28 Mar 2022

ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಬಿಲ್ಲವರ ಕೂಡು ಕುಟುಂಬ ಕಾರ್ಯಕ್ರಮ.*

ಮಂಗಳೂರು :ಲಲಿತಕಲಾಮೃತ ವಿಶೇಷ ಸುದ್ದಿ
*ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಬಿಲ್ಲವರ ಕೂಡು ಕುಟುಂಬ ಕಾರ್ಯಕ್ರಮ.*
#######################
           ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ಸಾಲದು, ಉತ್ತಮ ಸಂಸ್ಕಾರವನ್ನೂ ಕಲಿಸಬೇಕು. ಆ ಕಾರ್ಯವನ್ನು ಹೆತ್ತವರು ಮಾಡಬೇಕು. ಮಕ್ಕಳ ಆಸಕ್ತಿಯನ್ನು ಗಮನಿಸುತ್ತಿರಬೇಕು, ಪರಿಸರದ ಬಗ್ಗೆ, ನಮ್ಮ ಸಂಸ್ಕ್ರತಿ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಅರುಣ್ ಉಳ್ಳಾಲ್ ರವರು ಹೇಳಿದರು.
      ಅವರು ತೊಕ್ಕೊಟಿನಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಮೂಲಕ ನಡೆದ ಬಿಲ್ಲವರ ಕೂಡು ಕುಟುಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
     ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
        ವೇದಿಕೆಯ ಕಾರ್ಯಧ್ಯಕ್ಷರಾದ ಸತೀಶ್ ಕರ್ಕೇರ, ಗೌರವ ಸಲಹೆಗಾರರಾದ ಎ.ಜೆ.ಶೇಖರ್, ಬಾಬು ಶ್ರೀಶಾಸ್ತ ಕಿನ್ಯಾ, ಚಂದ್ರಹಾಸ ಪಂಡಿತ್ ಹೌಸ್, ಚಂದ್ರಶೇಖರ ಉಚ್ಚಿಲ, ಕೆ.ಪಿ.ಸುರೇಶ್, ದಿನೇಶ್ ಕೆ.ಅತ್ತಾವರ್, ಉಪಾಧ್ಯಕ್ಷರಾದ ಹರೀಶ್ ಮುಂಡೋಳಿ, ದತ್ತು ಸಂಚಾಲಕರಾದ ಆನಂದ ಕೆ.ಅಸೈಗೋಳಿ, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ, ಪ್ರಮುಖರಾದ ರಾಜೇಶ್ ಕೆರೆಬೈಲ್, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು, ಕೃಷ್ಣಪ್ಪ ಕಿನ್ಯಾ, ಜಯಂತ್ ಕಾಪಿಕಾಡ್, ಸಂತೋಷ್ ಕೆರೆಬೈಲ್ ಇತರರು ಉಪಸ್ಥಿತರಿದ್ದರು.
         ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು ಕಾರ್ಯಕ್ರಮ ನಿರೂಪಿಸಿದರು.
        ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯ ಸದಸ್ಯರಿಂದ ಮತ್ತು ಮಕ್ಕಳಿಂದ ನಡೆಯಿತು. ಖ್ಯಾತ ಮಿಮಿಕ್ರಿ ಕಲಾವಿದ, ತುಳು ಚಲನಚಿತ್ರ ನಟ ಕ್ಯಾಂಡಿ ಕ್ರಷ್ ಶರಣ್ ರವರಿಂದ ಮಿಮಿಕ್ರಿ, ಡಿ ಟು ಡಿ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.