11 Mar 2022

ಪಾಂಡವರಕಲ್ಲು - ವಾರ್ಷಿಕ ಜಾತ್ರಾ ಮಹೋತ್ಸವ

ಮಂಗಳೂರು ಲಲಿತಕಲಾಮೃತ ವಿಶೇಷ ಸುದ್ದಿ;
ಪಾಂಡವರಕಲ್ಲು - ವಾರ್ಷಿಕ ಜಾತ್ರಾ ಮಹೋತ್ಸವ
---------------------------------------------------------
ಬಂಟ್ವಾಳ ತಾಲೂಕಿನ  ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ
ದಿನಾಂಕ 12-3-2022 ರಿಂದ 18-03-2022 ರವರೆಗೆ
ವಾರ್ಷಿಕ ಜಾತ್ರಾ ಮಹೋತ್ಸವ ಜರಗಲಿರುವುದು.
ದಿನಾಂಕ 12-3-2022 ಶನಿವಾರ ಬೆಳಿಗ್ಗೆ 10 ಗಂಟೆಗೆ ಸಾರಿ ಹಾಕುವುದು, ಅದೇ ದಿನ ರಾತ್ರಿ ದೊಂಪದ ಬಲಿ ನೇಮೋತ್ಸವ, ದಿನಾಂಕ 14-3-2022  ರಂದು ರಾತ್ರಿ ಕಜೆಕಾರು ಗುತ್ತಿನಿಂದ ರಾಜನ್ ದೈವ ಕೊಡಮಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಬ್ರಹ್ಮಬೈದೆರೆ ಭಂಡಾರ ಬಂದು ಬಲಿ ಉತ್ಸವ, ದಿನಾಂಕ 15-3-2022 ರಂದು ಮುಂಜಾನೆ ಧ್ವಜಾರೋಹಣ,ರಾತ್ರಿ ಕಂರ್ಬಡ್ಕ ಗುತ್ತಿನಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಬಂದು ದೈವದ ‌ನೇಮೋತ್ಸವ, ದಿನಾಂಕ 16-3-2022 ರ ರಾತ್ರಿ ರಾಜನ್ ದೈವ ಕೊಡಮಣಿತ್ತಾಯ ಮತ್ತು ಕಲ್ಕುಡ ‌‌ದೈವದ ನೇಮೋತ್ಸವ. ದಿನಾಂಕ 17-3-2022 ರಂದು ಮುಂಜಾನೆ 5 ಗಂಟೆಗೆ ಪಿಲಿಚಾಮುಂಡಿ ನೇಮೋತ್ಸವ, *ಶ್ರೀ ಬ್ರಹ್ಮಬೈದೆರೆ ಜಾತ್ರೋತ್ಸವ,ರಾತ್ರಿ 7.,ಗಂಟೆ  ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಶಾಶ್ವತ ಅನ್ನಸಂತರ್ಪಣೆಯ ದಾನಿಗಳ ಸೇವಾರ್ಥ ಮಹಾ ಅನ್ನಸಂತರ್ಪಣೆ,ರಾತ್ರಿ ಗಂಟೆ 10ರಿಂದ ಬೈದೆರ್ ಗಳು ಗರೋಡಿ ಇಳಿಯುವುದು,ರಾತ್ರಿ ಗಂಟೆ 11.30 ರಿಂದ  ಗರೋಡಿ ಫ್ರೆಂಡ್ಸ್ ಪಾಂಡವರಕಲ್ಲು ಇವರ ಪ್ರಾಯೋಜಕತ್ವದಲ್ಲಿ ಗಿರಿಗಿಟ್ ಗಿರಿಧರೆ ಎಂಬ ತುಳು ನಾಟಕ, ದಿನಾಂಕ 18-03-2022 ರಂದು ಧ್ವಜಾರೋಹಣ, ಕುರುಸಂಬಿಲ ನೇಮ ,ಭಂಡಾರ ಇಳಿಯುವುದು.
ಕ್ಷೇತ್ರದ ವತಿಯಿಂದ ನಡೆಯುವ ಈ ಎಲ್ಲಾ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ದೈವದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ,ಪತ್ರಿಕಾ ಪ್ರಕಟಣೆಯಲ್ಲಿ  ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಪೂಜಾರಿ ತಿಳಿಸಿದ್ದಾರೆ.