ಮಂಗಳೂರು ಲಕ ಸುದ್ದಿ:ಶ್ರೀಯುತ ಕೆ ರಾಮಾನಂದ ಸಾಲಿಯಾನ್ ಬೆಳ್ತಂಗಡಿ ಇವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ .ಸಾರ್ವಜನಿಕವಾದ ಯಾವುದೇ ಕೆಲಸವಿದ್ದರೆ ಯಾರಿಗೂ ಗೊತ್ತಾಗದ ಹಾಗೆ ಬಂದು ಮಾರ್ಗದರ್ಶನ ನೀಡಿ ಬೇಕಾದ ಪರಿಕರಗಳನ್ನು ನೀಡಿ ಧನಸಹಾಯ ಮಾಡಿ ಇನ್ನು ಏನಾಗಬೇಕು ಎಂದು ಕೇಳಿ ಕೆಲಸ ಸಂಪೂರ್ಣ ಮಾಡುವ ತನಕ ತೊಡಗಿಸಿಕೊಳ್ಳುತ್ತಿದ್ದರು .ಹಲವಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಮಹನೀಯರು .ಇವರು ನಮ್ಮ ಪಡುಮಲೆಯ ಅಷ್ಟಮಂಗಲದಲ್ಲಿ ಸಂಪೂರ್ಣ ಭಾಗವಹಿಸಿ ಎಲ್ಲಾ ಕುರುಹುಗಳನ್ನು ಪರಿಶೀಲನೆ ಮಾಡಿ ಸೂಕ್ತವಾದ ಸಲಹೆ ನೀಡಿ ಮುಂದುವರೆಯಲು ಧೈರ್ಯ ನೀಡಿದವರು .ಪಡುಮಲೆಗೆ ಮೊತ್ತ ಮೊದಲ ದೇಣಿಗೆ ನೀಡಿದ ಕೀರ್ತಿ ಶ್ರೀಯುತ ಕೆ ರಾಮಾನಂದ ಸಾಲಿಯಾನ್ರವರದ್ದು .ಇದನ್ನು ನಮ್ಮ ಪಡುಮಲೆಯ ಊರ ಹತ್ತು ಸಮಸ್ತರು ಹಾಗೂ ನಮ್ಮ ಸಮಿತಿಯವರು ಸದಾ ಸ್ಮರಿಸುತ್ತಾ ಅವರಿಗೂ ಅವರ ಕುಟುಂಬದವರಿಗೂ ಅಭಾರಿಯಾಗಿರುತ್ತೇವೆ .ಆರಾಧ್ಯ ದೇವರಾದ ನಾಗಬೆರ್ಮೆರು ,ಕಾರಣಿಕದ ಪುರುಷರಾದ ಕೋಟಿಚೆನ್ನಯರು ತಾಯಿ ದೇಯಿಬೈದೆದಿ ಯವರು ಹಾಗೂ ಭಗವಂತ ಅಗಲಿದ ಆತ್ಮಕ್ಕೆ ಚಿರ ಶಾಂತಿ ನೀಡಲೆಂದು ಕೋರುತ್ತೇವೆ .
ಅಧ್ಯಕ್ಷರು/ಸರ್ವ ಸದಸ್ಯರು ಕೋಟಿಚೆನ್ನಯ್ಯಜನ್ಮಸ್ಥಾನ ಸಂಚಲನ ಸೇವಾ ಸಮಿತಿ ಪಡುಮಲೆ ಹಾಗೂ ಊರಿನ ಹತ್ತು ಸಮಸ್ತರು.