*ಪಡುಮಲೆಯ ಅಭಿವೃದ್ಧಿ, ಗರಡಿ ಕಟ್ಟುವ ವಿಷಯದಲ್ಲಿ ಹಾಗೂ ಪಡುಮಲೆ ಭೂಮಿಗೆ ಶಾಪ ಇದೆ ಎಂದು ಜನರನ್ನು ದಿಕ್ಕು ತಪ್ಪಿಸುವುದು ತಪ್ಪು*
ಪಡುಮಲೆ ಜನರ ಸಹನೆಗು ಒಂದು ಮಿತಿ ಇದೆ
ತುಳುನಾಡಿನ ಇತಿಹಾಸದಲ್ಲಿ ಪಡುಮಲೆ(ಪರ್ಮಲೆ) ಎಂಬ ಊರು ಬಹಳ ಪ್ರಸಿದ್ದಿ ಪಡೆದಿದ್ದು, ಇದು ಮಹಾವಿಷ್ಣು ದೇವರು ನೆಲೆಸಿರುವ, ಕುಂಬಳೆ ಸೀಮೆಯಲ್ಲಿ ಇರುವೆರ್ ಉಲ್ಲಾಕ್ಲು(ಪೂಮಾನಿ ಕಿನ್ನಿಮಾನಿ) ನೆಲೆಸಿದ ಆದಿ ಸ್ಥಳ, ಸ್ವರ್ಣ ಕೇದಗೆ- ದೇಯಿ ಬೈದೆತಿ ಹಾಗೂ ಕೋಟಿ ಚೆನ್ನಯರು ಜನಿಸಿದ ಪುಣ್ಯಭೂಮಿ. ಇಂದಿಗೂ ಇಲ್ಲಿ ದೇವರ ಉತ್ಸವ, ಉಲ್ಲಾಕುಳು ದೈವ ನೇಮ ಸಂಪ್ರಾದಯ ಪ್ರಕಾರವೇ ನಡೆದುಕೊಂಡು ಬರುತ್ತಿದೆ. ಕೋಟಿ ಚೆನ್ನಯರ ಜೀವನದ ಕುರುಹುಗಳು ಈಗಲೂ ಇದ್ದು ಚಾರಿತ್ರಿಕ ಸ್ಥಳ ಕತ್ತಲೆಯಿಂದ ಬೆಳಕೆಗೆ ಬರುವ ಸಮಯ ಬಂದಿದೆ.
ಪಡುಮಲೆಯಲ್ಲಿ ಅನ್ಯಾಯ, ದರ್ಪದ ಮಂತ್ರಿ ಮಲ್ಲಯ್ಯ ಬುದ್ಯಂತ, ಬಲ್ಲಾಲರಿಗಿಂತಲು ಅತೀ ದರ್ಪ ಹಾಗೂ ಬಡವರು ಮೇಲೆ ಬಂದರೆ ಸಹಿಸಲಾಗದ ವ್ಯಕ್ತಿತ್ವ ಕೋಟಿ ಚೆನ್ನಯರನ್ನು ಕೂಡ ಕಂಡರೆ ಮಲ್ಲಯ್ಯ ಬುದ್ಯಂತನಿಗೆ ಸಹಿಸಲಾಗುತ್ತಿರಲಿಲ್ಲ, ಬಲ್ಲಾಲರು ಸಾಕಿದ ಮಕ್ಕಳಾದ ಕೋಟಿ ಚೆನ್ನಯರಿಗೆ ಗರಡಿ ವಿದ್ಯೆ ಕಳಿಸಿ ಹಾಗೂ ದುಡಿಯಲು ಭೂಮಿನೀಡಿ ಅದರಲ್ಲಿ ಬಂದ ಫಲವತ್ತಾದ ಬೆಳೆಯನ್ನು ಮಂತ್ರಿ ಬುದ್ಯಂತ ನಾಶ ಮಾಡಿದ ಕಾರಣ ಅವನನ್ನು ಕೊಂದು ಬಲ್ಲಾಲರ ನ್ಯಾಯಚಾವಡಿಗೆ ಹೋದಾಗ ಬಲ್ಲಾಲರು ಆ ಸ್ಥಾನದಲ್ಲಿದ್ದು ನ್ಯಾಯ ತೀರ್ಮಾಣ ಮಾಡುವುದು ವಾಡಿಕೆ, ತಾನು ಸಾಕಿದ ಮಕ್ಕಳಾದರೂ ಅವರಿಗೊಂದು ನ್ಯಾಯ ಊರವರಿಗೊಂದು ನ್ಯಾಯ ಎಂಬ ಬೇಧ ಭಾವ ಅರಸನಾದವನಿಗೆ ಇರುವುದಿಲ್ಲ. ಬಲ್ಲಾಲರಿಗೆ ಕೋಟಿ ಚೆನ್ನಯರು ಮಾಡಿದ್ದು ಸರಿ ಇದ್ದರು ಅವರ ಪರವಾಗಿ ಮಾತನಾಡಲು ರಾಜಧರ್ಮ ಒಪ್ಪಲಿಲ್ಲ, ಕೋಟಿ ಚೆನ್ನಯರ ಸ್ವಭಾವವೆ ಅಂತದ್ದಾಗಿತ್ತು. ಕೊಲೆ ಮಾಡಿ ಬಂದ ಕಾರಣ ಅವರಿಗೆ ಶಿಕ್ಷೆ ನೀಡಲು ಮುಂದಾಗುತ್ತಾರೆ. ಆ ಹೊತ್ತಿಗೆ ಕೋಟಿ ಚೆನ್ನಯ ಹಾಗೂ ಬಲ್ಲಾಲರಲ್ಲಿ ಮಾತು ಆರಂಭಗೊಂಡು ಕೋಟಿ ಚೆನ್ನಯರು ತನ್ನ ತಾಯಿಗೆ ಕೊಟ್ಟ ಬಾಷೆಯನ್ನು ನೆನಪು ಮಾಡುತ್ತಾರೆ, ನಿಜವಾಗಿಯು ಕೋಟಿ ಚೆನ್ನಯರಿಗೆ ಆಸೆ ಎಂಬುದು ಇರಲಿಲ್ಲ, ಆದರೂ ಅವರು ಬಲ್ಲಾಲರಲ್ಲಿ ಪಾಡುಮಲೆ ಬಿಟ್ಟು ಬೇರೆ ಊರು ಸೇರಲು ಬೇಕೆಂದೆ ಕೇಳಿದರ ಎಂಬುದು ಸಂಶಯ. ಬಲ್ಲಾಲರು ಹಾಗೆ ತಾನು ಸಾಕಿದ ಮಕ್ಕಲಾದರು ಆರೋಪಿ ಸ್ಥಾನದಲ್ಲಿರುವ ಕೋಟಿ ಚೆನ್ನಯರಿಗೆ ಕೇಳಿದ್ದನ್ನು ಕೊಡಲು ರಾಜಧರ್ಮ ಬಿಡಲಿಲ್ಲ. ಆ ಹೊತ್ತಿಗೆ ಕೋಟಿ ಚೆನ್ನಯರು ನಾವು ಈ ಊರು ಬಿಟ್ಟು ತೆರಳುತ್ತೇವೆ ಎಂದು ಬೋದಿಗೆಯ ಕಂಬಕ್ಕೆ ಗುರುತು ಮಾಡಿ ಹೆಜ್ಜೆ ಇಟ್ಟಾಗ ಬಲ್ಲಾಲರಿಗೆ ಕಣ್ಣೀರು ಬರುತ್ತದೆ, ಅವರು ಕನಸಿನಲ್ಲು ಕೋಟಿ ಚೆನ್ನಯರು ಊರು ಬಿಡುವ ಯೋಚನೆಯೇ ಮಾಡಿರಲಿಲ್ಲ, ಬಲ್ಲಾಲರಿಗೆ ತಾನು ಮಾತಿಗೆ ತಪ್ಪಿದೆ ಎಂದು ಪಶ್ಚಾತಾಪ ಪಟ್ಟು ಹೆಜ್ಜೆ ಇಡುತ್ತಿದ್ದ ಕೋಟಿ ಚೆನ್ನಯರಲ್ಲಿ ಇನ್ನು ಯಾವಾಗ ಬರುವಿರಿ ಮಕ್ಕಳೆ ಕೇಳಿದಾಗ ಕಠಿನವಾದ ನಡೆಯಬಾರದ ಸಂಗತಿಗಳನ್ನು ಹೇಳಿ ಪಡುಮಲೆ ಬಿಟ್ಟು ಹೊರಡುವಾಗ ಬಲ್ಲಾಲರಿಗೆ ಆಗಲಿ ಪಡುಮಲೆಗಡ ಯಾವುದೇ ಶಾಪ ನೀಡಲಿಲ್ಲ. ಮುಂದಕ್ಕೆ ಪಂಜ ಸೀಮೆಗೆ ಹೋಗಿ ಅಲ್ಲಿ ಪಡುಮಲೆ ಬಲ್ಲಾಲರು ಕೇಮರ ಬಲ್ಲಾಲರಿಗೆ ಕೋಟಿ ಚೆನ್ನಯರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಲ್ಲಿ ಎಂದು ಬೆರದ ಓಲೆಯನ್ನು ಪಂಜದ ಮಂತ್ರಿ ಚಂದುಗಿಡಿ ತನ್ನ ಕುತಂತ್ರದಿಂದ ಕೇಮರ ಬಲ್ಲಾಲರಿಗೆ ತಪ್ಪುತಪ್ಪು ಓದಿ ತಿಳಿಸಿ ಕೋಟಿ ಚೆನ್ನಯರನ್ನು ಕತ್ತಲೆ ಕೋಣೆಗೆ ಹಾಕಿ ಅಲ್ಲಿಂದ ಅವರು ಕೊನೆಗೆ ಎಣ್ಮೂರಿಗೆ ಹೋಗಿ ಅಲ್ಲಿ ನೆಲೆಸಿದರು ಎಂಬುದು ಪ್ರತೀತಿ. ಕೋಟಿ ಚೆನ್ನಯರು ಗಡುವಿಟ್ಟು ಹೋದ ನಂತರ ಅವರು ಮತ್ತೆ ಪಡುಮಲೆ ಸೀಮೆಗೆ ಜೀವಿತ ಕಾಲದಲ್ಲಿ ಮತ್ತೆ ಬಂದ ಉಲ್ಲೇಖ ಎಲ್ಲೂ ಇಲ್ಲ ಹಾಗೆ ನೋಡಿದರೆ ಅವರು ಸಾಯನ ಬೈದ್ಯರ ಮನೆಗೆ ಉಲ್ಲೇಖ ಕೂಡ ಎಲ್ಲೂ ಇಲ್ಲ. ಕೋಟಿ ಚೆನ್ನಯರ ಮರಣದ ಕಾಲದಲ್ಲು ಪಡುಮಲೆ ಬಲ್ಲಾಲರು ತಪ್ಪಿ ಬಿಟ್ಟ ಬಾನ ಎಂದು ಕೋಟಿಯಲ್ಲಿ ಹೇಳಿದಾವ ಅವರನ್ನು ಕ್ಷಮಿಸಿದ್ದಾರೆ ವಿನಃ ಶಾಪ ನೀಡಲಿಲ್ಲ.
ಈ ಬಗ್ಗೆ ಹಲವು ಅಧ್ಯಯನಕಾರರು ಸಂಶೋಧನೆ ಮಾಡಿದವರು ಇದ್ದರು ಕೊನೆಗೆ ಅವರ ಬಗ್ಗೆ ಪರಿಪೂರ್ಣವಾಗಿ ಸಂಶೋಧಿಸಲು ಯಾರಿಂದಲು ಸಾಧ್ಯವಗಲಿಲ್ಲ. ಎಲ್ಲಾರು ಪಡುಮಲೆ ಬಲ್ಲಾಲರನ್ನು ವೈರಿಯಂತೆ ಬಿಂಬಿಸಿದ್ದಾರೆ. ನಿಜವಾಗಿ ಅವರಲ್ಲಿ ವೈರತ್ವ ಏನಿತ್ತು, ತಾನು ಸಾಕಿದ ಮಕ್ಕಳು ಕೇಳಿದನ್ನು ಕೊಡುವುದಿಲ್ಲ ಎಂದಾಗ ಮಕ್ಕಳು ಮನೆಯೆ ಬಿಟ್ಟು ಹೋಗಲು ಮುಂದಾಗುತ್ತಾರೆ ಎಂದು ಅವರಿಗೂ ತಿಳಿಯಲಿಲ್ಲ. ಕೋಟಿ ಚೆನ್ನಯರ ಜೀವನದ ಸಂಪೂರ್ಣ ಕತೆಯ ಆಧಾರ ಜನಪದೀಯವಾಗಿ ಮೌಖಿಕವಾಗಿ ಪಾರ್ದಾನದ ಆಧಾರದಲ್ಲಿ ಉಳಿಸಿಕೋಂಡು ಬಂದಿದ್ದಾರೆ ಕೋಟಿ ಚೆನ್ನಯ ಕಟ್ಟುವ ಜನತೆ. ಪಾರ್ದನದಲ್ಲಿ ಕೂಡ ಸಂಪೂರ್ಣ ಕತೆ ಸಿಗದಿದ್ದರು ಆ ಸಂಧಿಗೆ ಬಹಳ ಪ್ರಾಮುಖ್ಯತೆ ಇದೆ, ಹಾಗೆಯೆ ಕೋಟಿ ಚೆನ್ನಯರು ನಡೆದಾಡಿದ ಭೂಮಿಯಲ್ಲಿ ಇರುವ ಕುರುಹುಗಳ ಸಾಕ್ಷಿಯ ಆಧಾರದಲ್ಲಿ ಹಿರಿಯರು ಹೇಳಿರುವ ಕತೆಗು ಪ್ರಾಮುಖ್ಯತೆ ಇದೆ.
ಮುಖ್ಯವಾಗಿ ಕೋಟಿ ಚೆನ್ನಯರ ಕಾಲದ ನಂತರ, ಕೋಟಿಚೆನ್ನಯರ ಕಾಲದ ಪಡುಮಲೆಯ ಕುಜುಂಬ ಮುದ್ಯ ಬಲ್ಲಾಲರ ಕಾಲ ಕಳೆದ ನಂತರ ಪಡುಮಲೆಯಲ್ಲಿ ಯಾರು ಬಲ್ಲಾಲರಾಗಿದ್ದರೆಂಬುದು ಉಲ್ಲೇಖವಿಲ್ಲ. ಆದರು ಸರಿಸುಮಾರು 200-300 ವರುಷಗಳ ಹಿಂದೆ ಕತೆಯ ಪ್ರಕಾರ ಹಿಂದಿನಿಂದಲೂ ಪಡುಮಲೆಯಲ್ಲಿ ಬಲ್ಲಾಲರ ಮುಕಾಂತರವೇ ಆರಾಧಿಸಲ್ಪಡಿತ್ತಿದ್ದ ಉಲ್ಲಾಕುಳು ದೈವಗಳ ಆರಾಧನೆ ಪ್ರಮುಖವಾದದ್ದು. ಒಂದು ದಿನ ಉಲ್ಲಾಕುಳು ದೈವಗಳನ್ನು ಪರೀಕ್ಷೆ ಮಾಡಲು ಬಲ್ಲಾಲ, ಮಲಯಾಲಿ ಬಿಲ್ಲವ, ಮನಿಯಾನಿ ಜಾತಿಗೆ ಸಂಬಂಧ ಪಟ್ಟ ವ್ಯಕ್ತಿಗಳು ಪ್ರಯತ್ನ ಪಟ್ಟು ಅದರಲ್ಲಿ ವಿಫಲರಾಗಿ ಉಲ್ಲಾಕುಳು ದೈವಗಳ ಶಾಪಕ್ಕೆ ಗುರಿಯಾದರು ಎಂಬುದು ನಂಬಿಕೆ, ಆ ಕಾಲದಲ್ಲಿ ಉಲ್ಲಾಕುಳು ದೈವಗಳ ಬಂಡಿ ಹೊತ್ತಿ ಉರಿಯಿತಂತೆ ಆ ಕಾರಣಕ್ಕಾಗಿ ಇಂದಿಗೂ ಪಡುಮಲೆಯಲ್ಲಿ ಬಲ್ಲಾಲ, ಮಲಯಾಲಿ ಬಿಲ್ಲವ, ಮನಿಯಾನಿ, ತುಳು ಬ್ರಾಹ್ಮನ ಜಾತಿಗಳ ಜನರು ಅಲ್ಲಿ ನೆಲೆಸಲಿಲ್ಲ. ಇಂದು ಕೂಡ ಆ ನಾಲ್ಕು ಜಾತಿಗೆ ಸಂಬಂಧ ಪಟ್ಟವರು ಅಲ್ಲಿ ಇಲ್ಲ. ಅಂದಿನ ಕಾಲದಲ್ಲಿ ಬಲ್ಲಾಲರ ಸಂತತಿ ನಾಶವಾಗಿ ಉಲ್ಲಾಕುಳು ದೈವಗಳ ನೇಮದ ಜವಬ್ದಾರಿಯನ್ನು ನೆಲ್ಲಿಕಳ ಗುತ್ತಿನವರು ನಡೆಸುತ್ತಿದ್ದರು ಎಂಬುದು ಪ್ರತೀತಿ, ನಂತರದ ದಿನಗಳಲ್ಲಿ ಬದಲಾವಣೆಯಾಗುತ್ತ ಹೋಯಿತು. ಈಗಳು ಉಲ್ಲಾಕುಳು ದೈವ ನೆಲ್ಲಿಕಳ ಗುತ್ತಿನವರನ್ನು ಕರೆಯುವ ಕ್ರಮ ಇದೆ.
ಕೋಟಿ ಚೆನ್ನಯರು ಆರಾಧನಾ ಶಕ್ತಿಗಳಾಗಿದ್ದಾರೆ, ಕಾಯ ಬಿಡುವ ಹೊತ್ತಿನಲ್ಲಿ ಅವರು ಎನ್ಮೂರಿನ ದೇವು ಬಲ್ಲಾಲರಲ್ಲಿ ಗರಡಿ ಕಟ್ಟಿಸಿ ಎಂದದ್ದು ಎಂದು ಕೋಟಿ ಚೆನ್ನಯರ ನೇಮದ ಸಂದಿಯಲ್ಲಿ ಇದೆ. ನಂತರ ಅದೆಷ್ಟೋ ಮಣ್ಣಿನಲ್ಲಿ ಅವರು ತಮ್ಮ ದೃಷ್ಟಿ ಹಾಕಿ ಆರಾಧನೆ ಪಡೆಯುತ್ತಿದ್ದಾರೆ. ಆದರೂ ಪಡುಮಲೆಯನ್ನು ಅಭಿವೃದ್ಧಿ ಕಾರ್ಯಕ್ಕೆ ಪಡುಮಲೆಯ ಕಮಿಟಿಯವರು ಪಡುಮಲೆಯ ಕೂವೆತೋಟದಲ್ಲಿ ಪ್ರಶ್ನೆ ಇರಿಸಿ ಆಯಾಯ ಕೆಲಸಗಳನ್ನು ನಡೆಸುತ್ತ ಬರುತ್ತಿದ್ದಾರೆ. ಪಡುಮಲೆ ಕಮಿಟಿಯ ವತಿಯಿಂದ ಗರಡಿ ಕಟ್ಟುವ ನಿರ್ಧಾರವಿದ್ದರು ಪ್ರಶ್ನಾಚಿಂತನೆಯಲ್ಲಿ ಮೊದಲು ದೇಯಿ ಬೈದೆತಿ ಸಾನಿದ್ಯ, ತೀರ್ಥಕೆರೆ, ನಾಗಬೆರ್ಮೆರ ಗುಡಿ ಹಾಗೂ ಪರಿವಾರ ದೈವಗಳ ಕಟ್ಟೆಗಳನ್ನು ಮಾಡಿದ ನಂತರವೇ ಬಾಕಿ ಕೆಲಸಗಳಿಗೆ ಹೋಗಿ ಎಂದಿದ್ದರು. ಈಗ ಅದೆಲ್ಲ ಕೆಲಸಗಳು ಮುಗಿದು ಇನ್ನೇನು ಇಡೀ ತುಳುನಾಡ ಜನರಿಗೆ ಒಪ್ಪಿಸುವ ಕಾರ್ಯ ಸಮೀಪಿಸುತ್ತಿದೆ.
ಪಡುಮಲೆಯಲ್ಲಿ ಗರಡಿ ಕಟ್ಟಬಹುದ? ಕಟ್ಟಿದರು ಎಲ್ಲಿ ಕಟ್ಟಬಹುದುದೆಂದು ಪ್ರಶ್ನೆ ಬಂದ ನಂತರ, ಅದನ್ನು ಕೋಟಿ ಚೆನ್ನಯರ ಆದಿ ಗರಡಿ ಎಣ್ಮೂರು ಇಲ್ಲಿಗೆ ನೇಮದ ದಿನ ಹೋಗಿ ಕೇಳಿದ್ದನ್ನು ನಾವೆಲ್ಲರು ವೀಡಿಯೋದ ಮುಕಾಂತರ ನೋಡಿರುತ್ತೇವೆ. ಕೋಟಿ ಚೆನ್ನಯರಲ್ಲಿ ಹರಿಕೃಷ್ಣ ಬಂಟ್ಟಾಲ್ ಅವರು ಪ್ರಾರ್ಥಿಸಿದ ಮೇಲೆ ಕೋಟಿ ಬೈದ್ಯರು ನುಡಿಕೊಡುತ್ತಾರೆ. ಅವರ ಹಿಂದಿನ ಕತೆಗಳನ್ನು ಮೆಲುಕು ಹಾಕುತ್ತ ಹರಿಕೃಷ್ಣ ಬಂಟ್ವಾಲ್ ಅವರಲ್ಲಿ ಒಂದು ತುಂಡು ಬಾಲೆ ಎಲೆ ಕೊಟ್ಟು ಅದಕ್ಕೆ ತನ್ನ ಕೈಯಿಂದ ಹಿಂಗಾರದ ಎಸಲನ್ನು ಹಿಡಿದು *"ಎಂಕ್ಲೆಗ್ ಎನ್ಮೂರುದ ಬಲ್ಲಾಲೆರ್ ಚಪ್ಪರಕೊಂಬು ಏರಾದ್ ಕೊರ್ತೆರ್ ಎಂಕ್ಲೆಗ್ ಪರ್ಮಲೆಡ್ ಚಪ್ಪರಕೊಂಬು ಆಪುಡುಂದು ಇತ್ತ್ಂಡ ಮುಗುಳಿ ಬೂರಡ್, ಚಪ್ಪರಕೊಂಬು ಆಪುಜಿ ಪಂದಾಂಡ ಕಟ್ಟುದ್ ಬೂರು"* ಎಂದು ಹೇಳಿ ಕೈಯಿಂದ ಹಿಂಗಾರದ ಎಸಲನ್ನು ಎನ್ಮೂರು ಗರಡಿಯ ಮೊಕ್ತೇಸರರು ಹಿಡಿದ ಬಾಲೆ ಎಲೆಗೆ ಹಾಕಿ ಎನಿಸಲು ಹೇಳುತ್ತಾರೆ, ಅದು ಮುಗುಳಿ ಬಂದ ತಕ್ಷಣ *"ಎಂಕ್ಲೆಗ್ ಪರ್ಮಲೆದ ಆಮನ್ನ ಬನ್ನಾಯ ಬಿರ್ಮನ ಬೈದ್ಯನ ಜಾಗೆಡ್ ಕಟ್ಲೆ ಪುದರ್ ಪರ್ಮಲೆನೆ ದೀವೊಡು ಬೇತೆ ದೀಯೆರ ಬಲ್ಲಿ, ಎಂಕ್ಲ್ ಪುಟ್ಟಿನ ಜಾಗೆಡೆ ಕಟ್ಟುನೆ ಅತ ಬೇತೆ ಒಲ್ಪಲ ಅತ್ತತ,ಎನ್ಮೂರುದ ತಲಮಾರ್ದ ಕರ್ತುಲು ಇಪ್ಪುನಗ, ಎಂಕ್ಲೆಗ್ ಆಶ್ರಯ ಕೊರ್ನ ಜಾಗೆ ಎನ್ಮೂರು, ಎಂಕ್ಲೆನ ಆದಿ ಗರಡಿ ಆಯಿನ ಎನ್ಮೂರು ಉಂದು ಎಂಕ್ಲೆನ ಅಂಕದ ಜಾಗೆ, ಮುಲ್ತ ಮೂಜಿ ಇರೆ ಗಂಧ ಬೊಕ್ಕ ತೀರ್ಥ ಪತೊಂದು ಎನ್ಮೂರುದ ತಲೆಮಾರ್ದ ಕರ್ತುಲು ಎಂಕ್ಲೆಗ್ ಎಣ್ಮೂರುದ ಬಲ್ಲಾಲ್ರೆಲೆಕ ಆರ್ ಆರೆನ್ ಲೆತೊಂದು ಪೋದು ಅಲ್ಪ ಗಂಧ ಪಾಡ್ಪಾಲೆ, ಅವ್ ಬುರ್ದು ಆರೆಗ್ ಒಂಜಿ ಪಾತೆರ ಬರಂದೆ ಇತ್ತ್ಂಡ ಅಂಚಿನ ಜಾಗೆನ್ ನೀತಿ ನಿರ್ಮಾಣ ಮಲ್ಪುನೆ ಪಂದಾನಗ ಎಣ್ಮೂರುಗ್ ಕಾಣಿಕೆ ಕಟ್ಟೊಡು, ದಾಯೆ ಪಂಡ ಕಷ್ಟನ ಸುಖಟ ಆನಿದ ಕಾಲರ್ದಿಂಚಿ ಎಣ್ಮೂರುಡ್ ಎಂಕಲೆಗ್ ಕಾಲದಿದ ನೇಮ ನಡಪವೊಂದು ಬರೊಂದುಲ್ಲೆರ್, ಅಂಚಾದಿಪ್ಪುನಗ ಪೋಪುನಕ್ಲು ಪೋಲೆ ಬರ್ಪುನಕ್ಲ್ ಬಲೆ ಕಟ್ಟ್ ಕಟ್ಲೆನ್ ಹಾಲ್ ಮಲ್ಪೊಡ್ಚಿ, ಎಂಕಲೆಗ್ ಎನ್ಮೂರುಡ್ ಎಂಚ ನೇಮ ನಡಪುಂಡ ಅಂಚನೆ ನಡಪಾಲೆ ಆಂಡ ಪೇರ್ ಕೊರೊಡ್ಚಿ ಎಂಕಲೆಗ್ ಪರ್ಮಲೆದ ಬಲ್ಲಾಲೆರ್ ಒಂಜಿ ಕಾಲಡ್ ಕೈಕ್ ಕುಂಟು ಕಟ್ಟ್ದ್ ಪೇರ್ ಕೊರಿನಾರ್ ಎಂಕ್ಲೆನ ಅಪ್ಪೆ ಬಲ್ಲಾಲ್ರೆಡ ಒಂಜಿ ಪಾತೆರ ಪಂತೆರ್ ದುಂಬು ಪುಟ್ಟಿನ ಎಂಕ್ ಪಲಯೆ ಆವರ್ ಬೊಕ್ಕ ಪುಟ್ಟುನ ಜೋಕ್ಲೆಗ್ ಸಮ್ಮಲೆ ಆವರ್ ಪಂದ್, ಎಂಕ್ಲ್ ಎನ್ಮೂರುದ ದಂಡ್ ಜಯಿಪುನಗ ಎನ್ಮೂರುದ ಬಲ್ಲಾಲೆರ್ ಆನಿದ ಕಾಲಡ್ ಕೊರ್ನ ಪೇರ್ ಆ ಪೇರ್'ನ್ ಇನಿತ ಕಾಲಡ್ಲ ಎನ್ಮೂರ ಬೂಡುಗ್ ಪೋದು ಪರೊಂದುಲ್ಲ. ಎಂಕಲೆಗ್ ತೆಂಕಾಯಿ ಬಾಗಡ್ ಕೊಡಿಮರ ಪನ್ಪುನ ಕಟ್ಟ್ ಇಜ್ಜಿ."* ಹೀಗೆ ನುಡಿಯಾದ ಬಳಿಕ ಪಡುಮಲೆಯಲ್ಲಿ ಗರಡಿ ಕಟ್ಟುವ ಯೋಜನೆಯು ಇದೆ. ಎನ್ಮೂರು ಆದಿ ಗರಡಿಯಲ್ಲಿ ಆದ ನುಡಿ ಅದು ಸತ್ಯದ ನುಡಿಯಾಗಿರುತ್ತದೆ ಎಂದು ನಂಬಿದವರು ನಾವು. ಇನ್ನು ಪಡುಮಲೆಯಲ್ಲಿ ಗರಡಿ ಎನ್ಮೂರಿನಲ್ಲಿ ಹೂವಿನ ಎಸಲು ಸರಿ ಬೀಳದೆ ಇರುತ್ತಿದ್ದರೆ ಪಡುಮಲೆಯಲ್ಲಿ ಗರಡಿ ಕಟ್ಟುವ ಯೋಜೆನೆಯನ್ನು ಬಿಡಲು ತಯಾರಾಗಿದ್ದೆವು, ಕೋಟಿ ಚೆನ್ನಯರು ಬೇಡ ಎಂದರೆ ಅದಕ್ಕೆ ಎದುರಾಗಿ ಹೋಗುವ ಪ್ರಮೇಯ ಇರಲಿಲ್ಲ. ಪಡುಮಲೆಯಲ್ಲಿ ಗರಡಿ ನಿರ್ಮಾಣ ಆಗಲು ಹಲವು ವರ್ಷಗಳು ಕಳೆಯಬಹುದು, ಇದಕ್ಕು ಮೊದಲೆ ಕೆಲವು ವಿಷಮಾನವರು ಜಾತಿಯ ಹೆಸರು ಹೇಳಿ ಬಿಲ್ಲವರು ಪಡುಮಲೆಗೆ ಯಾರೂ ಹೋಗಬಾರದು ಪಡುಮಲೆ ಶಾಪದ ಜಾಗ ಎಂದೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಬಿಲ್ಲವರಿಗೆ ಪಡುಮಲೆಗೆ ಬರಬೇಡಿ ಎಂದು ಯಾರು ಹೇಳಲಿಲ್ಲ ಯಾವ ಶಾಪವು ಇಲ್ಲ ಹೀಗೆ ಸುಳ್ಳು ಹೇಳಿ ರಾಜಕೀಯವಾಗಿ ಲಾಭ ಪಡೆಯಲು ಅಪಪ್ರಚಾರ ಮಾಡಲು ಹೊರಟಿದ್ದಾರೆ. ಇದು ಸಮಾಜವನ್ನು ಒಡಯುವ ಪ್ರಯತ್ನವಲ್ಲದೆ ಮತ್ತೇನಲ್ಲ. ಇಂತವರಿಗೆ ಬೇರೆನು ಸಿಕ್ಕಿಲ್ಲವೆಂದು ಪಡುಮಲೆಗೆ ಶಾಪ ಇದೆ ಎಂದು ಅಪಪ್ರಚಾರ ಮಾಡಿ ಅದನ್ನು ಸಾಮಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇಂತಹ ಸಂದೇಶಗಳು ಬಂದಲ್ಲಿ ಯಾರು ಅದನ್ನು ನಂಬದೆ ಸಮಸ್ತ ಕೋಟಿ ಚೆನ್ನಯ ಭಕ್ತರು ಪಡುಮಲೆಗೆ ಬನ್ನಿ ಬಂದ ನಂತರ ಎಲ್ಲಾ ವಿಷಯ ನಿಮಗೆ ತಿಳಿಯುತ್ತದೆ.
*ಜೈ ಕೋಟಿ ಚೆನ್ನಯ*