*ಮದುವೆ ಸಮಾರಂಭಗಳಲ್ಲಿ ಆಶೀರ್ವದಿಸುವ ತವಕದಲ್ಲಿ ಚಪ್ಪಲಿ ಹಾಕಿ ಅಕ್ಕಿಯನ್ನು ತುಳಿಯದಿರಿ*
ಮದುವೆ ಸಮಾರಂಭಗಳಲ್ಲಿ ನಾವು ಅಕ್ಷತೆಯನ್ನು ವಧುವರರ ಶಿರಕ್ಕೆ ಹಾಕಿ ಆಶೀರ್ವದಿಸುವುದು ಉತ್ತಮ ಬೆಳವಣಿಗೆ, ಆದರೆ ಆ ಅಕ್ಷತೆಕಾಳುಗಳನ್ನು ನಾವೇ ಚಪ್ಪಲಿ ಹಾಕಿ ತುಳಿದರೆ, ಇದು ನಾವು ಹೇಳಬೇಕಾದ ಮಾತಲ್ಲ ಅನ್ನ ತಿನ್ನುವ ಪ್ರತಿಯೊಬ್ಬನು ಯೋಚಿಸಬೇಕಾದ ಸಂಗತಿ.
ನಿಜವಾಗಿಯೂ ಅಕ್ಕಿಯನ್ನು ಚಪ್ಪಲಿಯಿಂದ ತುಳಿಯುವ ಅಧಿಕಾರವೆ ನಮಗಿಲ್ಲ, ಹಿರಿಯರು ಕಿರಿಯರಿಗೆ ಬುದ್ದಿ ಹೇಳಬೇಕಾದವರು ಅವರೂ ಕೂಡ ಚಪ್ಪಲಿ ಹಾಕಿ ಸಂಭ್ರಮಿಸುತಾರೆ ಎಂದರೆ ಇದು ಪ್ರಾರಬ್ಧ ಅಲ್ಲದೆ ಮತ್ತೇನು, ದಯವಿಟ್ಟು ಇದರ ಬಗ್ಗೆ ನಮ್ಮ ಯುವಕರು ಆಲೋಚಿಸಬೇಕಾಗಿದೆ , ನಾವು ಚಪ್ಪಲಿ ತೆಗೆದಾಗ ' ಅವ್ ದಾಲಪುಜಿಯ ಪಾಡೊಲಿ ' ಅನ್ನುವವರೇ ಜಾಸ್ತಿ. ಇನ್ನೂ ಮುಂದೆಯಾದರೂ ಈ ಕ್ರಮವನ್ನು ಅನುಸರಿಸೋಣ ಉಣ್ಣುವ ಅನ್ನಕ್ಕೆ ಗೌರವ ಕೊಡೋಣ ( ಇದು ವಧೂವರರಿಗೂ ಅನ್ವಯಿಸುತ್ತದೆ ).
ವರದಿ ಕೃಪೆ: WhatsApp
Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
27 Apr 2022
ಮದುವೆ ಸಮಾರಂಭಗಳಲ್ಲಿ ಆಶೀರ್ವದಿಸುವ ತವಕದಲ್ಲಿ ಚಪ್ಪಲಿ ಹಾಕಿ ಅಕ್ಕಿಯನ್ನು ತುಳಿಯದಿರಿ*
ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ.
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ.ಜಾತಿ ತಾರತಮ್ಯ ನೀತಿಗಳ ವಿರುದ್ಧದ ಹೋರಾಡಿದ ಕೇರಳದ ಮಹಾನ್ ಸಂತ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಆಯೋಜಿಸಿದ್ದ ಶಿವಗಿರಿ ಯಾತ್ರೆಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಸಮಾಜ ಸುಧಾರಕರಾದ ನಾರಾಯಣ ಗುರುಗಳು ಧರ್ಮವನ್ನು ಪರಿಷ್ಕರಿಸಿದರು. ಮತ್ತು ಕಾಲಕ್ಕೆ ತಕ್ಕಂತೆ ಬದಲಾಯಿಸಿದರು. ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ, ಜಗತ್ತಿನ ಯಾವುದೇ ಶಕ್ತಿಯು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುರುಗಳ ಸಂದೇಶಗಳು ‘ಆತ್ಮ ನಿರ್ಭರ ಭಾರತ’ದ ಕಡೆಗೆ ದಾರಿ ತೋರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.
ಜನರಿಗೆ ಜ್ಞಾನದ ಮಾರ್ಗ ತೋರುತ್ತಿರುವ ಬ್ರಹ್ಮ ವಿದ್ಯಾಲಯವು ಇದೀಗ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳುತ್ತದೆ. ಈ ಪಯಣದಲ್ಲಿ ಇಡೀ ಭಾರತವೇ ಜೊತೆಯಾಗಿದೆ. ವಾರಣಾಸಿಯ ಶಿವನ ನಗರವಾಗಲಿ ಅಥವಾ ವರ್ಕಳದ ಶಿವಗಿರಿಯಾಗಲಿ, ಭಾರತದ ಪ್ರತಿಯೊಂದು ಶಕ್ತಿ ಕೇಂದ್ರವು ಭಾರತೀಯರೆಲ್ಲರ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಸ್ಥಳಗಳು ಕೇವಲ ತೀರ್ಥಯಾತ್ರೆಯಾತ್ರೆಯ ಸ್ಥಳಗಳಲ್ಲ, ಕೇವಲ ನಂಬಿಕೆಯ ಕೇಂದ್ರಗಳು ಮಾತ್ರವೇ ಅಲ್ಲ, ಅವು ‘ಏಕ ಭಾರತ, ಶ್ರೇಷ್ಠ ಭಾರತದ ಚೈತನ್ಯದ ಜಾಗ್ರತ ಸ್ವರೂಪಗಳಾಗಿವೆ ಎಂದು ಮೋದಿ ಬಣ್ಣಿಸಿದರು.
ಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿಯೇ ಆಧುನಿಕ ತತ್ವ ಚಿಂಚನೆಗಳನ್ನು ಪ್ರಚುರಪಡಿಸಿದ್ದಾರೆ. ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಶ್ರೀ ಗುರುಗಳು ಜನರಿಗೆ ಶಿಕ್ಷಣ ಮತ್ತು ವಿಜ್ಞಾನದ ಅರಿವು ಮೂಡಿಸಿದರು. ಜಾತೀಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯದ ವಿರುದ್ಧ ತಾರ್ಕಿಕ ಮತ್ತು ಪ್ರಾಯೋಗಿಕ ಹೋರಾಟಗಳನ್ನು ನಡೆಸಿದರು. ದೇಶದ ಬಡವರು, ದೀನದಲಿತರು, ಹಿಂದುಳಿದವರ ಸೇವೆ ನಾವು ಶ್ರಮಿಸುತ್ತರುವುದಕ್ಕೆ ನಾರಾಯಣ ಗುರುಗಳೇ ಸ್ಫೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಶ್ರೀ ವಿ.ಮುರಳೀಧರನ್, ಶಿವಗಿರಿ ಮಠದ ಆಧ್ಯಾತ್ಮಿಕ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ವರದಿ ಕೃಪೆ:ಹೊಸದಿಗಂತ ಡಿಜಿಟಲ್ ಡೆಸ್ಕ್
Subscribe to:
Posts (Atom)