22 Jul 2020

ಭಗವಾನ್ ಶ್ರೀ ನಾರಾಯಣ ಗುರುದೇವರ ಬಗ್ಗೆ ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಇವರು ಹಾಡಿರುವ ಭಕ್ತಿ ಸುಧೆಯ ವಿಡಿಯೊ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗುರು ದೇವರ ಸನ್ನಿಧಿಯಲ್ಲಿ ನಡೆಯಿತು.

ಮಂಗಳೂರು ಲಕ ಸುದ್ದಿ: ಜಗತ್ತಿನ ಜನತೆಯ ಉದ್ಧಾರ ಮತ್ತು ನ್ಯಾಯ ಧರ್ಮಕ್ಕಾಗಿ ಜ್ಞಾನದ ದೀಪವ ಬೆಳಗಿಸಿದ ಅಗಣಿತ ಮಹಿ ಮನ ಅವತಾರ ಬ್ರಹ್ಮಶ್ರೀ ನಾರಾಯಣ ಗುರು ದೇವರ ಬಗ್ಗೆ ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಇವರು ಹಾಡಿರುವ ಭಕ್ತಿ ಸುಧೆಯ ವಿಡಿಯೊ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗುರು ದೇವರ ಸನ್ನಿಧಿಯಲ್ಲಿ ಜರಗಿತು .ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್ ಎಸ್ ಸಾಯಿರಾಮ್ ಮತ್ತು ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ನ್ಯಾಯವಾದಿಗಳು ಆಗಿರುವ ಶ್ರೀ ಪದ್ಮರಾಜ್ ಆರ್ ಇವರು ಬಿಡುಗಡೆಗೊಳಿಸಿದರು .



ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರವಿ ಪೂಜಾರಿ ಚಿಲಿಂಬಿ .ಶ್ರೀ ರಾಮಚಂದ್ರ ಪೂಜಾರಿ ದೇರೆಬೈಲು ಮಾಜಿ  ಉಪಾಧ್ಯಕ್ಷರು ಯುವವಾಹಿನಿ  ಮಂಗಳೂರು ಘಟಕ .ಶ್ರೀ ರಾಜೇಂದ್ರ ಚಿಲಿಂಬಿ ಸಮಾಜ ಸೇವಕರು ಮತ್ತು ಸಾಮಾಜಿಕ ಚಿಂತಕರು .ಶ್ರೀ ಸುರೇಶ್ ಪಾಂಡವರ ಕಲ್ಲು ಆಧ್ಯಾತ್ಮಿಕ ಚಿಂತಕರು ಮತ್ತು ಶಿಕ್ಷಕರು .ಶ್ರೀ ಜಿನ್ನಪ್ಪ ಪೂಜಾರಿ ಅಟಾಲ್  ಪ್ರಗತಿಪರ ಕೃಷಿಕರು .ಶ್ರೀ ಮನೋಹರ್ ಕುಮಾರ್ ಇಳಂತಿಲ ನ್ಯಾಯವಾದಿಗಳು ಮತ್ತು ಉಪಾಧ್ಯಕ್ಷರು ಬೆಳ್ತಂಗಡಿ ತಾಲ್ಲೂಕು ಬಿಲ್ಲವ ಸಂಘ ಬೆಳ್ತಂಗಡಿ .ಶ್ರೀ ಅಜಿತ್ ಪೂಜಾರಿ ಕಾರ್ಯಕಾರಿ ಸಮಿತಿ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ )ಗ್ರಾಮ ಚಾವಡಿ ಕೊಣಾಜೆ .ಶ್ರೀ ಶೇಷಗಿರಿ ಪೂಜಾರಿ ಸದಸ್ಯರು ಯುವ ವಾಹಿನಿ( ರಿ )ಮಂಗಳೂರು ಘಟಕ .ಶ್ರೀ ಸುಕೇಶ್ ಪೂಜಾರಿ ಪಾಲಡ್ಕ ಜೂನಿಯರ್ ಮ್ಯಾನೇಜರ್ ಸಿಂಜಿನ್ ಇಂಟರ್ ರ್ನ್ಯಾಷನಲ್ ಲಿಮಿಟೆಡ್ ಮಂಗಳೂರು .ಶ್ರೀಮತಿ ಸೀತಮ್ಮ ,ಶ್ರೀಮತಿ ನಯನ ಶಿಕ್ಷಕಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ ,ಸಂಗೀತ ನಿರ್ದೇಶನ ಮಾಡಿದ ಶ್ರೀ ವಾಸುದೇವ ಗಟ್ಟಿ ಕೊಣಾಜೆ.ವಿಜೇತ್ ಗಾಣಿಗ. ಶ್ರೀ ರಾಮ್ ಪ್ರಸಾದ್ ಭಂಡಾರಿ, ಸೃಜನ್ ಭಂಡಾರಿ ,ಮನ್ವಿತ್ ಮುಂತಾದವರು ಉಪಸ್ಥಿತರಿದ್ದರು ಶ್ರೀ ಹರೀಶ್ ಪೂಜಾರಿ ಕೊಣಾಜೆ ಮತ್ತು ಶ್ರೀಮತಿ ಸುರೇಖಾ ಇವರ ಪುತ್ರಿ ಶ್ರೀರಕ್ಷಾ ಎಸ್ ಹೆಚ್ ಪೂಜಾರಿ ಅವರಿಗೆ ಶುಭ ಹಾರೈಸಿದರು

ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೋಟ್ಟು ಹೊಸ್ಮಾರು,ಕಾರ್ಕಳ ಇಲ್ಲಿನ ಹಳೆವಿದ್ಯಾರ್ಥಿನಿ ಕುಮಾರಿ #ಪ್ರತೀತ_ಪೆರಾಡಿ ಇವರು ಪಿಯುಸಿ ಪರೀಕ್ಷೆ -ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ #8ನೇ Rank, ಜಿಲ್ಲೆಗೆ #5ನೇ Rank ಪಡೆದ ವಿದ್ಯಾರ್ಥಿನಿ.

ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೋಟ್ಟು ಹೊಸ್ಮಾರು,ಕಾರ್ಕಳ ಇಲ್ಲಿನ ಹಳೆವಿದ್ಯಾರ್ಥಿನಿ ಕುಮಾರಿ #ಪ್ರತೀತ_ಪೆರಾಡಿ ಇವರು ಪಿಯುಸಿ ಪರೀಕ್ಷೆ -ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ #8ನೇ Rank, ಜಿಲ್ಲೆಗೆ #5ನೇ Rank ಪಡೆದ ವಿದ್ಯಾರ್ಥಿನಿ.
ವೀಡಿಯೋ & ವರದಿ ಕೃಪೆ : ಸುದ್ದಿ ಬಿಡುಗಡೆ.
ವೀಡಿಯೋ ನೋಡಲು ಈ ಕೆಳಗಿನ ಲಿಂಕ್ 
👇👇👇

ಗುರುಕೃಪ ಪದವಿ ಪೂರ್ವ ಕಾಲೇಜು ಬಲ್ಯೋಟ್ಟು,ಹೊಸ್ಮಾರು - 100% ಫಲಿತಾಂಶ

ಈ ಕಷಾಯ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಮನೆಮದ್ದು..

ಈ ಕಷಾಯ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಮನೆಮದ್ದು.


ಜಗತ್ತನ್ನೇ ಭಯಭೀತ ಗೊಳಿಸಿರುವ ಮಹಾಮಾರಿ ಕರೊನ ಬಗ್ಗೆ ನಾವೆಲ್ಲ ತುಂಬಾನೇ ಹೆದರಿದ್ದೀವಿ. ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ ಎಂದರೆ ಕರೊನ ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರಿಗೆ ಬೇಗ ಬರುತ್ತದೆ. ಹಾಗೂ ಚಿಕ್ಕ ಮಕ್ಕಳಲ್ಲಿ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹು ಬೇಗ ಬರುವ ಸಾಧ್ಯತೆಗಳು ಇರುತ್ತದೆ. ನಾವು ಕರೊನ ಬರದಂತೆ ತಡೆಗಟ್ಟಲು ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕು. ಅದಕ್ಕಾಗಿ ಕೆಲವು ಮನೆಮದ್ಧುಗಳು ಇವೆ. ಆದರೆ ಎಷ್ಟೋ ಜನರಿಗೆ ಇಂತಹ ಸುಲಭವಾದ ಮನೆಮದ್ದುಗಳನ್ನು ಹೇಗೆ ಮಾಡಿಕೊಳ್ಳುವುದು? ಎಷ್ಟು ಪ್ರಮಾಣದಲ್ಲಿ ಮಾಡಿ ತೆಗೆದುಕೊಳ್ಳುವುದು ಎನ್ನುವುದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಈ ಲೇಖನದ ಮೂಲಕ ಯಾವ ಕಷಾಯವನ್ನು ಯಾವ ರೀತಿ ಎಷ್ಟು ಪ್ರಮಾಣದಲ್ಲಿ ಮಾಡಿ ಹೇಗೆ ಯಾವಾಗ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಕೆಲವು ಕಷಾಯಗಳನ್ನು ಮಾಡಿಕೊಂಡು ಕುಡಿಯಬೇಕು.

ಮೊದಲಿಗೆ ತುಳಸಿ ಕಷಾಯ. ಮೊದಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ಅಷ್ಟು ನೀರನ್ನು ಬಿಸಿಗೆ ಇಟ್ಟು ಇದಕ್ಕೆ ನೀರು ಕುದಿಯಲು ಬಂದಾಗ ಚೆನ್ನಾಗಿ ತೊಳೆದ 8 ರಿಂದ 10 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಳ್ಳಬೇಕು. ಇದು ಒಂದು ಲೀಟರ್ ತುಳಸಿ ನೀರು ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಮಾತ್ರ ಕುಡಿಯಬೇಕು.

ನಂತರ ಎರಡನೆಯ ಮನೆ ಮದ್ದು ಅರಿಶಿನದ ಹಾಲು ಒಂದು ಲೋಟ ಕಾಯಿಸಿದ ಹಾಲನ್ನು ತೆಗೆದುಕೊಂಡು ಅರ್ಧ ಟೀ ಚಮಚ ಅರಿಶಿನದ ಪುಡಿ ಸೇರಿಸಿ ಮೂರರಿಂದ ನಾಲ್ಕು ನಿಮಿಷ ಕುದಿಸಬೇಕು. ಉಷ್ಣ ದೇಹ ಪ್ರಕೃತಿ ಇರುವವರು ಕಾಲು ಚಮಚ ಅರಿಶಿನ ಬಳಸಿದರೆ ಸಾಕು. ಚೆನ್ನಾಗಿ ಕುದಿಸಿ ಶೋಧಿಸಿ ರಾತ್ರಿ ಹೊತ್ತು ಅಥವಾ ಸಂಜೆ ಸಮಯದಲ್ಲಿ ಕುಡಿಯುವುದು ಒಳ್ಳೆಯದು. ಪ್ರತೀ ದಿನ ಒಬ್ಬ ವ್ಯಕ್ತಿ ಒಂದು ಲೋಟ ಅರಿಶಿನ ಹಾಲನ್ನು ಕುಡಿಯುವುದು ಒಳ್ಳೆಯದು. ಸಿಹಿಗೆ ಬೇಕಿದ್ದಲ್ಲಿ ಬೆಲ್ಲವನ್ನು ಬಳಸಬಹುದು.

ನೆಲನೆಲ್ಲಿ ಕಷಾಯ ನೆಲನೆಲ್ಲಿ ಸೊಪ್ಪು ಅಥವಾ ಸೊಪ್ಪು ಸಿಗದೆ ಹೋದಲ್ಲಿ ಆಯುರ್ವೇದ ಶಾಪ್ ಗಳಲ್ಲಿ ಸಿಗುವ ನೆಲನೆಲ್ಲಿ ಪೌಡರ್ ಗಳನ್ನು ಸಹ ಬಳಸಬಹುದು. ನೆಲನೆಲ್ಲಿಯ ಬೇರು , ಕಾಂಡ ಎಲೆ ಎಲ್ಲವನ್ನೂ ಕಷಾಯಕ್ಕೆ ಬಳಸಬಹುದು. ನೆಲನೆಲ್ಲಿ ಗಿಡವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 4 ಲೋಟ ನೀರು ತೆಗೆದುಕೊಂಡು ಬಿಸಿ ಆಗಲು ಇಡಬೇಕು. ಸ್ವಲ್ಪ ನೀರು ಬಿಸಿ ಆದಮೇಲೆ ಒಂದು ನೆಲನೆಲ್ಲಿ ಗಿಡವನ್ನು ಬೇರು ಸಮೇತ ನೀರಿಗೆ ಹಾಕಿ ಕುದಿಸಬೇಕು. ಸೊಪ್ಪು ಸಿಗದೆ ಇದ್ದರೆ ಇದರ ಪೌಡರ್ ಅನ್ನು ತಂದುಕೊಂಡು 4 ಲೋಟ ನೀರಿಗೆ ಒಂದು ಚಮಚ ಪೌಡರ್ ಬಳಸಬೇಕು. ನಾಲ್ಕು ಲೋಟ ನೀರು ಕುಡಿಯುತ್ತಾ ಒಂದು ಲೋಟ ನೀರಿಗೆ ಕುದಿಸಬೇಕು. ಒಂದು ಲೋಟಕ್ಕೆ ಬಂದ ನಂತರ ಇದನ್ನು ಶೋಧಿಸಿಕೊಂಡು ಕುಡಿಯಬೇಕು.

ಒಂದು ದಿನಕ್ಕೆ ಒಬ್ಬ ಮನುಷ್ಯ ಈ ಕಷಾಯವನ್ನು ಕಾಲು ಲೋಟದಷ್ಟು ಮಾತ್ರ ತೆಗೆದುಕೊಳ್ಳಬೇಕು. ಇದನ್ನು ಸಪ್ಪೆಯಾಗಿ ಕುಡಿಯಲು ಇಷ್ಟ ಪಡದೇ ಇರುವವರು ಬೆಲ್ಲವನ್ನು ಸೇರಿಸಿಕೊಂಡು ಕುಡಿಯಬಹುದು.
ಅಮೃತ ಬಳ್ಳಿ ಕಷಾಯ ಒಂದು ಪಾತ್ರೆಯಲ್ಲಿ 4 ಲೋಟ ನೀರು ತೆಗೆದುಕೊಂಡು ಬಿಸಿ ಆಗಲು ಇಟ್ಟು ಸ್ವಲ್ಪ ಬಿಸಿ ಆಗುತ್ತಾ ಇದ್ದ ಹಾಗೆ ಅಮೃತ ಬಳ್ಳಿಯೇ ಸಿಕ್ಕರೆ ಅರ್ಧ ಇಂಚಿನಷ್ಟು ಅಮೃತ ಬಳ್ಳಿಯನ್ನು ಹಾಕಿ ಕುದಿಸಬೇಕು. ಬಳ್ಳಿ ಸಿಗದೆ ಇದ್ದಲ್ಲಿ ಒಂದು ಚಮಚದಷ್ಟು ಅಮೃತ ಬಳ್ಳಿ ಚೂರ್ಣವನ್ನು ಹಾಕಿ ಕುದಿಸಿ ಇದನ್ನೂ ಸಹ ನಾಲ್ಕು ಲೋಟ ನೀರು ಕುದಿಸಿ ಒಂದು ಲೋಟಕ್ಕೆ ಬರುವವರೆಗೂ ಕುದಿಸಬೇಕು. ಇದನ್ನೂ ಸಹ ಶೋಧಿಸಿಕೊಂಡು ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಮಾತ್ರ ಸೇವಿಸಬೇಕು.

ನೆಲನೆಲ್ಲಿ ಗಿಡ ಅಥವಾ ಇದರ ಚೂರ್ಣ ಯಾವುದೂ ಸಿಗದೆ ಇದ್ದಲ್ಲಿ ಮಾತ್ರ ಅಮೃತ ಬಳ್ಳಿ ಕಷಾಯ ಸೇವಿಸಬೇಕು. ಒಟ್ಟಿನಲ್ಲಿ ನೆಲನೆಲ್ಲಿ ಅಥವಾ ಅಮೃತ ಬಳ್ಳಿ ಕಷಾಯ ಯಾವುದೇ ಒಂದನ್ನು ಮಾತ್ರ ಸೇವಿಸಬೇಕು. ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ದಿನಕ್ಕೆ ಒಬ್ಬ ವ್ಯಕ್ತಿ ಒಂದು ಲೀಟರ್ ತುಳಸಿ ಕಷಾಯ , ಒಂದು ಲೋಟ ಅರಿಶಿನ ಹಾಲು , ಕಾಲು ಲೋಟ ಅಮೃತ ಬಳ್ಳಿ ಕಷಾಯ ಅಥವಾ ಕಾಲು ಲೋಟ ನೆಲ ನೆಲ್ಲಿ ಕಷಾಯ ಇವುಗಳನ್ನ ಕುಡಿಯಬೇಕು. ಯಾವುದೇ ಸೋಂಕುಗಳೂ ಇವುಗಳ ಮುಂದೆ ಪ್ರಭಲ ಎನಿಸುವುದಿಲ್ಲ.
ವರದಿ ಕೃಪೆ NewsMedia

ಕುಮಾರಿ ನಿಹಾರಿಕ ಅಮೀನ್ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ 554 (92.3%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರು ಲಕ ಸುದ್ದಿ : ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ  ವಿದ್ಯಾರ್ಥಿನಿ ಕುಮಾರಿ ನಿಹಾರಿಕ ಅಮೀನ್ ಇವರು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ 554 (92.3%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ  ತೇರ್ಗಡೆಯಾಗಿರುತ್ತಾರೆ. ಇವರು
 ಶ್ರೀಮತಿ ಮಲ್ಲಿಕಾ ವಿನಾಯಕ ಇವರ ಸುಪುತ್ರಿ.

ಕುಮಾರಿ ಸಂಜನಾ ಜೆ ಅಂಚನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.6% (559) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.

ಮಂಗಳೂರು ಲಕ ಸುದ್ದಿ :ಎಕ್ಸಪರ್ಟ್  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಂಜನಾ ಜೆ ಅಂಚನ್  ಇವರು ದ್ವಿತೀಯ ಪಿಯುಸಿ ವಿಜ್ಞಾನ  ವಿಭಾಗದಲ್ಲಿ 94.6% (559) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು  ಶ್ರೀಮತಿ ಶರ್ಮಿಳಾ ಜಗದೀಶ್ ಅಂಚನ್  ಇವರ ಸುಪುತ್ರಿ.

ನಾಲಸೋಪರ ಎಸ್.ಎಸ್.ಸಿ . ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ.ಅವಳಿ ಮಕ್ಕಳಾದ ಪ್ರಾಚಿ ಎಸ್.ಕರ್ಕೇರ 90.4 ಮತ್ತು ಅವಳ ಸಹೋದರಿ ಪ್ರಿಯ ಎಸ್. ಕರ್ಕೇರ 85.7 ಶೇಕಡ ಅಂಕಗಳಿಸಿದ್ದಾರೆ.


ಮಂಗಳೂರು ಲಕ ಸುದ್ದಿ: ನಾಲಸೋಪರ ಎಸ್.ಎಸ್.ಸಿ . ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ.ಅವಳಿ ಮಕ್ಕಳಾದ  ಪ್ರಾಚಿ ಎಸ್.ಕರ್ಕೇರ 90.4 ಮತ್ತು ಅವಳ ಸಹೋದರಿ ಪ್ರಿಯ  ಎಸ್. ಕರ್ಕೇರ 85.7 ಶೇಕಡ ಅಂಕಗಳಿಸಿದ್ದಾರೆ. ಪ್ರಾಚಿ ಹಾಗೂ ಪ್ರಿಯ ಕರ್ಕೇರ  ವಿರಾರ್ ನಾಲಸೋಪರ ಕರ್ನಾಟಕ  ‌ಸಂಸ್ಥೆಯ ಅಧ್ಯಕ್ಷ ಸದಾಶಿವ ಎ.ಕರ್ಕೇರ ಹಾಗೂ ದೇವಕಿ ಕರ್ಕೇರ ದಂಪತಿಗಳ ಸುಪುತ್ರಿಯಾಗಿದ್ದಾರೆ.
ಇವರನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿ  ಮತ್ತು ನಾಲಸೋಪರ ವಿರಾರ್ ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷರು ಜಗದೀಶ್ ಆರ್ .ಅಮೀನ್  ಕಾರ್ಯಾಧ್ಯಕ್ಷ  ದಯಾನಂದ ಬೋಂಟ್ರ ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ಅಭಿನಂದಿಸಿದ್ದಾರೆ 💐💐

ಶ್ರೀ ಗೋಕರ್ಣನಾಥೇಶ್ವರ ಕಾಲೇಜು -ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕ, ಉಚಿತ ಪ್ರವೇಶದ ಅವಕಾಶ..


ಮಂಗಳೂರು ಲಕ ಸುದ್ದಿ: ಕಳೆದ ಸುಮಾರು ಮೂವತ್ತೆಂಟು ವರುಷಗಳಿಂದ ಪ್ರತಿಭೆಯಿದ್ದೂ ಬಡತನದ ಕಾರಣದಿಂದ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಅದೇಷ್ಟೋ ವಿದ್ಯಾರ್ಥಿಗಳಿಗೆ ಪದವಿ ಪೂರ್ವ, ಪದವಿ, ಸ್ನಾತಕೊತ್ತರ( ಎಂ ಕಾಂ) ಹಾಗೂ ಬಿ ಎಡ್ ಶಿಕ್ಷಣದ ಅವಕಾಶವನ್ನು ಅತ್ಯಂತ ಕಡಿಮೆ ಶುಲ್ಕದೊಂದಿಗೆ ನೀಡುತ್ತಾ ಬಂದಿರುವ ಸಂಸ್ಥೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸೂಕ್ತ ಸವಲತ್ತುಗಳು, ಅನುಭವೀ ಆಧ್ಯಾಪಕವರ್ಗ, ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಒದಗಿಸಿಕೊಟ್ಟು ಸಂಸ್ಥೆಯಲ್ಲಿ ಶಿಕ್ಷಣ ಪಡೆದಂತಹ ಬಹುತೇಕ ವಿದ್ಯಾರ್ಥಿಗಳು ಇಂದು ತಮ್ಮ ಜೀವನದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಸಮಾಜದಲ್ಲಿ ಅತ್ಯುನ್ನತ ಪದವಿಯನ್ನು ಪಡೆದಿರುತ್ತಾರೆ. ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ವಾಣಿಜ್ಯ ವ್ಯವಹಾರ, ರಾಜಕೀಯ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿಸಲ್ಪಟ್ಟ  ನಮ್ಮೀ ಸಂಸ್ಥೆ ರಾಷ್ಟ್ರಮಟ್ಟದ ಮಾನ್ಯತಾ ಸಂಸ್ಥೆಗಳಾದ ಯು ಜಿ ಸಿ ಹಾಗೂ ನ್ಯಾಕ್ ಗಳಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿರುತ್ತದೆ.
ಇದೀಗ ಮಹಾಮಾರಿ ಕೊರೊನಾ ಸೃಷ್ಟಿಸಿರುವ ಆತಂಕ, ಅನಿಸ್ಚಿತತೆ ಇನ್ನೇನು ದೂರವಾಗಲಿದ್ದು ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ನಾವೆಲ್ಲಾ ಸಿದ್ಧರಾಗಬೇಕಿದೆ.
ಈ ನಿಟ್ಟಿನಲ್ಲಿ ನಮ್ಮೀ ಕಾಲೇಜಿನ ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಈಗಾಗಲೇ ಆರಂಭವಾಗಿದ್ದು, ಬಿ ಎ, ಬಿ ಕಾಂ, ಪದವಿ ಪೂರ್ವ ಹಾಗೂ ಎಂ ಕಾಂ, ಬಿ ಎಡ್ ತರಗತಿಗಳಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಕೂಡಲೇ ನಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿ.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕ, ಉಚಿತ ಪ್ರವೇಶದ ಅವಕಾಶ ಕೂಡಾ ಮಾಡಿಕೊಡಲಾಗುವುದು.
ದಯವಿಟ್ಟು ಈ ವಿಚಾರಗಳನ್ನು ಸಂಬಂಧಪಟ್ಟವರೊಂದಿಗೆ ಹಂಚಿಕೊಂಡು ಈ ಅವಕಾಶದ ಸದುಪಯೋಗ ಪಡೆದು ಕೊಳ್ಳಬೇಕಾಗಿ ವಿನಂತಿ.
ಸಂಪರ್ಕಿಸಲು ಕರೆ ಮಾಡಿ:
0824 2457226 - ಕಾಲೇಜು ಕಚೇರಿ
👆ಬಿ ಎ, ಬಿ ಕಾಂ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಾಲೇಜಿನ ವೆಬ್ ಸೈಟ್ ನಲ್ಲಿ(www.gokarnanatheshwaracollege.com) ಲಭ್ಯವಿರುವ ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿ ವಿವರಗಳನ್ನು ಭರ್ತಿ ಮಾಡಿ ಕಾಲೇಜಿನ ಇ-ಮೈಲ್ (sgokarnanatha@rediffmail.com) ಗೆ ಕಳುಹಿಸಿಕೊಡಬಹುದು.