ಮಂಗಳೂರು ಲಕ ಸುದ್ದಿ: ವೀರ ದೇವ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನವಾದ ಪಡುಮಲೆಯಲ್ಲಿ ಅವರ ಆರಾಧ್ಯ ದೇವರಾದ ನಾಗಬೆರ್ಮರ ಗುಡಿ,ತೀರ್ಥ ಬಾವಿ,ನಾಗ ಸಾನಿಧ್ಯ,ರಕ್ತೇಶ್ವರಿ ಸಾನಿಧ್ಯ ,ಹಾಗೂ ಮಹಾ ತಾಯಿ ದೇಯಿ ಬೈದೆದಿಯವರ ಸಾನಿಧ್ಯದ (samadhi) ಜೀರ್ಣೋದ್ದಾರದ ಕೆಲಸಗಳು ಸಂಪೂರ್ಣಗೊಂಡಿದೆ .ಬ್ರಹ್ಮಕಳಶದ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ ದಿನಾಂಕ 29.11.2020 ಆದಿತ್ಯವಾರ ಸಂಜೆ 4.00 ಗಂಟೆಗೆ ಸರಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘದ ಸಭಾ ಭವನದಲ್ಲಿ ನಡೆಯಲಿದೆ .ತಾವು ಆಗಮಿಸಿ ಸೂಕ್ತವಾದ ಸಲಹೆ ನೀಡಿ ಸಹಕರಿಸಲು ಕೋರಲಾಗಿದೆ .ಈ ಸಭೆಗೆ ಸಮಿತಿಯ ಗೌರವ ಅದ್ಯಕ್ಷರಾದ ಶ್ರೀ ರುಕ್ಮಯ್ಯ ಪೂಜಾರಿ ಯವರು ,ಮೊಕ್ತೇಶ್ವರರಾದ ಪಡುಮಲೆ ಉಳಿಸಿ ಬೆಳೆಸಿದ ರೂವಾರಿ ಚಲನ ಚಿತ್ರ ನಟ ವಿನೋದ್ ಆಳ್ವ , ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಹಾಗೂ ಎಲ್ಲಾ ಪದಾಧಿಕಾರಿಗಳು ಆಗಮಿಸಲಿದ್ದಾರೆ .ತಾವು ಸಭೆಗೆ ಆಗಮಿಸಿ ಸೂಕ್ತವಾದ ಸಲಹೆ ನೀಡಬೇಕಾಗಿ ವಿನಂತಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಕೋಟಿಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ )ಪಡುಮಲೆ .
K S ಯೋಗೀಶ್ ಕುಮಾರ್
(ಉಪಾಧ್ಯಕ್ಷರು )
ಭಗೀರಥ ಜಿ
(ಕಾರ್ಯದರ್ಶಿ)
ಶೈಲೇಶ್ ಕುಮಾರ್ ಕುರ್ತೋಡಿ
(ಖಜಾಂಚಿ )