ಮಂಗಳೂರು ಲಕ ಸುದ್ದಿ:
*ಕುದ್ರೋಳಿ ಕ್ಷೇತ್ರ ಅಭಿವೃದ್ಧಿ ಸಮಿತಿಗೆ ದೇವೇಂದ್ರ ಪೂಜಾರಿ ಅಧ್ಯಕ್ಷ*
*ಸಮಿತಿ ಸಭೆಯಲ್ಲಿ ಜನಾರ್ದನ ಪೂಜಾರಿ ಸೂಚನೆ*
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿ ಸಮಿತಿ ಸಭೆ ದೇವಸ್ಥಾನದ ಅಭಿವೃದ್ಧಿ ರುವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಉಪಸ್ಥಿತಿಯಲ್ಲಿ ಮಂಗಳವಾರ ನಡೆಯಿತು.
ಈ ಹಿಂದೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಜಯ ಸಿ. ಸುವರ್ಣ ನಿಧನದಿಂದ ಖಾಲಿಯಾದ ಅಧ್ಯಕ್ಷ ಹುದ್ದೆ ಮತ್ತು ಇತರ ಪದಾಧಿಕಾರಿಗಳ ಬಗ್ಗೆ ಸದಸ್ಯರು ಸಭೆಗೆ ತಿಳಿಸಿದರು. ಅದರಂತೆ ದೇವೇಂದ್ರ ಪೂಜಾರಿಯವರನ್ನು ಸಮಿತಿ ಅಧ್ಯಕ್ಷರನ್ನಾಗಿ, ಡಾ.ಅನುಸೂಯ ಬಿ. ಸಾಲ್ಯಾನ್ ಅವರನ್ನು ಸಹ ಅಧ್ಯಕ್ಷರಾಗಿ, ಬಿ.ಜಿ.ಸುವರ್ಣ ಉಪಾಧ್ಯಕ್ಷರಾಗಿ, ಜತಿನ್ ಅತ್ತಾವರ ಸಮಿತಿ ಸಂಚಾಲಕರಾಗಿ ಹಾಗೂ ಹಾಲಿ ಸದಸ್ಯರ ಜತೆಗೆ ಉಷಾಕಿರಣ್, ಎಚ್.ಸಿ.ಜಯರಾಜ್, ಲೀಲಾಕ್ಷ ಕರ್ಕೇರ, ಚಂದನದಾಸ್, ಸೂರ್ಯ ಸಿ. ಸುವರ್ಣ, ಕಿಶೋರ್ ಕುಮಾರ್ ದಂಡಕೇರಿ, ಗೌರವಿ ರಾಜೇಶ್ ಅವರನ್ನು ನೂತನ ಸದಸ್ಯರನ್ನಾಗಿ ಜನಾರ್ದನ ಪೂಜಾರಿ ನೇಮಕ ಮಾಡಿದರು.
ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಉಪಾಧ್ಯಕ್ಷರನ್ನಾಗಿ ಊರ್ಮಿಳಾ ರಮೇಶ್ ಕುಮಾರ್ ಅವರನ್ನು ನೇಮಕ ಮಾಡಬೇಕು ಎಂದು ಜನಾರ್ದನ ಪೂಜಾರಿ ಆಡಳಿತ ಮಂಡಳಿಗೆ ಸೂಚಿಸಿದರು.
ಎಂಎಲ್ಸಿ ಹರೀಶ್ ಕುಮಾರ್ ಬೆಳ್ತಂಗಡಿ, ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಮಹೇಶ್ಚಂದ್ರ, ವೇದಕುಮಾರ್, ಡಾ.ಅನುಸೂಯ, ಡಾ.ಬಿ.ಜಿ.ಸುವರ್ಣ, ರಮಾನಾಥ ಕಾರಂದೂರು, ರಾಧಾಕೃಷ್ಣ, ಚಿತ್ತರಂಜನ್ ಕಂಕನಾಡಿ, ಜಯವಿಕ್ರಮ, ಜತಿನ್ ಅತ್ತಾವರ, ದೇವೇಂದ್ರ ಪೂಜಾರಿ, ಲೀಲಾಕ್ಷ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment