ಮಂಗಳೂರು ಲಕ ಸುದ್ದಿ:
*12ನೇ ಶತಮಾನದ ಶಿವಶರಣ ಹೆಂಡದ ಮಾರಯ್ಯ ತಪಸ್ಸು ಮಾಡಿದ ಸ್ಥಳ ಬೆಳಕಿಗೆ ಬಂದಿದೆ..*
ಸ್ಥಳ: ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬೆಟ್ಟದ ಬಾಲ ಕುಂದಗ್ರಾಮ..
*ಜಗಜ್ಯೋತಿ ಬಸವೇಶ್ವರ* ರು ಮಾನವ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ ಯಾಗಿದ್ದಾರೆ.. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮೂಲಕ ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದರು. ಜಾತಿಪದ್ಧತಿ, ಅಸಮಾನತೆ ,ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಟ, ಮೂಢನಂಬಿಕೆಗಳ ವಿರುದ್ಧವಾಗಿ ಹೋರಾಟದಿಂದ ಜಗತ್ತಿಗೆ ದಾರಿ ತೋರಿಸಿ ಹೊಸ ಕ್ರಾಂತಿ ಮೂಲಕ ಕಲ್ಯಾಣ ಕ್ರಾಂತಿಯ ದಾರಿದೀಪವಾದರು..
ಜಾತಿ ಪದ್ಧತಿಯನ್ನು ಹೋಗಲಾಡಿಸಲು ಕೇವಲ ತತ್ವ ಪ್ರಚಾರ ಮಾಡದೆ ಕಾರ್ಯ ರೂಪದಲ್ಲಿ ತಂದು ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದರು. ಕಾಯಕವೇ ಕೈಲಾಸ ಎಂಬುದು ಅವರ ಧ್ಯೇಯ ವಾಕ್ಯವಾಗಿತ್ತು. ಕೆಲಸದಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ನಿಷ್ಕಲ್ಮಶ ಕಾಯಕದಿಂದ ಭಗವಂತನ ಅನುಗ್ರಹ ಪಡೆಯಬಹುದು ಎಂದು ಸಾರಿದರು.
ಎಲ್ಲ ಜಾತಿ ಜನಾಂಗಕ್ಕೂ ಕೂಡ ಪ್ರಾಧಾನ್ಯತೆ ನೀಡಿ ಲಿಂಗದೀಕ್ಷೆ ನೀಡಿ ಶಿವಶರಣ ರನ್ನಾಗಿಸಿದರು . ಜಾತಿಪದ್ಧತಿ ಹೋಗಲಾಡಿಸಲು ಅನುಭವ ಮಂಟಪ ಎಂಬ ಚಿಂತನಾ ಮಹಾಮನೆ ಯನ್ನು ಸ್ಥಾಪಿಸಿದರು. ಮಹಾಜ್ಞಾನಿ ಅಲ್ಲಮಪ್ರಭುವಿನ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯ ಬೆಳಕು ಜಗತ್ತಿಗೆ ಹರಡಲು ಕಾರಣರಾದರು..
ಜಗಜ್ಯೋತಿ ಬಸವೇಶ್ವರರು ಎಲ್ಲ ಜಾತಿ ಜನಾಂಗದ ಶಿವಶರಣರನ್ನು ಒಗ್ಗೂಡಿಸಿ ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಇಂತಹ ಅನುಭವಮಂಟಪದಲ್ಲಿ ಅಂಬಿಗರ ಚೌಡಯ್ಯ ಮಡಿವಾಳರ ಮಾಚಯ್ಯ ನುಲಿಯ ಚಂದಯ್ಯ, ಆಯ್ದಕ್ಕಿ ಲಕ್ಕಮ್ಮ ,ಅಕ್ಕಮಹಾದೇವಿ, ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ. ಹೆಂಡದ ಮಾರಯ್ಯ ನಂತಹ ಅನೇಕ ಶಿವಶರಣರು ವಚನಕಾರರು ಈ ಅನುಭವ ಮಂಟಪದ ಭಾಗವಾಗಿದ್ದರು..
*ಹೆಂಡದ ಮಾರಯ್ಯ..*
ಹೆಂಡದ ಮಾರಯ್ಯ 12ನೇ ಶತಮಾನದ ಮಹಾ ಶಿವಶರಣ ರಾಗಿದ್ದರು.. ಬಸವಣ್ಣನವರ ಅನುಯಾಯಿಗಳಾಗಿ ವಚನಕಾರರಾಗಿ ಪ್ರಸಿದ್ಧರಾಗಿದ್ದರು. ಈಗಾಗಲೇ ಅವರು ಬರೆದಿರುವಂತಹ 12 ವಚನಗಳು ಉಪಲಬ್ದವಾಗಿದ್ದು , ಧರ್ಮೇಶ್ವರ ಲಿಂಗ ಎಂಬ ಅಂಕಿತನಾಮದಿಂದ ವಚನಗಳು ಪ್ರಸಿದ್ಧಿಯಾಗಿವೆ.
ಮೂಲತಃ ಈಚಲ ಮರದಿಂದ ಹೆಂಡವನ್ನು ತಯಾರಿಸಿ ಮಾರಾಟ ಮಾಡುವ ಕಾಯಕಯೋಗಿ ಹೆಂಡದ ಮಾರಯ್ಯ ಮಹಾತಪಸ್ವಿಯಾಗಿದ್ದ ರು.. ಹೆಂಡದ ಮಾರಾಟ ಮತ್ತು ಸೇವನೆ ಸಮಾಜಕ್ಕೆ ಹಾನಿಕಾರಕ ಎಂದು ತಿಳಿದ ನಂತರ. ಪರ್ಯಾಯ ಪಾನೀಯಗಳಾದ ಪಾನಕ, ಮಜ್ಜಿಗೆ ಹಾಗೂ ಸಿಹಿ ಪಾನೀಯಗಳನ್ನು ವಿತರಿಸುವುದರೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ವಚನಗಳನ್ನು ರಚಿಸಿ ಅನುಭವಮಂಟಪದಲ್ಲಿ ಸೇವೆ ಸಲ್ಲಿಸಿದರು,.
ಪ್ರಸಕ್ತ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಿಂದ ಶಿವಶರಣರ ಗುಹೆಗಳು ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಮಹತ್ಕಾರ್ಯದಲ್ಲಿ ನಡೆದಾಡುವ ಜ್ಞಾನ ದೀಪ ಎಂದು ಹೆಸರಾದ ಈ ಭಾಗದ ಮಹಾಶರಣ *ಶ್ರೀ ಬೆಲ್ದಾಳ* *ಶರಣರ* ನೇತೃತ್ವದಲ್ಲಿ ಈ ಮಹತ್ಕಾರ್ಯ ಸಾಗಿದೆ..
ಇತ್ತೀಚಿಗೆ ಶರಣರ ಮಾರ್ಗದರ್ಶನದಲ್ಲಿ ಈ ಭಾಗದ ಸಮಾಜಸೇವಕರು, ಹೋರಾಟಗಾರರು ಹಾಗೂ ಈಡಿಗ ಸಮಾಜದ ಮುಖಂಡರಾದ ಶ್ರೀ **ರವೀಂದ್ರಕುಮಾರ್ ಧರ್ಮಯ್ಯ *ಭೋರಾಳೆ* ಅವರ ನೇತೃತ್ವದಲ್ಲಿ 12ನೇ ಶತಮಾನದ ಹೆಂಡದ ಮಾರಯ್ಯನವರ ಸ್ಮಾರಕಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವಂತಹ ಕಾರ್ಯ ಕೈಗೊಳ್ಳಲಾಗಿದೆ..
ಮುಂದಿನ ದಿನಗಳಲ್ಲಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಿಂದ ಈ ಸ್ಥಳವನ್ನು ಸ್ಮಾರಕವನ್ನಾಗಿಸಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ..
ವರದಿ ಕೃಪೆ:https://www.facebook.com/edigasamaja.hosapete