಷಕರು ಅನುಭವಿ ಪೈಂಟರ್. ಇಬ್ಬರು ನುರಿತ ಚಿತ್ರಕಲೆಗಾರರಿದ್ದು ಕರೂರು ಹೋಬಳಿಯ ಸಾಕಷ್ಟು ಶಿಕ್ಷಕರಿದ್ದು. ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರದ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿದಿನ ಬಿಡುವು ಮಾಡಿಕೊಂಡು ಹಾಗೂ ವಾರಾಂತ್ಯದಲ್ಲಿ ರಾತ್ರಿಯಿಡಿ ಸ್ವತಃ ಶಿಕ್ಷಕರೇ ಮುಂದೆ ನಿಂತು ಬಣ್ಣ ಬಳಿಯುದರ ಮೂಲಕ ಮಾದರಿಯಾದರು. ಈಗಾಗಲೇ ಈ ಭಾಗದ ಹಲವು ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಿರುವ ತಂಡವು ನಲ್ಯಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗಾಗಲೇ ಸಂಪೂರ್ಣ ಸುಣ್ಣ ಬಣ್ಣ ಮಾಡುವ ಮೂಲಕ ಹೊಸ ರೂಪ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿಯಿಡಿ ಬಣ್ಣ ಬಳಿಯುದರ ಮೂಲಕ ತಾಲ್ಲೂಕಿನ ತೀರಾ ಹಿಂದುಳಿದ ಶಾಲೆಗಳ ಉಳಿವಿಗೆ ಶ್ರಮಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಂಡವು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಯುವುದು ಈ ಭಾಗದ ಸರ್ಕಾರಿ ಶಾಲೆಗಳ ಉಳಿವಿಗೆ ಉನ್ನಷ್ಟು ಬಲ ತುಂಬಿದಂತಾಗಿದೆ. ಇವರ ಜೊತೆ ಜೊತೆಗೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹ ಸಾಕಷ್ಟು ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಹೊಸ ಹೊಸ ಬಂದಿದೆ. ಕೋರೋನಾ ಕಷ್ಟಕಾಲದಲ್ಲಿಯೂ ಸಹ ಶ್ರೀ ಕ್ಷೇತ್ರದ ವತಿಯಿಂದ ಸಾಕಷ್ಟು ಸಹಕಾರ ನೀಡಲಾಗಿತ್ತು.
" ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ
ಸರ್ಕಾರಿ ಶಾಲೆಗಳತ್ತ "ಎಂಬ ಒಂದು ಶೈಕ್ಷಣಿಕ ಕಾಳಜಿಯ ಕಾರ್ಯವನ್ನು ನಾಡಿನ ಕನ್ನಡ ಸರ್ಕಾರಿ ಶಾಲೆಗಳಿಗೆ ಅರ್ಪಿಸುತ್ತಿದೆ.ಮೊದಲನೇ ಹಂತವಾಗಿ ಶರಾವತಿ ಹಿನ್ನೀರಿನ ಕರೂರು - ಭಾರಂಗಿ ಹೋಬಳಿಯ ಆಯ್ದ ಶಾಲೆಗಳನ್ನು ಮಾಡುತ್ತಾ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಅಭಿಲಾಷೆಯನ್ನು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ಕಂಡಿದ್ದಾರೆ.
ಈ ಭಾಗದಲ್ಲಿನ ತೀರಾ ಹಿಂದುಳಿದ ಶಾಲೆಗಳಿಗೆ ಮೊದಲ ಹಂತದಲ್ಲಿ 10 ಶಾಲೆಗಳಿಗೆ ಸುಣ್ಣ ಬಣ್ಣ ಮಾಡಲು ನಿರ್ಧರಿಸಿದ್ದು ಪ್ರಸ್ತುತ 05 ಸರ್ಕಾರಿ ಶಾಲೆಗಳು ಸಂಪೂರ್ಣ ಸುಣ್ಣ ಬಣ್ಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಧರ್ಮಾಧಿಕಾರಿಗಳಾದ ಡಾ ಎಸ್ ರಾಮಪ್ಪನವರು ತಿಳಿಸಿದ್ದಾರೆ.
ಐದನೇ ಹೆಜ್ಜೆಯ ಕಾಯಕಲ್ಪಕ್ಕೆ ಶರಾವತಿ ಹಿನ್ನೀರಿನ ಕುಗ್ರಾಮದ ಕುದರೂರು ಸರ್ಕಾರಿ ಶಾಲೆಗೆ ಸಂಪೂರ್ಣ ಸ್ವಚ್ಛತೆಯೊಂದಿಗೆ ಸುಣ್ಣ ಬಣ್ಣ ಮಾಡಲಾಯಿತು ವಾರಾಂತ್ಯದಲ್ಲಿ ವಿಕೇಂಡ್ ಲಾಕ್ ಡೌನ್ ಇದ್ದ ಸಂದರ್ಭದಲ್ಲಿಯೇ ಶಾಲಾಭಿವೃದ್ಧಿ ಸಮಿತಿ ಸದುಪಯೋಗ ಪಡಿಸಿಕೊಂಡು ಸಂಪೂರ್ಣ ಸುಣ್ಣ ಬಣ್ಣ ಮಾಡಿದ್ದು ಇದಕ್ಕೆ ಗ್ರಾಮಸ್ಥರು ಸೇರಿದಂತೆ ಹಳೇ ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ ನೀಡಿದ್ದು ಶಾಲಾ ಕೈತೋಟ ಸೇರಿದಂತೆ ಸಮೃದ್ಧವಾದ ಶಾಲೆಗೆ ಬೇಕಾದ ವಾತಾವರಣ ನಿರ್ಮಾಣವಾಗಿರುದು ಪೋಷಕರಲ್ಲಿ ಸಂತಸ ಉಂಟುಮಾಡಿದೆ.
ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕಿ ಪೂರ್ಣಿಮಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಮಾವಿನಕೈ. ಇನ್ನಿತರರು ಸಹಕಾರ ನೀಡಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ಈ ಭಾಗದ ಮುನ್ನೆಡೆಯುತ್ತಿದ್ದೆವೆ.
ಮುಂದಿನ ದಿನಗಳಲ್ಲಿ ಸಹ ಅಗತ್ಯ ಸಹಕಾರ ನೀಡಲಾಗುವುದು.
ರವಿಕುಮಾರ್ ಹೆಚ್ ಆರ್
ಕಾರ್ಯದರ್ಶಿ
ಶ್ರೀ ಕ್ಷೇತ್ರ ಸಿಗಂದೂರು
ಸುಕುಮಾರ್ ಎಂ
@smkformedia@gmail.com