12 Jun 2021

ನಾಗಮ್ಮಜ್ಜಿ ಮನೆಗೆ ಬೇಕು ಆಸರೆ........ನಿಮ್ಮ


*ನಾಗಮ್ಮಜ್ಜಿ ಮನೆಗೊಂದು ಕಲ್ಲು ನೀಡೋಣ*
 ಬೀಳುವ ಹಂತದಲ್ಲಿದ್ದ ಬ್ರಹ್ಮರಕೂಟ್ಲು ಜಾರಂದಗುಡ್ಡೆ ನಿವಾಸಿ ನಾಗಮ್ಮ ಪೂಜಾರ್ತಿಯವರ ಮನೆ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದೆ. ಲಾಕ್‌ಡೌನ್ ನಿಯಮ, ಮಳೆಯ ಅಡೆತಡೆಯ ಮಧ್ಯೆಯೇ ಮುಂದಿನ *ಗಣೇಶ ಚತುರ್ಥಿ* ಸಂದರ್ಭ ಪೂರ್ಣ ಪ್ರಮಾಣದ ಮನೆ ನಿರ್ಮಿಸಿಕೊಡಬೇಕೆಂಬ ನಿಟ್ಟಿನಲ್ಲಿ ನಾಗಮ್ಮಜ್ಜಿಗೊಂದು ಮನೆ ಕಟ್ಟೋಣ ಅಭಿಯಾನ ಹಮ್ಮಿಕೊಂಡು ನಮ್ಮ ಕಾರ್ಯ ಮುಂದೆ ಸಾಗಿದೆ. 
 ಶ್ರಮದಾನದ ಮೂಲಕ ಹಳೇ ಮನೆ ಕೆಡವಿ, ನೆಲ ಸಮತಟ್ಟು ಮಾಡುವ ಕೆಲಸ ನಡೆದಿದೆ. *20 ದಿನದೊಳಗೆ ಶಿಲಾನ್ಯಾಸ ನೆರವೇರಿಸಿ ಅಡಿಪಾಯ ಹಾಕುವುದು ಮುಂದಿರುವ ಗುರಿ.* ಸಹೃದಯಿ ದಾನಿಗಳ ನೆರವಿನಿಂದ ಅಗತ್ಯ ವಸ್ತುಗಳ ಸಂಗ್ರಹ ಆಗುತ್ತಿದೆ. ಈ ಮಧ್ಯೆ *ಅಭಿಯಾನದ ಮುಂದಿನ ಹಂತ* ವನ್ನು ಕೈಗೆತ್ತಿಕೊಂಡಿದ್ದೇವೆ. ಅದು *ನಾಗಮ್ಮಜ್ಜಿ ಮನೆಗೊಂದು ಕಲ್ಲು ನೀಡೋಣ ಅಭಿಯಾನ*. 
 ಸುಮಾರು 650 ಚದರ ಅಡಿಯ ಮನೆ ನಿರ್ಮಾಣದ ಯೋಜನೆ ರೂಪಿಸಿದ್ದು *2500 ಕೆಂಪು ಕಲ್ಲು* ಬೇಕಿದೆ. *ಒಂದು ಕಲ್ಲಿಗೆ 25ರಿಂದ 30 ರೂಪಾಯಿ.* 2500 ಮಂದಿಯಿಂದ ಇದನ್ನು ಸಂಗ್ರಹಿಸುವ ಯೋಜನೆ ನಮ್ಮದು. ಬಂಧುಗಳೇ, ಲಾಕ್‌ಡೌನ್‌ನ ಈ ಸಮಯದಲ್ಲಿ ದೊಡ್ಡ ಮಟ್ಟದ ನೆರವು ನೀಡುವುದು ಎಲ್ಲರಿಗೂ ಕಷ್ಟ. ನಾವು ಕೇಳುವುದೂ ಸರಿಯಲ್ಲ. ಅದಕ್ಕಾಗಿ ಒಂದು ಕಲ್ಲಿನ ಬಾಬ್ತು 30 ರೂಪಾಯಿ ಕೇಳುತ್ತಿದ್ದೇವೆ. ನಿಮ್ಮ ನೆರವಿನ ನಿರೀಕ್ಷೆಯಲ್ಲಿ...
 
 ನೆರವು ನೀಡುವವರು ನಾಗಮ್ಮಜ್ಜಿಯ ಸೊಸೆ ಜಯಂತಿಯವರ ಈ ಕೆಳಗಿನ ಅಕೌಂಟ್ ನಂಬರ್‌ಗೆ ದೇಣಿಗೆ ನೀಡಬಹುದು. 
 ಬ್ಯಾಂಕ್ ಖಾತೆ ವಿವರ: ಜಯಂತಿ, ಬ್ಯಾಂಕ್ ಆಫ್ ಬರೋಡಾ, ತುಂಬೆ ಶಾಖೆ, ಅಕೌಂಟ್ ನಂಬರ್: 83720100001712, IFSC : BARBOVJTHUM.  
 *ಗೂಗಲ್ ಪೇ/ಫೋನ್ ಪೇ: 9535538870*(Sanjith ನಾಗಮ್ಮಜ್ಜಿಯ ಮೊಮ್ಮಗ). 
 ಮಾಹಿತಿಗೆ ಮತ್ತು ವಸ್ತು ರೂಪದಲ್ಲಿ ನೆರವು ನೀಡುವವರು 9964213454 ಸಂಪರ್ಕಿಸಬಹುದು.

No comments:

Post a Comment