Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
5 Jun 2021
ಇದು ನಮ್ಮ ಮುಂದಿನ ಪೀಳಿಗೆಗಾಗಿ....!!! ಅವಶ್ಯ
ಕುದ್ರೋಳಿ ಶ್ರೀ ಗೋಕರ್ಣನಾಥ ಮಹಾ ಕ್ಷೇತ್ರದಿಂದ- ಮಾನವ ಧರ್ಮಕ್ಕೆ ನಿರಂತರವಾಗಿ.. ಸಮಾಜಮುಖಿ ಮಹಾಸೇವೆ ಇಲ್ಲಿ ನಡೆಯುತ್ತಿದೆ ...!!! ಮಹಾಗುರು ಸೇವೆಯೇ...ಮಹಾ ಪ್ರೇರಣೆಯೇ.... ಶ್ರೀ ನಾರಾಯಣ ಗುರುವಿನ....ಆಗಿರಬಹುದು....ನಿಜ....!!!
ಮಂಗಳೂರು ಲಕ ವಿಶೇಷ ವರದಿ:
ವಿಶ್ವ ಬಿಲ್ಲವ ಮಹಿಳಾ ಸಂಘ(ರಿ)
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು.
ಇದರ ಮಹಿಳಾ ಸಂಘದ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ
ಕೋವಿಡ್ ಲಾಕ್ ಡೌನ್ ಪ್ರಯುಕ್ತ ಅರ್ಹರಿಗೆ ದಿನಸಿ ಆಹಾರದ ಕಿಟ್ ವಿತರಣೆ.
ದಿನಾಂಕ 5-6-2021 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸಾಯಿರಾಂ ಇವರು ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿ ಶ್ರೀ ಕ್ಷೇತ್ರದ ಹೋರಾಂಗಣದಲ್ಲಿ ಸಾಂಕೇತಿಕವಾಗಿ ಅರ್ಹರಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೂಡಾ ಅಧ್ಯಕ್ಷರು ಹಾಗೂ ಟ್ರಸ್ಟಿಗಳಾದ ಶ್ರೀ ರವಿಶಂಕರ್ ಮಿಜಾರ್,
ಶ್ರೀ ಪದ್ಮರಾಜ್ ಆರ್ (ಕೋಶಾಧಿಕಾರಿ,ಶ್ರೀ ಗೋಕರ್ಣನಾಥ ಕ್ಷೇತ್ರ), ಸಮಾಜಸೇವಕರಾದ ಶ್ರೀಯುತ ಶೇಖರ್ ಪೂಜಾರಿ ಮುಂತಾದವರು ಉದಾರ ಮನಸ್ಸಿನಿಂದ ತನು-ಮನ-ಧನಗಳಿಂದ ನಮ್ಮ ಸಂಘಕ್ಕೆ ಸಹಕಾರವನ್ನು ನೀಡಿ ಬೆಂಬಲಿಸಿರುತ್ತಾರೆ. ಡಾ.ಬಿ.ಜಿ.ಸುವರ್ಣ, ಶ್ರೀ ಸುನಿಲ್ ಕುಮಾರ್,(ಸುಮಂಗಲಾ ಕ್ಯಾಟರರ್ಸ್ ಮಾಲಕರು) ದೇವಸ್ಥಾನದ ಅರ್ಚಕ ವೃಂದ ಹಾಗೂ ಸೇವಾನಿರತರು ಈ ಸಂದರ್ಭದಲ್ಲಿ ನಮ್ಮೊಂದಿಗೆ ಸಂಪೂರ್ಣವಾಗಿ ಸಹಕರಿಸಿರುತ್ತಾರೆ. ಇವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದೆಯೂ ನಿಮ್ಮೆಲ್ಲರ ಅಮೂಲ್ಯ ಸಲಹೆ ಹಾಗೂ ಸಹಕಾರ ಹೀಗೆ ಇರಲಿ ಎಂದು ಆಶಿಸುತ್ತಾ. ಈ ದಿನ ಸುಮಾರು 200 ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ ವಿಶ್ವ ಬಿಲ್ಲವ ಮಹಿಳಾ ಸಂಘದ ಸಕ್ರಿಯ ಸದಸ್ಯರಿಗೂ ,
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಮತ್ತೊಮ್ಮೆ ಜ್ಞಾಪಿಸುತ್ತಾ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೆನೆ.
ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ (ಅಧ್ಯಕ್ಷರು), ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು (ವಿಶ್ವಬಿಲ್ಲವ ಮಹಿಳಾ ಸಂಘ ರಿ.)
ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘ (R)ಇದರ ವತಿಯಿಂದ ನಡೆದ ಅಕ್ಕಿ ಮತ್ತು ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಕ್ಷೇತ್ರದ ಮಹಾಗುರು ಸಾನಿಧ್ಯದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ H. S. ಸಾಯಿರಾಂ ಮತ್ತು ಟ್ರಸ್ಟಿಗಳಾದ ಶ್ರೀ ರವಿಶಂಕರ್ ಮಿಜಾರ್, ಶ್ರೀ M. ಶೇಖರ್ ಪೂಜಾರಿ ಇವರುಗಳ ಗೌರವ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಯುತ M. ಶೇಖರ್ ಪೂಜಾರಿಯವರು ಸಹಾಯ ಧನದ ಚೆಕ್ಕನ್ನು ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಇವರಿಗೆ ಹಸ್ತಾಂತರಿಸಲಾಯಿತು.