ಬ್ರಹ್ಮಶ್ರೀ ನಾರಾಯಣಗುರು ಸೇವಾ ಭಜನಾ ಮಂದಿರ (ರಿ)ಪೆರ್ಮಂಕಿ.
ಕೊರೊನಾ ಸಂಕಷ್ಟದ ದಿನಗಳಲ್ಲಿ ಪೆರ್ಮಂಕಿ ಉಳಾಯಿಬೆಟ್ಟು ಗ್ರಾಮದ ಜನರ ಸಂಕಷ್ಟಕ್ಕೆ ನೆರವಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂದಿರ ಪೆರ್ಮಂಕಿ
ಭಕ್ತರ ಪಾಲಿಗೆ ಕಷ್ಟದ ದಿನಗಳು ಬಂದಾಗ ದೇವರು ಹಾಗೂ ದೇವಸ್ಥಾನ,ಮಂದಿರಗಳು ಸ್ಪಂದಿಸಬೇಕಲ್ಲವೇ ? ಹಾಗೆಯೇ , ದೇವರ ಸೇವೆ ದೇವಸ್ಥಾನದ ಗರ್ಭಗುಡಿಗೆ ಸೀಮಿತವಾಗಬಾರದು, ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾದಾಗ ದೇವರ ಸಾನಿಧ್ಯ ವನ್ನು ಅನುಭವಿಸಲು ಸಾಧ್ಯ. ಹೀಗೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎನ್ನುವ ಸದುದ್ದೇಶದಿಂದಲೇ ಬ್ರಹ್ಮಶ್ರೀ ನಾರಯಣಗುರು ಮಂದಿರ ಪೆರ್ಮಂಕಿ
ಕಷ್ಟದ ಸಮಯದಲ್ಲಿ ಸತತ ಮೂರು ದಿನ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿ ವರ್ಗದ 352 ಕುಟುಂಬಗಳಿಗೆ ಅಕ್ಕಿ ದಿನಸಿ
ಸಾಮಾನು ವಿತರಣೆ ಮಾಡಲಾಯಿತು.
ಹನಿ ಹನಿ ಕೂಡಿ ಹಳ್ಳವೆಂಬಂತೆ ,ಮಂದಿರದ ಆಡಳಿತ ಮಂಡಳಿ ಹಾಗೂ ಊರ ದಾನಿಗಳ ಸಹಕಾರವನ್ನು ಪಡೆದು ಅಕ್ಕಿಯನ್ನು ವಿತರಿಸುವುದರ ಮೂಲಕ ಸಹಾಯ ಮಾಡಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಗಳ ತತ್ವದಂತೆ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎನ್ನುವ ತತ್ವವನ್ನು ನಮ್ಮ ಮಂದಿರವು ಪಾಲಿಸಿಕೊಂಡು ಬಂದಿರುತ್ತದೆ.ಅದರಂತೆ ಸಮಾಜದ ಎಲ್ಲ ಜಾತಿ ವರ್ಗದ ಜನರು ಬಂದು ಇದರ ಸದುಪಯೋಗ ಪಡೆದುಕೊಂಡಿರುವುದು ನಮಗೆ ತುಂಬಾ ಸಂತೋಷ ಹಾಗೂ ಹೆಮ್ಮೆಯ ವಿಷಯ.
ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಎಲ್ಲರಿಗೂ ಇರಲಿ ಎಂದು ಪ್ರಾರ್ಥಿಸುತ್ತೇವೆ.
ವಂದನೆಗಳೊಂದಿಗೆ
ಅಧ್ಯಕ್ಷರು ಸರ್ವಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಭಜನ ಮಂದಿರ (ರಿ) ಪೆರ್ಮಂಕಿ ಉಳಾಯಿಬೆಟ್ಟು.
No comments:
Post a Comment