my experience with amma

ನನ್ನ ಮೊದಲ ಭೇಟಿ -ಅಮ್ಮನ ಅನುಭವ 
               
ನಾ ಕೃಷ್ಣನ ಭಕ್ತೆಯಾಗಿದ್ದೆ ... 
ಒಂದು ದಿನ ನನಗೆ ಅಮ್ಮನ ಭಕ್ತರು ಒಬ್ಬರು ಅಮ್ಮ ನ ಬಗ್ಗೆ ವಿಷಯಗಳನ್ನು ತಿಳಿಸಿದರು . 
ನನಗೆ ಕ್ರಮೇಣ ನನ್ನಲ್ಲಿ ಅಮ್ಮನ  ಮೇಲಿರುವ  ಪ್ರೀತಿ ,ಪ್ರೇಮ ಹೆಚ್ಚಾಯಿತು ... ಅಮ್ಮನನ್ನು  ನೋಡಬೇಕು ,ದರ್ಶನ  ಪಡೆಯಬೇಕೆಂದು   ಮನಸ್ಸು  ಹಾತೊರೆಯುತಿತ್ತು ... 
ಅದೇ ನನಗೆ ಅಮ್ಮನ ಬಗ್ಗೆ ಮಾಹಿತಿ ಕೊಟ್ಟ ಅಮ್ಮನ ಭಕ್ತ , ಅವರಲ್ಲಿ  ನಾ ಕೇಳಿದೆ ನನಗೆ ಅಮ್ಮನ   ದರ್ಶನ ಮಾಡಬೇಕು ,ಅಮ್ಮನನ್ನು ನೋಡಬೇಕು ಎ೦ದು. ಅವರೇ ನನಗೆ ಅಮ್ಮ 23-2-2017ಕ್ಕೆ ಮಂಗಳೂರಿಗೆ  ಬರುತ್ತಿದ್ದಾರೇ ....  ಎ೦ದು.  ನಾ   ಕೇಳಿದೆ ನನಗೆ ಅಮ್ಮನ  ದರ್ಶನ ಸಿಗಬಹುದೇ ...? ಅವರು  ಹೇಳಿದ್ರು ನಿಮಗೆ ಖಂಡಿತಾ ಅಮ್ಮನ ವ್ಯಯಕ್ತಿಕ  ದರ್ಶನ ಸಿಗುತ್ತೆ  ಎ೦ದು .  ಸರಿ  ನಾ  ದಿನಾಂಕ  23-2-2017ಕ್ಕೆ  ಅಮ್ಮ ದರ್ಶನ ನೀಡುವ  ಸ್ಥಳವಾದ ಬೋಳೂರಿನ ಅಮೃತ ವಿದ್ಯಾಲಯ ಕ್ರೀಡಾಂಗಣಕ್ಕೆ ಹೋದೆ . ಅಮ್ಮ ಕುಳಿತುಕೊಳ್ಳುವ ವೇದಿಕೆಯ ಮುಂಭಾಗದಲ್ಲಿ ಬಂದು ಕುಳಿತೇ . ಸ್ವಲ್ಪ ಹೊತ್ತು  ಆದ  ನಂತರ .. ಯಾರೂ ಒಂದು ಕುಟುಂಬದ ಮೂರು ಜನ ನನ್ನ ಹತ್ತಿರದ ಕುರ್ಚಿ ಮೇಲೆ  ಬಂದು ಕುಳಿತುಕೊಂಡರು.   ಸ್ವಲ್ಪ ಸಮಯದ  ನಂತರ ಆ ಕುಟುಂಬದ ಒಬ್ಬ ಸದಸ್ಯೆ ನನ್ನ ಬಗ್ಗೆ ವಿಚಾರಿಸಿ ,ನೀವು ಅಮ್ಮನ ಭೇಟಿ ಮೊದಲು ಮಾಡುವುದೇ ..??? ಏಂದು ಕೇಳಿದ್ರು . ನಾ ಹೌದು ಎ೦ದೇ . ನಾ  ಕೊಡಾ  ಅವರ ಬಗ್ಗೆ ವಿಚಾರಿಸಿದೆ ಅವರೂ  ಅಮ್ಮನ  ಬಳಿಗೆ  ಸುಮಾರು 10 ವರುಷಗಳಿಂದ ಬರುತ್ತಿದ್ದರು ಮತ್ತು ಅಮ್ಮನ  ದರ್ಶನ  ಪಡೆಯುತ್ತಿದ್ದರು ಎ೦ದರು.  
ಈಗೇ ನಮ್ಮ ಮಾತು ಮುಂದುವರಿಯುತ್ತಿತು..... ತಕ್ಷಣ ಅವರಿಗೊಂದು ದೂರವಾಣಿ  ಕರೆ ಬಂತು ...... !!!!!   ನೀವು ಎಷ್ಟ್ಟು ಜನರಿದ್ದೀರಿ ...?! ನನ್ನಲ್ಲಿ ಒಂದು Special  Invite Pass ಇದೇ ಎ೦ದು, ಆವಾಗ ಅವರು ನಾವು ಮೂರು ಜನ ಮತ್ತು ಇನ್ನೊಬ್ಬರು   ಇದ್ದಾರೆ  ಎ೦ದರು . ಸರಿ  ಆ  ಪಾಸ್ ನಲ್ಲಿ  4 ಜನ ಹೋಗಬಹುದು ಎ೦ದರು. ಅವರಿಗೆ ಆ ಪಾಸ್ ಸಿಕ್ಕಿತ್ತು . ಅದನ್ನು  ಅವರು ತೆಗೆದುಕೊಂಡು ಹೋಗಿ ಕೌಂಟರ್ ನಲ್ಲಿ  ಕೊಟ್ಟು , 4 ಜನರಿಗೆ   ದರ್ಶನಕ್ಕೆ  ಮತ್ತು  ಮಹಾಪ್ರಸಾದಕ್ಕೆ ಕೂಪನ್ ಸಿಕ್ಕಿತ್ತು. ಮತ್ತು  ಅಮ್ಮನ  ದರ್ಶನಕ್ಕೆ  ಹೋಗುವ ಕೂಪನ್ ನನ್ನು ಬದಲಾವಣೆ ಮಾಡಿ ನಂತರ ದರ್ಶನ ಟೋಕನ್ ನಮ್ಮ ಕೈ ಸೇರಿತ್ತು . 
ನನಗೆ ಅವಾಗ ನೆನಪಿಗೆ ಬಂತು ... !   ಶ್ರೀ ಕೃಷ್ಣ ನ  ಮತ್ತು ಸುಧಾಮನ  ಆ  ಬಾಲ್ಯದ ನೆನಪು .....!!!  ಅದು ಅದ್ಬುತ....!!!
ಅವನ್ನು ತನ್ನ ಬಾಲ್ಯ ಸ್ನೇಹಿತನಿಗೆ ಕೊಟ್ಟ ರಾಜಮರ್ಯಾದೆ  ಮಹಾ ಅದ್ಬುತ ..!
ಅದೇ  ಅಂದು  ನನಗಾದ ಆನಂದ ,ಸಂತೋಷ ಅದನ್ನು ವಿವರಿಸಲಾಗದು ..... ಅದೇ  ನನಗೆ ಸರಿ  ಸುಮಾರು ಸಮಯ ರಾತ್ರಿ  1. 30 ಕ್ಕೆ ಅಲ್ಲಿ ಸಿಕ್ಕಿದು ಅಮ್ಮನ  ದರ್ಶನ ಭಾಗ್ಯ ..!  ನಾ ಕಂಡೇ ಅದೇ ಶ್ರೀ ಕೃಷ್ಣ ಅದೇ ಅಮ್ಮ ...!!!.  
ನನಗೆ ತುಂಬ ಆನಂದವಾಯಿತು ಅಮ್ಮನ  ದರ್ಶನ ಭಾಗ್ಯದ ಆ  ಕೃಪೆ .... 
ಅಲ್ಲಿಂದಲೇ ನನಗೆ ಅಮ್ಮ ಹೊಸ ಜೀವನ ..... ಅಮ್ಮ ತೋರಿಸಿಕೊಟ್ಟರು . 
ಅಮ್ಮನಿಗೆ ನಾ ಸದಾ ಚಿರಋಣಿಯಾಗಿದ್ದೇನೆ.
 ಈಗ ನಾ ದಿನಾ ಅಮ್ಮನಿಗೆ ವಂದನೆಗಳನ್ನು ಸಲ್ಲಿಸಿ , ನನ್ನ ಕೆಲಸ ಕಾರ್ಯಗಳನ್ನು ಮುಂದುವರಿಸುತ್ತಿದ್ದೇನೆ. ಮತೊಮ್ಮೆ ಅಮ್ಮನಿಗೆ ನನ್ನ ಹೃದಯಾಂತರಾಳದ ನಮನಗಳು. ಅಮ್ಮ ನೀನೂ ಸದಾ ನನ್ನ ಜೊತೆಗಿರು... ಅಮ್ಮ . 
ಅಮ್ಮ ಈ ನನ್ನ ಅನುಭವ ನೀನೇ  ನನಗೆ ಕೊಟ್ಟಿರುವುದು  ಇದು ನಿನಗೆ  ಅರ್ಪಣೆ ಅಮ್ಮ  . ....     
ಅಮ್ಮ ನಾ ನಿನ್ನ  ಭಕ್ತೆ ಸದಾ ನಿನ್ನ  ನೆನಪಲಿ  ನಾನಿರುವೆ .... 


 - ಶ್ರೀಮತಿ ರಜನಿ ಶೆಣೈ,ಮಂಗಳೂರು .

No comments:

Post a Comment