ಮಂಗಳೂರು : ಕಾರ್ಕಳ ಶ್ರೀ ರವಿಶಂಕರ ವಿದ್ಯಾಮಂದಿರದ 4ನೇ ತರಗತಿ ವಿದ್ಯಾರ್ಥಿನಿ,ಬೈಲೂರು ಬಿಲ್ಲವ ಸೇವಾ ಸಂಘದ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿರುವ ಗಿರೀಶ್ ಪೂಜಾರಿ ಬೈಲೂರು ಮತ್ತು ಬಿಲ್ಲವ ಮಹಿಳಾ ಘಟಕದ ಸದಸ್ಯರಾಗಿರುವ ವೀಣಾ ಗಿರೀಶ್ ಪೂಜಾರಿಯವರ ಸುಪುತ್ರಿ ಕುಮಾರಿ
ಆಯುಷ್ಯಾರವರು ಶಿವಮೊಗ್ಗದ ಕೋಟೆ ರೋಡ್ ವಾಸವೀ ಪಬ್ಲಿಕ್ ಸ್ಕೂಲ್ ನ ಚಿಗುರು ಸಭಾಂಗಣದಲ್ಲಿ ಭಾನುವಾರ ನಡೆದ 2ನೇ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಷಿಪ್ ನಲ್ಲಿ ತೃತೀಯ ಸ್ಥಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಮುಂದಿನ ಭವಿಷ್ಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ, ಕೋಟಿಚೆನ್ನಯರ ಕೃಪಾಶೀರ್ವಾದ ಇರಲಿ.