4 Sept 2020

ಪಡುಮಲೆ ಕೋಟಿ ಚೆನ್ನಯರು ಅವತಾರವೆತ್ತಿ ಬಂದ ಪರಮ ಪುಣ್ಯ ಕ್ಷೇತ್ರ.- ಅದೇ ಕೋಟಿಚೆನ್ನಯರ ಜನ್ಮಸ್ಥಾನದಲ್ಲಿ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದೆ ....

ಮಂಗಳೂರು ಲಕ ಸುದ್ದಿ: ಪಡುಮಲೆಯ ಕೋಟಿ ಚೆನ್ನಯರ ಆರಾಧ್ಯ ದೇವರಾದ  ನಾಗಬೆರ್ಮರ ಗುಡಿಯ ಮಾಡಿನ ಕೆಲಸ ನಡೆಯುತ್ತಿದೆ .ತೀರ್ಥ ಭಾವಿ ,ತಾಯಿ ದೇಯಿ ಬೈದೆದಿಯವರ ಸಾನ್ನಿಧ್ಯ (ಸಮಾಧಿ )ದ ,ನಾಗ ದೇವರ ,ರಕ್ತೇಶ್ವರಿ ಕಟ್ಟೆ ಕೆಲಸ ಸಂಪೂರ್ಣಗೊಂಡಿದೆ .ಸಂಪೂರ್ಣ ಶಿಲಾಮಯ ಆಗಿದ್ದು ನೆಲವು ಶಿಲಾಮಯವಾಗಿರುತ್ತದೆ .ಆವರಣದ ಕೆಲಸ ಆಗಿದೆ .ಪಕ್ಕದಲ್ಲೇ ಆಫೀಸ್ ಹಾಗೂ ಅತಿಥಿ ಗ್ರಹದ ಕಟ್ಟಡದ ಕೆಲಸ ಅಂತಿಮ ಹಂತದಲ್ಲಿದೆ .ಸರಕಾರದ ವತಿಯಿಂದ ರಸ್ತೆ ಕೆಲಸ ಸದ್ಯದಲ್ಲೇ ಪ್ರಾರಂಭವಾಗುತ್ತದೆ .ತಮ್ಮೆಲ್ಲರ ಸಹಕಾರದಿಂದ ಕೋಟಿಚೆನ್ನಯರ ಜನ್ಮಸ್ಥಾನದಲ್ಲಿ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದೆ .

ಇಂದು ಶುಕ್ರವಾರ ಮದ್ಯಾಹ್ನದ ಮಹಾಪೂಜೆಯ ಅಲಂಕಾರದಲ್ಲಿ *ನಾನಾರೂಪಧರ, ನಾಗಾಭರಣ ಶ್ರೀ ಗೋಕರ್ಣನಾಥೇಶ್ವರ* ,🙏ಹಾಗೂ *ಸರ್ವಾಭರಣ ಧಾರಿಣಿ ಶಂಕರಿ ಶರ್ವಾಣಿ* *ಶ್ರೀ ಮಾತಾ ಅನ್ನಪೂರ್ಣೇಶ್ವರಿ* 🙏

*04-09-2020*
*ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ*
ಇಂದು ಶುಕ್ರವಾರ ಮದ್ಯಾಹ್ನದ ಮಹಾಪೂಜೆಯ ಅಲಂಕಾರದಲ್ಲಿ *ನಾನಾರೂಪಧರ, ನಾಗಾಭರಣ ಶ್ರೀ ಗೋಕರ್ಣನಾಥೇಶ್ವರ* ,🙏ಹಾಗೂ *ಸರ್ವಾಭರಣ ಧಾರಿಣಿ ಶಂಕರಿ ಶರ್ವಾಣಿ*
 *ಶ್ರೀ ಮಾತಾ ಅನ್ನಪೂರ್ಣೇಶ್ವರಿ* 🙏

ಶ್ರೀ ನಾರಾಯಣ ಗುರುಗಳ 166ನೇ ಜಯಂತೋತ್ಸವ- ಶ್ರೀ ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ....

ಮಂಗಳೂರು ಲಕ ಸುದ್ದಿ: ಎಲ್ಲಾ ಆತ್ಮೀಯ ಸಂಚಾಲಕರಿಗೆ ನಮಸ್ಕಾರಗಳು..
ತಮಗೆಲ್ಲಾ ಈಗಾಗಲೇ ಅರಿವಿರುವಂತೆ ಪ್ರತಿಷ್ಠಾನದ ವತಿಯಿಂದ ಸೆಪ್ಟೆಂಬರ್ 2ನೇ ತಾರೀಖು ಸಂಜೆ 4 ಗಂಟೆಗೆ ಶ್ರೀ ನಾರಾಯಣ ಗುರುಗಳ 166 ನೇ ಜಯಂತೋತ್ಸವವನ್ನು ಹೊಸ ಹಾಗೂ ವಿನೂತನ ಶೈಲಿಯ virtual ಸಮಾವೇಶವಾಗಿ ಆಚರಿಸಲು ಎಲ್ಲಾ ತಯಾರಿ ನೆಡೆದಿತ್ತು,ಆದರೆ ಶೋಕಚರಣೆ ಇದ್ದ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮ ಮುಂದೂಡಲಾಗಿತ್ತು..

ಈಗ ಈ ಕಾರ್ಯಕ್ರಮ ವನ್ನು ಮರು ನಿಗದಿಪಡಿಸಿದ್ದು ದಿ:10/09/2020 ರ ಗುರುವಾರ ಸಂಜೆ 4:00 ಗಂಟೆಗೆ ನೆಡೆಯಲಿದೆ..

ಈ online ಸಮಾವೇಶ ವು ಜನಾಂಗದ ಇತಿಹಾಸದಲ್ಲಿ ಪ್ರಥಮ ಮತ್ತು ಬೃಹತ್ ಸಮಾವೇಶವಾಗಲಿದ್ದು,  ರಾಜ್ಯಾದ್ಯಂತ ಸಮಾಜ ಭಾಂದವರಲ್ಲಿ ಈಗಾಗಲೇ *ಸಂಚಲನ* ಉಂಟುಮಾಡಿದ್ದು,ರಾಜ್ಯದ ವಿವಿಧ ಭಾಗಗಳಿಂದ ಪ್ರತಿಷ್ಠಾನದ ಸಂಚಾಲಕರುಗಳು ಮತ್ತು ಸಮಾಜ ಭಾಂದವರು ಈ ಸಮಾವೇಶದಲ್ಲಿ ಭಾಗಿಯಾಗಲು ಬಹಳ ಉತ್ಸಾಹ ತೋರುತ್ತಿದ್ದು ಸಂತಸದ ವಿಷಯ..

Video conference ನ್ನು ZOOM app ಮುಖಾಂತರ ನೀವುಗಳು ಭಾಗವಹಿಸಬೇಕು,ಅದಕ್ಕೆ ಬೇಕಾದ link ಮತ್ತು meeting ID ಯನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು..

ತಾವುಗಳು ಮತ್ತು ನಿಮ್ಮ ಜಿಲ್ಲೆಯ ಎಲ್ಲಾ ಸಂಚಾಲಕರುಗಳು ಈ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಲು ಕೋರಿದೆ ಮತ್ತು ತಮ್ಮ ಭಾಗದ ಜನಾಂಗದ ಬಂಧುಗಳು ಈ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ಯನ್ನು ತಾವು ತೆಗೆದುಕೊಳ್ಳಬೇಕು ಎಂದು ಪ್ರತಿಷ್ಠಾನದ ಪರವಾಗಿ ಪ್ರಾರ್ಥನೆ..

ಪ್ರತಿಷ್ಠಾನದ facebook ಅಕೌಂಟ್ ನಲ್ಲಿಯೂ facebook live ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಮೇಲ್ಕಂಡ ಸಮಾರಂಭದ ಬಗ್ಗೆ ತಮ್ಮ ಭಾಗದಲ್ಲಿ ವ್ಯಾ ಪಕ ಪ್ರಚಾರ ಮಾಡಲು ಕೋರಿದೆ..

ಇದೊಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ತಾವೆಲ್ಲಾ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮನವಿ..

 *ವಿಶೇಷ ಆಕರ್ಷಣೆ:*
 *ಈ ಸಮಾರಂಭದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಶ್ರೀ ನಾರಾಯಣ ಗುರುಗಳೇ ಸ್ಥಾಪಿಸಿದ ಮಂಗಳೂರಿನ ಕುದ್ರೋಳಿ ಯಲ್ಲಿರುವ ಶ್ರೀ ಗೋಕರ್ನಾಥೇಶ್ವರ ಕ್ಷೇತ್ರದಲ್ಲಿರುವ ಶ್ರೀ ನಾರಾಯಣ ಗುರು ಮಂದಿರದಿಂದ ನೇರ ಪ್ರಸಾರ ಮಾಡಲಾಗುವುದು*
ನಿಮ್ಮ ಸಹಕಾರ ಬಯಸುವ
       ಆಡಳಿತ ಮಂಡಳಿ
                Jpnp