9 May 2020

ಸಹಾಯ ಮಾಡಿ ಸ್ನೇಹಿತರೇ..

*ಸಹಾಯ ಮಾಡಿ ಸ್ನೇಹಿತರೇ* 
ಹೆತ್ತ ತಾಯಿ ತನ್ನ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎನ್ನುವುದಕ್ಕೆ ನಮ್ಮ ನಡುವೆಯೇ ಮತ್ತೊಂದು ಉದಾಹರಣೆ ಸಿಕ್ಕಿದೆ. *ಇಲ್ಲೊಬ್ಬಳು ಮಹಾತಾಯಿ ತನ್ನ ಏಳು ತಿಂಗಳ ಮಗುವಿನ ಲಿವರ್ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ತನ್ನ ಲಿವರ್ ನ ಭಾಗವನ್ನೇ ಮರುಜೋಡಣೆಗೆ ನೀಡಲು ಸಿದ್ಧಳಾಗುತ್ತಿದ್ದಾಳೆ....* ಆದರೆ ಕಡು ಬಡತನದಲ್ಲಿ ಇರುವ ಇವರ
 ಹಣಕಾಸಿನ ಸಮಸ್ಯೆಯಿಂದ ಈ ಪುಣ್ಯ ಕಾರ್ಯ  ಅರ್ಧಕ್ಕೆ ನಿಂತು ಹೋಗಿದೆ.. ಆತ್ಮೀಯರೇ ಆ ಮಹಾತಾಯಿ  ಬೇರಾರೂ ಅಲ್ಲ ಉಡುಪಿ ಜಿಲ್ಲೆಯ ಬೈಂದೂರಿನ ಬಿ.ಆರ್.ಸಿ ಕಛೇರಿಯಲ್ಲಿ ಗುತ್ತಿಗೆ ಆಧಾರದ ಡಿ-ಗ್ರೂಪ್ ನೌಕರಳಾಗಿ ಕೆಲಸ ಮಾಡುತ್ತಿರುವ *ಶ್ರೀಮತಿ ರೇವತಿ ಪೂಜಾರಿಯವರು*.. ಏಳು ತಿಂಗಳ ಹಿಂದೆ ಜನಿಸಿದ  ಮುದ್ದಾದ ಮಗು ವಿಕ್ರಾಂತ್.ಎಮ್ ಪ್ರಾರಂಭದಲ್ಲಿ ಬಹಳ ಲವಲವಿಕೆಯಿಂದ ಇದ್ದು ಎಲ್ಲರ ಕೈಮುದ್ದಾಗಿ ಮನೆಮಂದಿಯ ಸಂತೋಷ ಕ್ಕೆ ಇಮ್ಮಡಿ ನೀಡಿದ್ದ..ಆದರೆ ಕೆಲವೆ ದಿನಗಳಲ್ಲಿ ಒಂದೊಂದಾಗಿ  ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು..ಮಗನಿಗಾಗಿ  ಅಲ್ಲಿ ಇಲ್ಲಿ ಸಾಲಮಾಡಿ  ಜೊತೆಗೆ  ಇ.ಎಸ್.ಐ ಸೌಲಭ್ಯ ವನ್ನು ಸಂಪೂರ್ಣವಾಗಿ ಉಪಯೋಗಿಸಿ  ನಿರಂತರ ಏಳು ತಿಂಗಳ ಕಾಲ  ಮಣಿಪಾಲ ಮತ್ತು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿರುತ್ತಾರೆ ... ಸಾಲಭಾದೆಯಿಂದ  ನೊಂದು ಬೆಂದಿರುವ ಈ ಕುಟುಂಬಕ್ಕೆ   ಆ ವೈದ್ಯಕೀಯ ವರದಿ ಆಘಾತಕಾರಿಯಾಗಿ ಪರಿಣಮಿಸಿತು... ಬರಸಿಡಿಲಿನಂತಹ  ಆ ವರದಿಯಲ್ಲಿ  ಮಗುವಿಗೆ ತುರ್ತಾಗಿ ಲಿವರ್ ಕಸಿ ಮಾಡಬೇಕಾದದ್ದು ತೀರ ಅನಿವಾರ್ಯವಾಗಿತ್ತು ; ಅದು ಕೂಡ ಬೆಂಗಳೂರಿನ ಪ್ರತಿಷ್ಠಿತ ನಾರಾಯಣ ಹೃದಯಾಲಯದಲ್ಲಿ... ಕರೋನ ಲಾಕ್ಡೌನ್ ನಿಂದ  
ಹೋಟೆಲ್ ನಲ್ಲಿ ದುಡಿಯುವ ಗಂಡ ಕೆಲಸವಿಲ್ಲದೆ ದಿನದೂಡಲು ಒದ್ದಾಡುತ್ತಿದ್ದ  ಈ ಸಂದರ್ಭದಲ್ಲಿ 25 ಲಕ್ಷ ಮೀರಿರುವ ಶಸ್ತ್ರಚಿಕಿತ್ಸೆ & ಇತರ ವೆಚ್ಚದ ಅಂದಾಜು ಪಟ್ಟಿ ನೋಡಿಯೇ ಕಣ್ಣೀರು ಮಾತ್ರ ಮಾತಾಡುತ್ತಿತ್ತು ... ಎಲ್ಲರೂ ಕೈಚೆಲ್ಲಿ ಕುಳಿತು ರೋದಿಸುತ್ತಿದ್ದಾಗ , ಹೆತ್ತ ತಾಯಿ ರೇವತಿಗೆ ಮಾತ್ರ ಅದೇನೊ ಒಂದು ರೀತಿಯ ಧೈರ್ಯ ,ನನ್ನ ಮಗನನ್ನು ಉಳಿಸಿಕೊಳ್ಳುತ್ತೇನೆಂಬ ಆತ್ಮವಿಶ್ವಾಸ ,ತಡಮಾಡದೆ  ಬೆಂಗಳೂರಿನ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಸ್ವಲ್ಪ ದಿನದ ಮಟ್ಟಿಗೆ ಉಳಿದುಕೊಳ್ಳಲು ಸ್ಥಳಾವಕಾಶ ಕೇಳಿ ಮಗುವನ್ನು ಹೆಗಲಿಗೆ ಹಾಕಿ ಹೊರಟೆ ಬಿಟ್ಟಳು ..ಲಾಕ್ ಡೌನ್ ನಿಂದ ಬೆಂಗಳೂರಿನ ಲ್ಲಿ ಸಂಚಾರ ಕಷ್ಟ ವಾಗಿದ್ದರೂ ಕೂಡ ಅವರಿವರ ಸಹಾಯ ಬೇಡಿ ತನಗೆ ಮತ್ತು ತನ್ನ ಮಗುವಿಗೆ ಶಸ್ತ್ರಚಿಕಿತ್ಸೆಯ ಪೂರ್ವದಲ್ಲಿ ನಡೆಯಬೇಕಾದ ಹತ್ತಾರು ವೈದ್ಯಕೀಯ ಪರೀಕ್ಷೆಗಳಿಗಾಗಿ ಪ್ರತಿದಿನ ಓಡಾಡುತ್ತಿದ್ದಾಳೆ..ಯಾರಾದರು ಹಣಕಾಸಿನ ಸಹಾಯ ಮಾಡಬಹುದು  ತನ್ನ ಲಿವರ್ ನ ಭಾಗ ತೆಗೆದು ಮಗನಿಗೆ ಕಸಿ ಮಾಡಬಹುದು ,ನನ್ನ ಮಗು ಗುಣಮುಖ ಆಗಬಹುದು ಎಂಬ ಒಂದೇ ಒಂದು ನಿರೀಕ್ಷೆ ಯಿಂದ ಈಗಲೂ ಆಸ್ಪತ್ರೆಯಲ್ಲಿಯೇ ಇದ್ದಾಳೆ...  ಒಬ್ಬ ಮಹಾತಾಯಿಯ  ಕನಸು ಕಮರಿ ಹೋಗಲು ಬಿಡಬಾರದು.. ನಿಮ್ಮ ಆ ಒಂದು ಸಹಾಯದಿಂದ ಮಾತ್ರ ಈ ಕಾರ್ಯ ಸಾಧ್ಯ.. ದಯವಿಟ್ಟು ತಮ್ಮ ಕೈಲಾದಷ್ಟು ಧನ ಸಹಾಯವನ್ನು ಆ ತಾಯಿ ಯ ಖಾತೆಗೆ ಜಮೆಮಾಡಿ, ಮನುಕುಲವೇ ಸಂಕಷ್ಟ ದಲ್ಲಿರುವ ಈ ಸಮಯ ದಲ್ಲಿ ಮಾನವೀಯತೆ ಮೆರೆದು ಒಂದು ಜೀವ ಉಳಿಸೋಣ...  ತಾಯಿ ಮಗು ಇಬ್ಬರೂ ಸಂಪೂರ್ಣ ಗುಣಮುಖರಾಗಿ ಹಿಂದಿರುಗಲಿ ಎಂದು ಭಗವಂತನಲ್ಲಿ ನಿವೇದಿಸಿ ಕೊಳ್ಳೋಣ... ದಯವಿಟ್ಟು ಸ್ನೇಹಿತರಿಗೆ ಈ ಮೆಸೇಜ್ ಇಂದೇ ಶೇರ್ ಮಾಡುವ ಮತ್ತು ಅವರಿಗೆ  ಪೋನ್ ಮಾಡಿ ಈ ತಾಯಿಯ ಪರವಾಗಿ ನಾವೇ ಕೇಳಿಕೊಳ್ಳುವ.. ನಂತರ ಇನ್ನೊಮ್ಮೆ ಪೋನ್ ಮಾಡಿ ಖಾತರಿ ಮಾಡಿಕೊಳ್ಳುವ ...ಖಂಡಿತವಾಗಿಯೂ ಈ ಪುಣ್ಯ ನಮ್ಮ ನಿಮ್ಮ ಕುಟುಂಬವನ್ನು ಇನ್ನೆಲ್ಲೋ ಕಾಪಾಡುತ್ತದೆ .. ಸ್ನೇಹಿತರೆ ದಯವಿಟ್ಟು ಮರೆಯಬೇಡಿ... 🙏🏻ನಮಸ್ಕಾರ🙏🏻
*Narayana hrudayalaya (Patient ID--10020001221499)*

A/C  details
Name : Revathi
SBI Yedthare branch
SBIN0040623
A/c no : 37076857511

Mobile no: Revathi 9880851570 (Google pay)