15 Jul 2020

ಬಹುಮುಖ ಪ್ರತಿಭೆ - ಕುಮಾರಿ ಅನ್ವಿಷಾ ಪೂಜಾರಿ

#ಕರಾವಳಿಯ #ಬಹುಮುಖ #ಪ್ರತಿಭೆ
              ಬರಹ  : ಕಾವ್ಯಶ್ರೀ - #ಕಲಶ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಮಾತಿನಂತೆ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ವಿಸ್ತರಿಸಿದಂತಹ ಅದ್ಭುತ ಪ್ರತಿಭೆ ಅನ್ವಿಷಾ ವಾಮಂಜೂರು.ಅನಿಲ್ ಮತ್ತು ಅನುಷಾ ದಂಪತಿಗಳ ಮುದ್ದಿನ ಮಗಳಾಗಿ ಜನವರಿ 21, 2011 ರಂದು ವಾಮಂಜೂರ್ ನಲ್ಲಿ ಜನಿಸಿದ ಇವರು ಶುಭೋದಯ ವಿದ್ಯಾಲಯ,ಮೂಡುಶೆಡ್ಡೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಕೇವಲ 9 ವರ್ಷ ವಯಸ್ಸಿನ ಈ ಪೋರಿ ರಾಜ್ಯದಾದ್ಯಂತ ಜನರ ಮನೆ ಮಾತಾಗಿದ್ದಾರೆ. ನೃತ್ಯ, ಯಕ್ಷಗಾನ, ಭರತನಾಟ್ಯ, ಯೋಗ, ಮಾಡೆಲಿಂಗ್, ಚಿತ್ರಕಲೆ, ರಂಗೋಲಿ, ಕೀಬೋರ್ಡ್ ನುಡಿಸುವುದು, ನಟನೆ, ಪೇಪರ್ ಕಟ್ಟಿಂಗ್, ಭಾಷಣ ಹೀಗೆ ಹಲವಾರು ವಿಷಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.3 ವರುಷದ ಕಿರಿ ವಯಸ್ಸಿನಲ್ಲಿ ಕೃಷ್ಣವೇಷ ಸ್ಪರ್ಧೆಗೆ ವೇದಿಕೆ ಏರಿದ ಅನ್ವಿಷಾರವರು ಮುಂದೆ ಹಂತ ಹಂತವಾಗಿ ಮೇಲೇರಿ ಇಂದು ಸಾಧನೆಯ ಮೇರು ಶಿಖರದಲ್ಲಿದ್ದಾರೆ.ಅನೇಕ ಛದ್ಮವೇಷ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವುಗಳಲ್ಲಿ ಪ್ರಮುಖವಾದವು ರಾಗತರಂಗ, ಭಾರತೀಯ ವಿದ್ಯಾಭವನ  ಇತ್ಯಾದಿ. ಕದ್ರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕೃಷ್ಣವೇಷ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಪ್ರಥಮ ಸ್ಥಾನ,ಒಂದು ಬಾರಿ ದ್ವಿತೀಯ ಸ್ಥಾನ ಮತ್ತು ಅನೇಕ ಕಡೆಗಳಲ್ಲಿ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿ 50 ಕ್ಕೂ ಹೆಚ್ಚು ಬಹುಮಾನವನ್ನು ಪಡೆದಿದ್ದಾರೆ.ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ ಹೂವಿನ ಅಲಂಕಾರ ಸ್ಪರ್ಧೆಯಲ್ಲಿ ಸುಮಾರು 5 ಬಾರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ರಂಗೋಲಿ ಸ್ಪರ್ಧೆ, ಹಾಡುಗಾರಿಕೆ,ನೃತ್ಯ ಹೀಗೆ ಅನೇಕ ಸ್ಪರ್ಧೆಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆಯ ಮೂಲಕ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ನೃತ್ಯ, ಹಾಡುಗಾರಿಕೆ ಮತ್ತು ನಾಟಕ ಕಲಾವಿದರಾಗಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಉತ್ತಮ ವಾಗ್ಮಿಯಾಗಿಯೂ ಕೂಡ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದಾರೆ.
#CopyWrite_ಕಲಶ- #ಇದು_ಕರಾವಳಿ_ಕಲಾವಿದರ_ಸ್ಪರ್ಶ

ಉಡುಪಿಯಲ್ಲಿ ನಡೆದ 'ಉಡುಪಿ ಕಿಡ್ಸ್ ಟ್ಯಾಲೆಂಟ್ ' ಡಾನ್ಸ್ ಶೋನಲ್ಲಿ ದ್ವಿತೀಯ ಸ್ಥಾನ,ಮಕ್ಕಳ ಹಬ್ಬದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಅಷ್ಟೇ ಅಲ್ಲದೆ ಓದುವ ಹವ್ಯಾಸವನ್ನು ರೂಢಿಸಿಕೊಂಡು ಓದಿನಲ್ಲಿಯೂ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾರೆ. ಚಿತ್ರದುರ್ಗ ನವೋದಯ ಪ್ರಕಾಶನ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ,ಚಿತ್ರದುರ್ಗದ ಚಿಂತನ ಪ್ರಕಾಶನದ ಗಣಿತ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ,ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ "ಜೂನಿಯರ್ ಮಸ್ತಿ ಸೀಸನ್ 2" ರಿಯಾಲಿಟಿ ಶೋ ಗೆ ಆಯ್ಕೆ,ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ 'ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ " ನಲ್ಲಿ 'ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್' ಟ್ರೋಫಿಯನ್ನು ಹಾಗೂ 'Mangalore Little Princess' ಟ್ರೋಫಿ ಗಳಿಸಿದ್ದಾರೆ.
ಅನ್ವಿಷಾರವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಕರ್ನಾಟಕ ಸರ್ಕಾರದ "ಜಿಲ್ಲಾ ಅಸಾಧಾರಣ ಪ್ರತಿಭೆ " ಪ್ರಶಸ್ತಿ, "ತುಳುನಾಡೋಚ್ಛಯ ಪ್ರಶಸ್ತಿ ", "ಕಲಾ ಸೇವಾ ರತ್ನ ಪುರಸ್ಕಾರ ", "ಕರ್ನಾಟಕ ಪ್ರತಿಭಾ ರತ್ನ ", "ಚಿಗುರು ಪ್ರಶಸ್ತಿ ", "ಜೇಸಿ ಸಾಧನಶ್ರೀ ಪ್ರಶಸ್ತಿ ", "ತೌಳವ ಕುಮಾರಿ ", "ಸಿದ್ಧಯ್ಯ ಪುರಾಣಿಕ ಪ್ರಶಸ್ತಿ ", "ಕರ್ನಾಟಕ ಕಲಾಶ್ರೀ ", "ರಾಜ್ಯೋತ್ಸವ ಪುರಸ್ಕಾರ ", "ಯುವ ಪ್ರತಿಭೆ ಪ್ರಶಸ್ತಿ ", "ನ್ಯಾಷನಲ್ ಬೆಸ್ಟ್ ಟ್ಯಾಲೆಂಟೆಡ್ ಪ್ರಶಸ್ತಿ ", "ಸ್ವಸ್ತಿ ಸಂಭ್ರಮ ಪುರಸ್ಕಾರ ", ಅಷ್ಟೇ ಅಲ್ಲದೆ "ನಾಟ್ಯ ಮಯೂರಿ ", "ಕರಾವಳಿ ಕಲಾ ಭಂಡಾರ ", "ಕರಾವಳಿ ಕಲಾ ಕುವರಿ " ಎಂಬ ಬಿರುದು ಇವೆಲ್ಲವೂ ಇವರ ಪ್ರತಿಭೆಗೆ ಸಂದ ಪ್ರತಿಫಲ ಎನ್ನಬಹುದು. ಕರ್ನಾಟಕದ ಪ್ರಸಿದ್ಧ ಚಾನೆಲ್ "ಜೀ ಕನ್ನಡ " ದ 'ಡ್ರಾಮಾ ಜೂನಿಯರ್ ' ನಲ್ಲಿ ನಾಗಿಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದು ' ಡಾನ್ಸ್ ಕರ್ನಾಟಕ ಡಾನ್ಸ್ ' ನಲ್ಲಿ ಎಕ್ಸ್ಪ್ರೆಷನ್ ಕ್ವೀನ್ ಆಗಿ ಪ್ರಖ್ಯಾತಿಗೊಂಡಿದ್ದಾರೆ. "ಜಬರ್ದಸ್ತ್ ಶಂಕರ " ಎಂಬ ಚಲನಚಿತ್ರದಲ್ಲಿ ಕೂಡಾ ನಟಿಸಿ ಮಿಂಚಿದ್ದಾರೆ. ಅನ್ವಿಷಾರವರು ತುಳುನಾಡಿನ ಬಗ್ಗೆ ಮಾತನಾಡಿದಂತಹ ಒಂದು ವಿಡಿಯೋ ಎಲ್ಲಾ ಕಡೆಗಲ್ಲಿ ವೈರಲ್ ಆಗಿ ಪ್ರಖ್ಯಾತಿಗೊಂಡಿದೆ.ಸ್ವ ಅಭಿಮಾನಿ ಬಳಗವನ್ನು ಹೊಂದಿರುವ ಅನ್ವಿಷಾ ರವರ ಈ ಎಲ್ಲಾ ಸಾಧನೆಗೆ ತಾಯಿಯೇ ಮೊದಲ ಗುರು ಹಾಗೂ ಇವರ ಪೋಷಕರು ತಮ್ಮ ಮಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.ಇಂತಹ ಅದ್ಭುತ ಪ್ರತಿಭೆಗೆ ಇನ್ನಷ್ಟು ಅವಕಾಶ ಒದಗಿ ಬರಲಿ ಮತ್ತು ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನಮ್ಮೆಲ್ಲರ ಶುಭ ಹಾರೈಕೆ.....

*ಸಾಧನೆಗೆ ಸ್ಫೂರ್ತಿ ವೈದಕೀಯ ರಂಗದ ಸಾಧಕ ಡಾ. ಪುರುಷೋತ್ತಮ್.R.*

*ಸಾಧನೆಗೆ ಸ್ಫೂರ್ತಿ ವೈದಕೀಯ ರಂಗದ ಸಾಧಕ ಡಾ. ಪುರುಷೋತ್ತಮ್.R.*
*ವೈದಕೀಯ ಕ್ಷೇತ್ರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಅವಕಾಶವನ್ನು ಸ್ವ ಪ್ರತಿಭೆ ಯಿಂದ  ಮೆರಿಟ್ ಮೂಲಕ ಗಿಟ್ಟಿಸಿಕೊಂಡು M.B.B.S -MD -DM-DNB ಯಂತಹ  ವೈದಕೀಯ ಕ್ಷೇತ್ರದ ಅತ್ಯುನ್ನತ ಪದವಿ ಪಡೆದಿರುವ ಮಂಗಳೂರಿನ ಹೆಸರಾಂತ ಕಾರ್ಡಿಯೋಲೊಜಿಸ್ಟ್ ಎಂದು ಹೆಸರು ಪಡೆದಿರುವ ಡಾ. ಪುರುಷೋತ್ತಮ್.R. ಬಿಲ್ಲವ ಸಮುದಾಯದವರು ಎನ್ನುವುದು ಬಿಲ್ಲವ ಸಮುದಾಯಕ್ಕೆ ಹೆಮ್ಮೆ. ಇವರು  ಶ್ರೀಯುತ ಎಚ್. ಎಮ್. ರಾಮಯ್ಯ ಮತ್ತು ಶ್ರೀಮತಿ ಲಲಿತ   ರವರ ಹಿರಿಯ ಪುತ್ರ, ತನ್ನ ಹುಟ್ಟೂರು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ಎಂಬ ಗ್ರಾಮೀಣ ಪರಿಸರದಲ್ಲಿ  ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ವನ್ನು ಕನ್ನಡ ಮಾಧ್ಯಮದಲ್ಲಿ ಮುಗಿಸಿ ಪ್ರತಿಭಾವಂತ ನಾಗಿ  ಸಾಧನೆ ಇದ್ದರೆ  ಕಲಿಕೆಯ ಮೂಲಕ  ಏನನ್ನೂ ಸಾಧಿಸ ಬಹುದೆಂದು ತೋರಿಸಿಕೊಟ್ಟವರು ಡಾ. ಪುರುಷೋತ್ತಮ್. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್ ಕಾನ್ಫರೆನ್ಸ್ ಗಳಲ್ಲಿ ಇವರ ವಿವಿಧ ಪ್ರಬಂಧಗಳು ಮಂಡಿಸಲ್ಪಟ್ಟಿವೆ ಹಾಗೂ ವಿವಿಧ ವೈದಕೀಯ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಅಪ್ರತಿಮ ಪ್ರತಿಭಾಶಾಲಿ, ಯುವಜನರಿಗೆ ಸ್ಫೂರ್ತಿಯಾಗಿ ಸಹೃದಯಿ ವೈದ್ಯರಾಗಿರುವ ಡಾ. ಪುರುಷೋತ್ತಮ್ ರವರನ್ನು ಅವರ ಸಾಧನೆ ಗಳಿಗೆ ಅಭಿನಂದಿಸುತ್ತಾ ಇನ್ನೂ ಹೆಚ್ಚಿನ ಸಾಧನೆ ಅವರಿಂದ ಸಾಧ್ಯವಾಗಲಿ ಎಂಬ ಹಾರೈಕೆ.*

ಈಗ ಮಂಗಳೂರಿನಲ್ಲಿ ವೃತ್ತಿ ಜೀವ ನವನ್ನು ನಡೆಸುತ್ತಿರುವ ಡಾ. ಪುರುಷೋತ್ತಮ್ ರವರ ವೈದಕೀಯ ವೃತ್ತಿಜೀವನದ   ಕಿರು ಪರಿಚಯ.

*ಡಾ. ಪುರುಷೋತ್ತಮ್.ಆರ್. ಇವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ , ಖ್ಯಾತ ವಕೀಲರು ಪದ್ಮರಾಜ್ ಆರ್.ರವರ ಸಹೋದರ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.*

Dr. R Purushotham is a well-known Interventional Cardiologist practising in Mangalore. He currently serves as Consultant & Interventional Cardiologist at AJ Hospital & Research Centre (Kuntikana, Mangalore), and as Associate Professor in the Department of Cardiology at the adjoining AJ Institute of Medical Sciences. In addition, he consults privately on weekday evenings at Care Speciality Clinic located at AJ Towers in Balmatta.  

Dr. Purushotham specialises in interventional procedures such as Coronary Angioplasty, Balloon Valvotomy, Pacemaker Implantation and Device Closure of Congenital Heart Defects. He has augmented his knowledge and skills by attending a large number of conferences and workshops in India and overseas, pertaining to his field of specialisation. He has also co-authored a number of research papers that have been published in the Indian Heart Journal and other journals of repute.

Dr. Purushotham studied for the MBBS at Dr. B R Ambedkar Medical College in Bangalore and received this degree in 1993 from Bangalore University. He did his postgraduation (MD Medicine, 1998) from Government Medical College in Miraj, which is affiliated to Kolhapur's Shivaji University. Dr. Purushotham then specialised in Cardiology, obtaining the double qualifications of DNB Cardiology (through G B Pant Hospital, New Delhi) and DM Cardiology (through Seth G S Medical College, Mumbai), in 2002.

Dr. Purushotham has been at his current posts since 2004. Prior to this, he spent a total of two years as Consultant Cardiologist, first at KEM Hospital in Mumbai and then at Manipal Heart Foundation in Bangalore.

✍️ ರಾಜೇಂದ್ರ ಚಿಲಿಂಬಿ.

ದ್ವೀತಿಯ ಪಿಯುಸಿಯಲ್ಲಿ 95% - ಕುಮಾರಿ ಶ್ರದ್ಧಾ


ಮಂಗಳೂರು ಲಕ ಸುದ್ದಿ:
#ಶ್ರೀ ದುರ್ಗಾದೇವಿ ನಿವಾಸ್ ಜೋಡುರಸ್ತೆ ಕಾರ್ಕಳ ಸುಕುಮಾರ್_ಪೂಜಾರಿ ಮತ್ತು  ವಿನೋದ ಪೂಜಾರಿಯವರ ಪುತ್ರಿ #ಕುಮಾರಿ #ಶ್ರದ್ದಾ ದ್ವಿತೀಯ ಪಿಯುಸಿಯಲ್ಲಿ   95 % ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರು    ಕಾರ್ಕಳ ಕುಕ್ಕುಂದೂರಿನ ಜ್ಞಾನ ಸುಧಾ ಕಾಲೇಜು  ನ ವಿದ್ಯಾರ್ಥಿನೀಯಾಗಿರುತ್ತಾರೆ.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.