27 Oct 2021

*ಸೋಲೂರಿನಲ್ಲಿರುವ* *ಆರ್ಯ ಈಡಿಗ ಮಹಾ ಸಂಸ್ಥಾನ ಬ್ರಹ್ಮಶ್ರೀ ನಾರಾಯಣ ಗುರು ಮಠ ಹಾಗೂ ರೇಣುಕಾ ಪೀಠಕ್ಕೆ ನಿಯುಕ್ತಿ ಗೊಂಡಿರುವ ನೂತನ ಪೀಠಾಧಿಪತಿ ಪಟ್ಟಾಭಿಷೇಕ* *ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಮಟ್ಟದ ಸಮಿತಿ‌ ರಚನೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಯಲ್ಲಿ ನಡೆಯಿತು.

 ಲಾಾಾಾಾಾಾಾಾಾಾಾಾಾಾಾಾಾಾಾಾಾಾಾ
ಮಂಗಳೂರು: ಲಲಿತ ಕಲಾವೃತ ವಿಶೇಷ ವರದಿ 
*ಸೋಲೂರಿನಲ್ಲಿರುವ* *ಆರ್ಯ ಈಡಿಗ ಮಹಾ ಸಂಸ್ಥಾನ ಬ್ರಹ್ಮಶ್ರೀ ನಾರಾಯಣ ಗುರು ಮಠ ಹಾಗೂ ರೇಣುಕಾ ಪೀಠಕ್ಕೆ ನಿಯುಕ್ತಿ ಗೊಂಡಿರುವ  ನೂತನ ಪೀಠಾಧಿಪತಿ ಪಟ್ಟಾಭಿಷೇಕ* *ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಮಟ್ಟದ ಸಮಿತಿ ರಚನೆ ಆದಿತ್ಯವಾರ* *24-10-2021ಕ್ಕೆ *ಮಂಗಳೂರಿನ ಕುದ್ರೋಳಿ ಶ್ರೀ  ಗೋಕರ್ಣನಾಥೇಶ್ವರ ಸನ್ನಿಧಾನದ ಗ್ಲಾಸ್ ಹೌಸ್* 
 *ನಲ್ಲಿ ನಡೆಯಿತು* .*
ಸೋಲೂರು ಮಠದ ನೂತನ ಪೀಠಾಧಿಪತಿಯಾಗಿ ಆಯ್ಕೆ ಯಾದ *ಶ್ರೀ* *ಶ್ರೀಶ್ರೀ  ವಿಖ್ಯಾತಾನಂದ* *ಸ್ವಾಮೀಜಿ* ,ಆರ್ಯ ಈಡಿಗ ಮಹಾ ಸಂಸ್ಥಾನ ಇದರ ಅಧ್ಯಕ್ಷರಾದ 
ಡಾ। ತಿಮ್ಮೇಗೌಡ , ಆರ್ಯ ಈಡಿಗ ಸಮಾಜ ತುಮಕೂರು ಇದರ ಕಾರ್ಯದರ್ಶಿ
 ಶ್ರೀ ಶಿವಣ್ಣ ,ಆರ್ಯ ಈಡಿಗ ಸಮಾಜ ಹಾಸನ ಇದರ ಕಾರ್ಯದರ್ಶಿ 
ಶ್ರೀ ಧರ್ಮ ವಿಜೇತ್  ,ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾಗಿರುವ  ಡಾ। ರಾಜಶೇಖರ್ ಕೋಟ್ಯಾನ್ ,ಬಿಜೆಪಿ ಯ ದ .ಕ.ಜಿಲ್ಲಾಧ್ಯಕ್ಷರಾಗಿರುವ ಶ್ರೀ ಸುದರ್ಶನ್ .ಎಂ , ಅಖಿಲ ಭಾರತ ಬಿಲ್ಲವರ ಯೂನಿಯನ್ ಇದರ ಅಧ್ಯಕ್ಷ ರಾಗಿರುವ ನವೀನ್ ಚಂದ್ರ ಡಿ ಸುವರ್ಣ ,ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿಯಾಗಿರುವ ಶ್ರೀ  ಪದ್ಮರಾಜ್ ,ಹೈಕೋರ್ಟ್ ವಕೀಲರಾಗಿರುವ ಶ್ರೀ ರಕ್ಷಿತ್ ಶಿವರಾಂ,ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ದೇವೇಂದ್ರ ಪೂಜಾರಿ ,
ಶ್ರೀ ಚಂದ್ರಶೇಖರ್, ಉದ್ಯಮಿ ಬೆಂಗಳೂರು   ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿಯಾಗಿರುವ ಶ್ರೀ ದೀಪಕ್ ಕೋಟ್ಯಾನ್ ಇವರು ಸ್ವಾಗತಿಸಿದರು .
ಶ್ರೀ ರಕ್ಷಿತ್ ಶಿವರಾಂ ಇವರು ಪ್ರಾಸ್ತಾವಿಕ ನುಡಿ ಗೈದರು .ನಂತರ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ಪೀಠವು ಮುಂದಿನ ದಿನಗಳಲ್ಲಿ ಕಾರ್ಯ ವೆಸಗಲಿದೆ ಎಂದು ತಿಳಿಸಿದರು .ಬಿಲ್ಲವ ,
ಈಡಿಗ ಮುಂತಾದ 26 ಉಪ ಪಂಗಡಗಳಿಗೆ ನಿಗಮ ಸ್ಥಾಪನೆ, ರಾಜಕೀಯ ಮಾನ್ಯತೆ, ಶೈಕ್ಷಣಿಕ ಕ್ರಾಂತಿ ,ಸಾಮಾಜಿಕ ಮಾನ್ಯತೆ ದೊರಕಿಸಲು ಪ್ರಯತ್ನಿಸುವುದು ಅಲ್ಲದೆ  ಈ ಪಂಗಡಗಳನ್ನು ಸಮಾಜದ 1 ಬಲಿಷ್ಠ ಶಕ್ತಿಯನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ .ಈ ಮಹಾತ್ಕಾರ್ಯದಲ್ಲಿ ಸಮಾಜದ ಪ್ರತಿಯೊಂದು ವ್ಯಕ್ತಿಯೂ  ತಮ್ಮ ಕೈಜೋಡಿಸಬೇಕೆಂದು  ಕರೆ ಕೊಟ್ಟರು . ಆರ್ಯ ಈಡಿಗ ಮಹಾ ಸಂಸ್ಥಾನ ಬೆಂಗಳೂರು ಇದರ  ಅಧ್ಯಕ್ಷರಾಗಿರುವ 
ಡಾ। ತಿಮ್ಮೇಗೌಡರು ಮಾತನಾಡುತ್ತಾ ನಾವು ಇಡೀ ರಾಜ್ಯದಲ್ಲಿ ನಾಲ್ಕನೇ ಪ್ರಭಾವಶಾಲಿ ಸಮುದಾಯ ಆಗಿದ್ದರೂ ನಮ್ಮಲ್ಲಿ ಒಗ್ಗಟ್ಟಿಲ್ಲದೆ ಸಾಮಾಜಿಕವಾಗಿ ರಾಜಕೀಯವಾಗಿ ಮಾನ್ಯತೆ ಸಿಕ್ಕಿಲ್ಲ .ಇನ್ನು ಮುಂದೆ ಈ ಪೀಠದ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿ ಈ ನಿಟ್ಟಿನಲ್ಲಿ ಶ್ರಮ ಪಟ್ಟರೆ ನಾವು ಖಂಡಿತ ವಾಗಿಯೂ ಪ್ರಭಾವಶಾಲಿ ಸಮುದಾಯವಾಗಿ ಹೊರಹೊಮ್ಮಬಹುದು ಎಂದು ನುಡಿದರು . ಪೊಲೀಸ್ ಸಹಾಯಕ ಆಯುಕ್ತರಾಗಿರುವ ಮಹೇಶ್ ಕುಮಾರ್ ,ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷರಾಗಿರುವ ಶ್ರೀ ಪೀತಾಂಬರ ಹೆರಾಜೆ, ಶ್ರೀ ಉಲ್ಲಾಸ್ ಕೋಟ್ಯಾನ್  , ಬೇರೆ ಬೇರೆ ಬಿಲ್ಲವ ಸಂಘಗಳ ಮುಖಂಡರು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ.ರಾಜಾರಾಮ್ , ಮಂಗಳೂರಿನ ವ್ಯಾಪ್ತಿಯ ಬಿಲ್ಲವ ಕಾರ್ಪೋರೇಟರ್ ಗಳು ಉಪಸ್ಥಿತರಿದ್ದರು 
ದ .ಕ .ಜಿಲ್ಲಾ , ತಾಲೂಕು ಹಾಗೂ ಮಹಿಳಾ ಸಮಿತಿಗಳನ್ನು ರಚಿಸಲಾಯಿತು  . ಶ್ರೀಮತಿ ವಿದ್ಯಾ ರಾಕೇಶ್ ರವರು ಧನ್ಯವಾದ ನೀಡಿದರು .
ಡಾ।ರಾಕೇಶ್ ಕುಮಾರ್   ರವರು ಕಾರ್ಯಕ್ರಮ ನಿರೂಪಿಸಿದರು .