2 Feb 2020

ಪಡುಮಲೆ ಕಾರಣಿಕ ಪುರುಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ

!! ಓಂ ಶ್ರೀ ಬ್ರಹ್ಮ ಬೈದೆರೆ ನಮಃ !!


ಪಡುಮಲೆ ಪುಣ್ಯ ಕ್ಷೇತ್ರದಲ್ಲಿ ಕಾರಣಿಕ ಪರಮ ಶಕ್ತಿ ಕೋಟಿ ಚೆನ್ನಯ್ಯರ ಜನ್ಮಸ್ಥಳದಲ್ಲಿ...ಮಾರ್ಚ್ ತಿಂಗಳು ಬ್ರಹ್ಮಕಲೋತ್ಸವ..
ಅಂದು ಕೋಟಿ ಚೆನ್ನಯ್ಯರು ಆರಾಧನೆ  ಮಾಡುತ್ತಿದ್ದ #ನಾಗ #ಬೆಮ್ಮೆರ್, #ರಕ್ತೇಶ್ವರಿ,ಮತ್ತು ತಾಯಿ ದೇಯಿ ಬೈದೆದಿಯ ಮಹಾಸಾನಿಧ್ಯ.

ಬ್ರಹ್ಮಶ್ರೀ ಬಿಲ್ಲವ ವೇದಿಕೆಯ *ಕೋಟಿ ಚೆನ್ನಯ ಕ್ರೀಡಾ ಕೂಟ 2020* ಕಾರ್ಯಕ್ರಮದ ಆಮಂತ್ರಣ ಪತ್ರದ ಬಿಡುಗಡೆ.

ಬ್ರಹ್ಮಶ್ರೀ ಬಿಲ್ಲವ ವೇದಿಕೆಯ *ಕೋಟಿ ಚೆನ್ನಯ ಕ್ರೀಡಾ ಕೂಟ 2020* ಕಾರ್ಯಕ್ರಮದ ಆಮಂತ್ರಣ ಪತ್ರದ ಬಿಡುಗಡೆಯನ್ನು ಅಧ್ಯಕ್ಷರಾದ ಕೆ.ಟಿ.ಸುವರ್ಣ ಮತ್ತು ಕಾರ್ಯಧ್ಯಕ್ಷರಾದ ಸತೀಶ್ ಕರ್ಕೇರ ನಡೆಸಿದರು. ಪ್ರಮುಖರು ಉಪಸ್ಥಿತರಿದ್ದರು.🌷

ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಹೆಬ್ರಿ ಇದರ 30ನೇ ವರ್ಷದ ಸಂಭ್ರಮಾಚರಣೆ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಇದು
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಹೆಬ್ರಿ ಇದರ 30ನೇ ವರ್ಷದ ಸಂಭ್ರಮಾಚರಣೆ.

ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ,ಸೋಮೇಶ್ವರ , ಇದರ 42ನೇ ವಾರ್ಷಿಕೋತ್ಸವದ ಸಮಾರಂಭ

ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ,ಸೋಮೇಶ್ವರ , ಇದರ 42ನೇ ವಾರ್ಷಿಕೋತ್ಸವದ ಸಮಾರಂಭದ ಉದ್ಘಾಟನೆಯನ್ನು ಮುಲ್ಕಿ ಬಿಲ್ಲವರ ಮಹಾ ಮಂಡಳಿಯ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಬಿಲ್ಲವ ಸಮಾಜದ ಹಿರಿಯರು ಸೇರಿ ಸಮಾಜದ ಒಗ್ಗಟ್ಟಿಗಾಗಿ ಸಂಘವನ್ನು ಕಟ್ಟಿದ್ದಾರೆ,ಅಪಾರ ಸಂಘಟನೆ ಇರುವ ನಮ್ಮ ಸಮಾಜವು ಬಲಿಷ್ಟವಾದ ಸಮಾಜವಾಗಿದೆ, ಸಮಾಜವು ಸಮುದ್ರ ಇದ್ದಂತೆ , ನಾವು ಸಮುದ್ರದ ಬಳಿ ಹೋಗಬೇಕೆ ಹೊರತು ಸಮುದ್ರ ನಮ್ಮ ಬಳಿ ಬರುವುದಿಲ್ಲ, ನಾರಾಯಣ ಗುರುವರ್ಯರ ಮೇಲೆ ಪ್ರೀತಿ ಇಟ್ಟು ನಾವೆಲ್ಲರೂ ಒಟ್ಟಾಗಿ ಸಮಾಜ ಕಟ್ಟುವ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಡಿ.ಸುವರ್ಣ ವಹಿಸಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ  ಬಿಲ್ಲವ ಸಮಾಜದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್, ಕಾಪಿಕಾಡು ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್, ಮಂಗಳೂರು ಬಿಲ್ಲವರ ಮಹಿಳಾ ಮಂಡಳಿ ಅಧ್ಯಕ್ಷ  ಶ್ರೀಮತಿ ಸುಮಲತಾ ಎನ್. ಸುವರ್ಣ, ಸಜಿಪ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಸಂಜೀವ ಪೂಜಾರಿ,ಬಿಲ್ಲವ ಸೇವಾ ಸಮಾಜದ ಗೌರವಾಧ್ಯಕ್ಷರಾದ ಡಾ.ಪಿ.ರಾಮಾನುಜಂ, ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ, ಮಹಿಳಾ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಐತಪ್ಪ, ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಲಕ್ಷ್ಮಣ, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಆನಂದ್ ಮಲಯಾಳ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಯ ಬಿಲ್ಲವ ಸೇವಾ ಸಂಘದ ಹಿರಿಯ ಸದಸ್ಯರಾಗಿ ನಿಶ್ವಾರ್ಥ ಸೇವೆ ಸಲ್ಲಿಸಿದ ಶ್ರೀ ರಾಮ ಪೂಜಾರಿ ಪರ್ಯತ್ತೂರು,ತಿಮ್ಮಪ್ಪ ಪೂಜಾರಿ ಬೂಡುಮನೆ,ಬಾಸ್ಕರ್ ಪೂಜಾರಿ ಕೆರೆಬೈಲ್  ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ.ಅಧ್ಯಕ್ಷರಾಗಿರುವ ಚಂದ್ರಹಾಸ ಪಂಡಿತ್ ಹೌಸ್ ಅವರನ್ನು ಅಭಿಂದಿಸಲಾಯಿತು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ದೇಯಿ ಬೈದ್ಯೆತಿ-ಕೋಟಿ  ಚೆನ್ನಯ ಮೂಲಸ್ಥಾನದಲ್ಲಿ ಫೆಬ್ರವರಿ 24ರಿಂದ ಮಾರ್ಚ್ 2ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ಸೋಮೇಶ್ವರ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಉಳ್ಲಾಲ ವಲಯದ ವತಿಯಿಂದ ಕೊಡುಗೆಯಾಗಿ ನಿರ್ಮಿಸಲು ಉದ್ದೇಶಿಸಿರುವ ಶಾಶ್ವತ ಗಾಳಿ ಗೋಪುರ ಕ್ಕೆ ಸಹಕರಿಸುವ ಸಲುವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು‌.
ಸಂಘದ ಮುಂದಿನ ರೂಪುರೇಷಗಳ ಬಗ್ಗೆ ಉಪಾಧ್ಯಕ್ಷರಾದ ಪುರುಷೋತ್ತಮ ಅಡ್ಕ ಮಾಹಿತಿಯನ್ನು ನೀಡಿದರು.
ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು, ಜೈ ಕುಮಾರ್ ಪರ್ಯತ್ತೂರು, ಮತ್ತು ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು, ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿಜೇತರ ವಿವರವನ್ನು ಕ್ರೀಡಾ ಸಂಚಾಲಕರಾದ ಹರೀಶ ಮುಂಡೊಳಿಯವರು ವಾಚಿಸುವುದರೊಂದಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.  ಸಂಘದ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ ಸ್ವಾಗತಿಸಿದರು, ಸಂಘದ ವರದಿಯನ್ನು ಸಂಘದ ಕಾರ್ಯದರ್ಶಿ ಈಶ್ವರ್ ಸುವರ್ಣ ಮತ್ತು  ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಶ್ರೀಧರ್ ಮಹಿಳಾ ಸಂಘದ ವಾರ್ಷಿಕ ವರದಿಯನ್ನು  ವಾಚಿಸಿದರು, ಸಂಘದ ಕೋಶಾಧಿಕಾರಿ ಸೀತಾರಾಮ ಕರ್ಕೇರಾ ಧನ್ಯವಾದಗೈದರು.