29 May 2022

*ಬಡ ಜನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಮೂಲಕ ‌ನಡೆಯುತ್ತಿರುವುದು ಶ್ಲಾಘನೀಯ, ಅನುಕರಣೀಯ - ಉಮಾನಾಥ ಕೋಟ್ಯಾನ್.

ಮಂಗಳೂರು : ಲಲಿತ ಕಲಾಮೃತ ವಿಶೇಷ ವರದಿ:
*ಬಡ ಜನರ ಸೇವೆಯಲ್ಲಿ ದೇವರನ್ನು ಕಾಣುವ ಕಾರ್ಯ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಮೂಲಕ ‌ನಡೆಯುತ್ತಿರುವುದು ಶ್ಲಾಘನೀಯ, ಅನುಕರಣೀಯ - ಉಮಾನಾಥ ಕೋಟ್ಯಾನ್.(ಶಾಸಕರು, ಮುಲ್ಕಿ,ಮೂಡಬಿದರೆ)*
#####################
        ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.) ಉಳ್ಳಾಲ ಇದರ 20 ನೆ ವರುಷದ ಶೈಕ್ಷಣಿಕ ದತ್ತುಸ್ವೀಕಾರ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
       ವೇದಿಕೆಯ ಮೂಲಕ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 36 ಮಂದಿ ಅರ್ಹ ಫಲಾನುಭವಿ ಮಕ್ಕಳನ್ನು ಶೈಕ್ಷಣಿಕ ದತ್ತು ಸ್ವೀಕರಿಸಿ, ಶಾಲಾ ಬ್ಯಾಗ್, ಪುಸ್ತಕ, ಸ್ಟೇಶನರಿ,ಕೊಡೆ ಮತ್ತು ಶಾಲಾ ಶುಲ್ಕ ವಿತರಿಸಲಾಯಿತು.
         2021 - 22 ನೆ ಸಾಲಿನಲ್ಲಿ S.S.L.C. ಪರೀಕ್ಷೆಯಲ್ಲಿ 90% ಮೇಲ್ಪಟ್ಟು ಅಂಕ ಪಡೆದ 15 ಮಕ್ಕಳನ್ನು ಅಭಿನಂದಿಸಲಾಯಿತು. ಪಿ.ಯು.ಸಿ., ಡಿಗ್ರಿಯ 13 ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು. 150 ಮಕ್ಕಳಿಗೆ ಉಚಿತ ಪುಸ್ತಕ ಕೊಡಲಾಯಿತು.
        ಈ ಸಂಧರ್ಭದಲ್ಲಿ ಮಂಗಳೂರಿನ ಹೊಟೇಲ್ ದೀಪಾ ಕಂಫರ್ಟ್ ನ ಆಡಳಿತ ನಿರ್ದೇಶಕಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನಗೈದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರಿಗೆ ಬ್ರಹ್ಮಶ್ರೀ ಸೇವಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
          ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
        ಶೈಕ್ಷಣಿಕ ದತ್ತುಗೆ ಕುದ್ರೋಳಿ ಶ್ರೀ ಗೋಕರ್ಣಾನಾಥೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸಾಯಿರಾಮ್ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥರಾದ ಡಾ.ಸದಾನಂದ ಪೂಜಾರಿ ಭಾಗವಹಿಸಿದ್ದರು.

         ವೇದಿಕೆಯ ಗೌರವ ಸಲಹೆಗಾರರು, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡ್ ಇದರ ಆಡಳಿತ ಮೋಕ್ತೇಸರರಾದ ಎ.ಜೆ.ಶೇಖರ್, ಶ್ರೀ ಮಲರಾಯ ದೂಮಾವತಿ ಭಂಡಾರಮನೆ ಟ್ರಸ್ಟ್, ಬೆಳರಿಂಗೆ ಇದರ ಆಡಳಿತ ಮೋಕ್ತೇಸರರಾದ ಬಾಬು ಶ್ರೀಶಾಸ್ತ ಕಿನ್ಯಾ, ಸಾಯಿಬಾಬ ಮಂದಿರ ಮಾಡೂರು ಇದರ ಆಡಳಿತ ಮೋಕ್ತೇಸರರಾದ ಕೆ.ಪಿ.ಸುರೇಶ್, ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಟ್ರಸ್ಟೀಗಳಾದ ಚಂದ್ರಶೇಖರ ಉಚ್ವಿಲ, ಬಿ.ಜೆ.ಪಿ. ಮಂಗಳೂರು ಮಂಡಲದ ಅಧ್ಯಕ್ಷರಾದ ಚಂದ್ರಹಾಸ ಪಂಡಿತ್ ಹೌಸ್, ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಮೋಕ್ತೇಸರರಾದ ದಿನೇಶ್ ಕೆ.ಅತ್ತಾವರ,  ಉಪಸ್ಥಿತರಿದ್ದರು.
         ವೇದಿಕೆಯ ಅಧ್ಯಕ್ಷರಾದ ಕೆ. ಟಿ.ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಧ್ಯಕ್ಷರಾದ ಸತೀಶ್ ಕರ್ಕೆರ ದತ್ತು ಮಕ್ಕಳ ಪಟ್ಟಿ ಓದಿದರು, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು ಸ್ವಾಗತಿಸಿದರು, ಉಪಾಧ್ಯಕ್ಷರಾದ ಹರೀಶ್ ಮುಂಡೋಳಿ ಅಭಿನಂದನಾ ಪತ್ರ
 ವಾಚಿಸಿದರು. ದತ್ತು ಸಂಚಾಲಕ ಆನಂದ ಕೆ.ಅಸೈಗೋಳಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
         ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ವಾನ್ ಪ್ರಮೋದ್ ಉಳ್ಳಾಲ ರವರ ನೃತ್ಯ ಸೌರಭ ನಾಟ್ಯ ತಂಡದ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.