*ಪ್ರತಿಭೆಗಳ ಪಾಲಿನ ಬೆಳಕು ಹಾಗೂ ಕಲಾ ಆರಾಧಕ ಸುರೇಂದ್ರ ಮೋಹನ್ ಮುದ್ರಾಡಿ*
✍️ ಬರಹ : *ನೀತು ಬೆದ್ರ*
ರಾಜ್ಯದ ಐ ಪಿ ಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಒಂದು ಕಡೆ ಹೇಳ್ತಾರೆ, "ಒಬ್ಬ ನಿಜವಾದ ನಾಯಕ ಮತ್ತೊಬ್ಬ ನಾಯಕನನ್ನೇ ಸೃಷ್ಟಿಸುತ್ತಾನೆ ಹೊರತು ಹಿಂಬಾಲಕನನ್ನಲ್ಲ ಎಂದು" ತನ್ನ ಅನುಭವದಿಂದ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಿ ಅವರಲ್ಲಿಯೂ ನಟನೆಯೆಂಬ ನಾಯಕತ್ವ ಗುಣ ಬರಬೇಕೆಂದು ಶ್ರಮಿಸಿದವರರು..ಬಹುಶಃ ಇವರ ಬಗ್ಗೆ ಹೇಳ್ತಾ ಹೊರಟಾಗ ತನ್ನ ಕಲಾ ಜೀವನದಲ್ಲಿ ಕಷ್ಟದಿಂದ ಮೇಲೆದ್ದು ಬಂದಂತಹ ಕಲಾವಿದ. ತಾನೊಬ್ಬ ಕಲಾವಿದನಾಗಬೇಕು ಅಂತ ಬಂದು ಉಪನ್ಯಾಸಕನಾಗಿ ಉತ್ತಮ ನಟನಾಗಿ, ನಿರ್ದೇಶನಕನಾಗಿ, ರಂಗಭೂಮಿಯಲ್ಲಿ ಪಳಗಿ ,ಧಾರ್ಮಿಕ ವಿಚಾರಧಾರೆಯನ್ನು ತನ್ನೊಳಗೆ ಅಳವಡಿಸಿಕೊಂಡವರು. ಅಷ್ಟಕ್ಕೆ ಸುಮ್ಮನಾಗದೇ ತೆರೆಮರೆಯಲ್ಲಿರುವ ,ಗ್ರಾಮೀಣಭಾಗದಲ್ಲಿರುವ ಚಿಕ್ಕ ಪುಟ್ಟ ಪ್ರತಿಭೆಗಳಿಗೆ ಕಲಾವಿದನ ಸ್ಪರ್ಶ ಕೊಟ್ಟು ಬೆಳೆಸುತ್ತಿರುವವರು..ಅವರೇ ಸುರೇಂದ್ರ ಮೋಹನ್ ಮುದ್ರಾಡಿ..
1980 ಆಗಸ್ಟ್ 23 ರಂದು ಮುದ್ರಾಡಿಯ ದರ್ಮಯೋಗಿ ಮೋಹನ್ ಸ್ವಾಮಿಜಿ ಹಾಗೂ ಕಮಲ ಮೋಹನ್ ರವರ ನಾಲ್ಕು ಮಕ್ಕಳ ಪೈಕಿ ಕೊನೆಯ ಮಗನಾಗಿ ಜನಿಸಿದರು..ದೇವಸ್ಥಾನದ ಪರಿಸರದಲ್ಲಿ ಬೆಳೆದ ಇವರಿಗೆ ಸಂಸ್ಕೃತಿಯ ಪರಿಚಯ, ಧಾರ್ಮಿಕತೆಯ ವಿಚಾರಧಾರೆಗಳು ಮನೆ ಪರಿಸರದಲ್ಲಿಯೇ ಸಿಗಲೂ ಪ್ರಾರಂಭವಾಯಿತು..ಪ್ರಾಥಮಿಕ ಹೈಸ್ಕೂಲ್ ಶಿಕ್ಷಣವನ್ನು ಮುದ್ರಾಡಿಯಲ್ಲಿಯೇ ಪೂರೈಸಿದ ಇವರು,ಪದವಿಪೂರ್ವ ಶಿಕ್ಷಣವನ್ನು ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ,ಪದವಿ ಶಿಕ್ಷಣವನ್ನು ಹೆಬ್ರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದರು..
ಬಾಲ್ಯದಲ್ಲಿಯೇ ನಟನೆ ಹಾಗೂ ದೃಶ್ಯ ಮಾಧ್ಯಮದ ಕಡೆ ಒಲವು ಹೊಂದಿದಂತಹ ಇವರು ಶಾಲಾ ದಿನಗಳಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಬಹುಮಾನ ಪಡೆದವರು..ಪದವಿ ಶಿಕ್ಷಣದ ನಂತರ ನಟನೆಯ ಕಡೆ ಗಮನ ಹರಿಸಿ ಬೆಂಗಳೂರಿನ ಕಡೆ ತನ್ನ ಪಯಣವನ್ನು ಬೆಳೆಸುತ್ತಾರೆ.ಅಲ್ಲಿ ತನಗಾದ ಕೆಟ್ಟ ಅನುಭವವನ್ನು ಹಾಗೂ ಅವರು ಅಭಿನಯಿಸಲು ಪಟ್ಟಂತಹ ಕಷ್ಟ ಹೇಳತೀರಾದಾಗಿದೆ..
ಅಲ್ಲಿಂದ ನಂತರ"ಆಕಾಶವಾಣಿ"ಯಲ್ಲಿ ತುಳು ವಿಭಾಗದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು..ಆ ಸಮಯದಲ್ಲಿ ಇವರ ಸ್ನೇಹಿತರಾದಂತಹ ಆನಂದ ಪೂಜಾರಿ ಸೋಮೆಶ್ವರರವರು ಇವರನ್ನು ಬೆಂಗಳೂರಿನಿಂದ ಕರೆಸಿಕೊಂಡು ಎಂ.ಎ ಪರೀಕ್ಷೆಯನ್ನು ಬರೆಯುವಂತೆ ಪ್ರೆರೇಪಿಸಿದರು..ನಂತರ ಇವರಿಗೆ ಉದ್ಯೋಗವನ್ನು ಉಡುಪಿ ಮಹಿಳಾ ಕಾಲೇಜುನಲ್ಲಿ ದೊರಕಿಸಿಕೊಟ್ಟರು.ಅಲ್ಲಿ 2 ವರ್ಷ ವೃತ್ತಿಯನ್ನು ಪೂರೈಸಿದ ಇವರು ತೆಂಕನಿಡಿಯೂರಿನಲ್ಲಿ ಕಾಲೇಜ್ನಲ್ಲಿ 1 ವರ್ಷ ಕರ್ತವ್ಯವನ್ನು ಪೂರೈಸಿದ್ದಾರೆ..ಅಲ್ಲಿಂದ ಉದ್ಯಾವರದಲ್ಲಿ ಕನ್ನಡ ಉಪನ್ಯಾಸಕನಾಗಿ ಒಂದು ವರ್ಷ ,ಕಾರ್ಕಳ ಬೋರ್ಡ್ ಹೈಸ್ಕೂಲ್ನಲ್ಲಿ ಹತ್ತು ವರ್ಷ,ಸಾಣೂರು ಪಿಯು ಕಾಲೇಜುನಲ್ಲಿ 2 ವರ್ಷ ಸೇವೆಯನ್ನು ಮಾಡಿರುತ್ತಾರೆ..
ಅಭಿನಯದ ಕಡೆ ಒಲವನ್ನು ಹೊಂದಿದಂತಹ ಇವರು ಉಪನ್ಯಾಸಕ ವೃತ್ತಿಯ ನಡುನಡುವೆ ಬೆಂಗಳೂರಿನಲ್ಲಿ ಬಿ ಸುರೇಶ್ ನಿರ್ದೆಶನದ ಉದಯ ಟಿ ವಿಯಲ್ಲಿ ಪ್ರಸಾರವಾಗುತ್ತಿದ್ದ ಮದರಂಗಿ ಎಂಬ ದಾರಾವಾಹಿಯಲ್ಲಿ ಸತತ ಎರಡೂವರೆ ವರ್ಷ ಕಾಮಿಡಿ ಮತ್ತು ನೆಗೆಟಿವ್ ನಟನಾಗಿ ಅಭಿನಯವನ್ನು ಮಾಡಿದ್ದಾರೆ..ನಂತರ ಮೂರು ವರ್ಷಗಳ ಕಾಲ ಜೀವನದಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ.ಅದರ ನಡುವೆ ಬಿ ಸುರೇಶ್ ಸಾರಥ್ಯದ ಪ್ರಶಸ್ತಿ ವಿಜೇತ "ಉಪ್ಪಿನ ಕಾಗದ " ಎಂಬ ಸಿನೇಮಾದಲ್ಲಿ ನಟಿಸಿರುತ್ತಾರೆ.ನಂತರದ ದಿನಗಳಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಬಹ್ಮಗಂಟು, ಯಾರೇ ನೀ ಮೋಹಿನಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಇವಳೇ ವೀಣಾಪಾಣಿಯಲ್ಲಿಯೂ ನಟಿಸಿ ತಾನೊಬ್ಬ ಉತ್ತಮನಟ ಎಂದು ನಿರೂಪಿಸಿದ್ದಾರೆ..
ಸಿನೆಮಾ,ದಾರಾವಾಹಿ ಬಿಟ್ಟರೆ ನಾಟಕರಂಗದಲ್ಲಿಯೂ ಇವರು ಅಭಿನಯಿಸಿದ್ದಾರೆ.ಹಾಗೂ ನಾಟಕವನ್ನು ನಿರ್ದೇಶನ ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ..ಪ್ರತಿಭಾ ಕಾರಂಜಿಯ ಸಮಯದಲ್ಲಿ ನಾಟಕ ನಿರ್ದೇಶನವನ್ನು ಮಾಡಿ ಸಂಗೀತ ನಿರ್ದೇಶಕನಾಗಿ ನಾಟಕ ತಂಡಕ್ಕೆ ಪ್ರಶಸ್ತಿಯನ್ನು ದೊರಕಿಸಿಕೊಟ್ಟವರು..ತನ್ನ ಸ್ವಂತ ಅಭಿನಯಕ್ಕೆ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತಾರೆ..ಬೈಲೂರು ರಂಗ ಸನ್ನಿದಿಯ ಜೊತೆಗೆ ಚಂದ್ರಶೇಖರ ಕಂಬಾರ ರಚನೆಯ ಸರ್ಪಸಂಪಿಗೆ ಎಂಬ ನಾಟಕವನ್ನು ನಿರ್ದೇಶಿಸಿದ್ದಾರೆ..ಆ ನಾಟಕವು ತುಳು ಕೂಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಪ್ರಥಮ ಬಹುಮಾನ ಪಡೆದುದಲ್ಲದೇ ಆ ನಾಟಕಕ್ಕೆ ನಿರ್ದೇಶನ ಸೇರಿದಂತೆ ಒಟ್ಟು 15 ಪ್ರಶಸ್ತಿಗಳು ಬಂದಿರುತ್ತದೆ..ಅಲ್ಲದೇ ಇ ನಾಟಕ ಹಲವಾರು ಪ್ರದರ್ಶನ ಕಂಡು ಜನಮಾನಸದಲ್ಲಿ ಇಂದಿಗೂ ಅಚ್ಚಳೀಯದೇ ಉಳಿದಿದೆ..ಇವರು ನಿರ್ದೇಶಿಸಿದ ಇತರ ನಾಟಕಗಳು ತಿಪ್ಪಜ್ಜಿ ಸರ್ಕಲ್,ಶಿವಬೂತಿ,ದರಣಿ ಮಂಡಲ ಮದ್ಯದೊಳಗೆ..
ಅಭಿನಯಿಸಿದಂತಹ ನಾಟಕಗಳು, ಈ ನಲಿಕೆದಾಯೆ ನಾಟಕಕ್ಕೆ ಉತ್ತಮ ನಟ ಪ್ರಶಸ್ತಿ, ಪಿಲಿಪತ್ತಿ ಗಡಸು,ದಂಗೆಯ ಮುಂಚಿನ ದಿನಗಳು,ಮೂರು ಹೆಜ್ಜೆ ಮೂರು ಲೋಕ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ..
ತನ್ನ ಮನೆಯಲ್ಲಿಯೇ ಇದ್ದಂತಹ ನಮ್ಮ ತುಳುವೆರ್ ಸಂಘಟನೇಯಲ್ಲಿಯೂ ಅಭಿನಯಿಸಿ ,ಅದರಲ್ಲಿಯೂ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡವರು..
ಸರ್ಕಾರದ ಅಡಿಯಲ್ಲಿ ಜನಜಾಗೃತಿ ಮೂಡಿಸುವಂತಹ ಹಲವಾರು ಬೀದಿನಾಟಕವನ್ನು ನಿರ್ಮಿಸಿ,ಹಲವಾರು ಪ್ರದರ್ಶವನ್ನು ನೀಡಿರುತ್ತಾರೆ..
ಅಲ್ಲದೇ ಸ್ವಸ್ತಿಕ್ ಪ್ರೊಡಕ್ಷನ್ ಎಂಬ ಬ್ಯಾನರ್ನಡಿಯಲ್ಲಿ ಹಲವಾರು ಕಲಾಸೇವೆಯನ್ನು ಮಾಡಿರುವಂತಹ ಇವರು ಪ್ರಸ್ತುತ ನಮ್ಮ ಕುಡ್ಲ 24×7ನಲ್ಲಿ ಪ್ರಸಾರವಾಗುತ್ತಿರುವ "ತುಳುನಾಡ ಬಂಗಾರ್ ಗರೋಡಿಲು " ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಾ,ಇದರ ಮೂಲಕ ಹಲವಾರು ಹೊಸ ಪ್ರತಿಭೆಗನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾರೆ..ಇದು ಇಂದಿಗೂ ಉತ್ತಮವಾಗಿ ಮೂಡಿಬರುತ್ತಿದ್ದು.ತುಳುನಾಡಿನ ಪ್ರತಿಯೊಂದು ಗರಡಿಗಳ ಬಗ್ಗೆ ಸಂಪೂರ್ಣ ವಿಚಾರವನ್ನು ತಿಳಿಸುತ್ತದೆ..
ಧಾರ್ಮಿಕ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಇವರು ದೈವ ದೇವರ ಬಗ್ಗೆ ಅಪಾರ ಭಕ್ತಿಯನ್ನು ಮೈಗೂಡಿಸಿಕೊಂಡವರು..ನಾಗ ಪಾತ್ರಿಯಾಗಿಯೂ ಧಾರ್ಮಿಕ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ..
ಎಲ್ಲಾ ತಂದೆಯವರಿಗೂ ತನ್ನ ಮಗ ಡಾಕ್ಟರ್ ,ಇಂಜೀನಿಯರ್ ಆಗಬೇಕೆಂಬ ಹಂಬಲವಿರುತ್ತದೆ..ಆದರೆ ಸುರೇಂದ್ರ ಮೋಹನ್ರವರ ತಂದೆಗೆ ತನ್ನ ಮಗ ಕಲಾವಿದನಾಗಬೇಕೆಂಬ ಆಸೆ ತುಂಬಾನೇ ಇತ್ತು..ಏಕೆಂದರೆ ಅವರ ತಂದೆ ಯಕ್ಷಗಾನದಲ್ಲಿ ಚಿಕ್ಕ ಚಿಕ್ಕ ಪಾತ್ರವನ್ನು ಮಾಡಲು ತುಂಬಾ ಒದ್ದಾಡಿರುವಂತವರು,ಇಂತಹ ಸ್ಥಿತಿ ನನ್ನ ಮಗನಿಗೆ ಬರಬಾರದೆಂದು ತನ್ನ ಮಗನಿಗೆ ಒಳ್ಳೆಯ ಚಿಂತನೆಯನ್ನು ಮನದೊಳಗೆ ತುಂಬಿ ಒಂದು ಉತ್ತಮವಾದಂತಹ ಕಲಾವಿದನನ್ನಾಗಿ ಮಾಡಿದವರು.ಆದ್ದರಿಂದ ಸುರೇಂದ್ರ ಮೋಹನ್ ರವರು ನನಗೆ ನನ್ನ ತಂದೆಯೆ ಮೊದಲ ಗುರು ಹಾಗೂ ಸ್ಪೂರ್ತಿ ಎಂದು ಹೇಳುತ್ತಾರೆ..
ಇವರಿಗೆ ಸಿನೆಮಾ,ದಾರಾವಾಹಿಯಲ್ಲಿ ಅವಕಾಶ ಕೊಟ್ಟಂತಹ ಬಿ ಸುರೇಶ್ರವರನ್ನು ಸದಾ ನೆನಪಿಸುತ್ತಾರೆ.
ಕಲೆಯ ಅಭಿರುಚಿ ಬೆಳೆಯಲು ಮುಖ್ಯಕಾರಣ ರಂಗನಾಟಕ..ರಂಗನಾಟಕಕ್ಕೆ ನನ್ನ ಪರಿಚಯಿಸಿದವರು ಶ್ರೀ ಕೃಷ್ಣಮೂರ್ತಿ ಕವತ್ತಾರು,ನಾಟಕರಂಗಕ್ಕೆ ಪರಿಚಯಿಸಿದ ಜೀವನ್ ರಾಮ್ ಸುಳ್ಯ ಹಾಗೂ ಶ್ರೀಪಾದ್ ಭಟ್ ಮುಂತಾದವರನ್ನು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ ಸುರೇಂದ್ರ ಮೋಹನ್ರವರು..
ಇವರ ಜೀವನದ ಮುಖ್ಯ ಉದ್ದೇಶವೇ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ,ಅವರನ್ನು ಒಂದು ಪೂರ್ಣಪ್ರಮಾಣದ ಕಲಾವಿದರನ್ನಾಗಿ ಮಾಡುವಂತಹದು.. ಇವರ ಕಲಾ ಜೀವನದಲ್ಲಿ ಇವರು ಪಟ್ಟಂತಹ ಕಷ್ಟ ಮೋಸ ಹೋದ ರೀತಿ ಯಾರಿಗೂ ಇ ಸ್ಥಿತಿ ಬರಬಾರದೆಂದು ಶ್ರಮಿಸಿರುತ್ತಿರುವವರು..ಇವರ ಪ್ರಕಾರ ಇಂದಿನ ಸ್ವರ್ದಾತ್ಮಕ ಜಗತ್ತಿನಲ್ಲಿ ಕೆಲವೊಂದಿಷ್ಟು ಗ್ರಾಮೀಣ ಪ್ರತಿಭೆಗಳು ಇಂದಿಗೂ ತೆರೆಮರೆಯಲ್ಲಿವೆ.ಅವರಿಗೂ ಅವಕಾಶ ಸಿಗಬೇಕು.ಅವರು ಬೆಳೆಯಬೇಕು ಎಂದು ಹೇಳುತ್ತಾರೆ.ಅವರು ಒಂದು ಉತ್ತಮ ಕಲಾವಿದರಾದರೆ ಅವರು ನಗು ತುಂಬಿದ ಮಾತು ಅಷ್ಟೇ ಸಾಕು ಎಂದು ಹೇಳುತ್ತಾರೆ..
ತನ್ನ ಕಲಾ ಜೀವನದಲ್ಲಿ ಹಠ ಛಲದೊಂದಿಗೆ ಮಾದರಿ ವ್ಯಕ್ತಿಯಾಗಿ ಪ್ರತಿಭೆಗಳ ಪಾಲಿನ ಬೆಳಕಾಗಿ,ಮುದ್ರಾಡಿ ಮಣ್ಣಕಂಪನ್ನು ಪಸರಿಸುತ್ತಿರುವ ಶ್ರೀಯುತ ಸುರೇಂದ್ರ ಮೋಹನ್ ರವರಿಗೆ ತುಳುನಾಡಿನ ದೈವ ದೇವರುಗಳ ಹಾಗೂ ಗುರುಹಿರಿಯರ ಆಶೀರ್ವಾದ ಸದಾ ಇರಲಿ...