26 Feb 2021

ಗ್ರಾಮೀಣ ಪ್ರತಿಭೆ ಕುಮಾರಿ ಚೇತನಾ -ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ

ಮಂಗಳೂರು ಲಕ ವಿಶೇಷ ಸುದ್ದಿ:
*ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಗ್ರಾಮೀಣ ಪ್ರತಿಭೆ ಕು| ಚೇತನಾ*

ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿಯಾಗಿರುವ ಕು| ಚೇತನಾ (29) ರವರು ಕರ್ನಾಟಕ ಉಚ್ಚ ನ್ಯಾಯಾಲಯದ 2020ನೆ ಸಾಲಿನಲ್ಲಿ ನಡೆದ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಈ ಕುರಿತು  ಸಿವಿಲ್  ಜಡ್ಜ್ ಆಯ್ಕೆ ಸಮಿತಿ ಫೆ.25ರಂದು ಅಧಿಸೂಚನೆ ಹೊರಡಿಸಿದೆ.

ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ  ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ಪುತ್ರಿಯಾಗಿರುವ ಚೇತನಾ ರವರು ನಾನೂನು ಪಧವಿಧರೆಯಾಗಿದ್ದು, ಶ್ರೀ. ಧ. ಮಂ. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿ ಸಮೀಪದ ಸರ್ಕಾರಿ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ. ಧ. ಮಂ. ಸೆಕೆಂಡರಿ ಶಾಲೆ ಧರ್ಮಸ್ಥಳದಲ್ಲಿ ಪೂರೈಸಿದ್ದಾರೆ.

ವಿದ್ಯಾಭ್ಯಾಸದ ಬಳಿಕ ಬೆಳ್ತಂಗಡಿಯ ನ್ಯಾಯವಾದಿ ಕೇಶವ ಪಿ. ಬೆಳಾಲು ರವರ ಕಚೇರಿಯಲ್ಲಿ ವಕೀಲ ವೃತ್ತಿ ಸೇವೆ ಸಲ್ಲಿಸಿದ್ದು, ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ರವರ ಲಾ ಕ್ಲಾರ್ಕ್ ರೀಸರ್ಚ್ ಅಸಿಸ್ಟಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಕೆಳೆದ ಒಂದು ವರ್ಷಗಳಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನ ಗೌಡರ್‌ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.