✍️✍️✍️✍️✍️ *ನವೀಶ್ ಎರ್ಮಾಳ್*
*ಸೇವಾ ಬದುಕಿನ ಹಾದಿಯಲ್ಲಿ ಪದ್ಮರಾಜ್*
ಸಮಾಜದ ಹಿತಕ್ಕಾಗಿ,ಸಮಾಜದ ಜನರ ಒಳಿತಿಗಾಗಿ,ತನ್ನ ಅಮೂಲ್ಯ ಸಮಯವನ್ನು ಜನರ ಹಿತಕ್ಕಾಗಿ ಮೀಸಲಿಟ್ಟ ಯುವ ಸೇವಾ ಮಾಣಿಕ್ಯ: *ಪದ್ಮರಾಜ್*
ಸವಾಲನ್ನು ಸವಾಲಾಗಿ ಸ್ವೀಕರಿಸಿ ನಿಸ್ವಾರ್ಥ ಸೇವೆ ಯೇ ನನ್ನ ಸರ್ವಸ್ವ ದ ಮೂಲ ನೆಲೆಯಲ್ಲಿ ಪಣತೊಟ್ಟ *ನಿಸ್ವಾರ್ಥ ಸೇವಾ ಮನಸ್ಸಿನ ಧೀಮಂತ ಸೇವಾ ನಾಯಕ:ಪದ್ಮರಾಜ್*
ಈಗಿನ ಆಧುನಿಕ ಯುಗದಲ್ಲಿ ರಾಜಕೀಯ ನೇತಾರರನ್ನು ಫಿಲ್ಮ್ ಸ್ಟಾರ್ ಗಳನ್ನು ದೇವರೆಂದು ಪೂಜಿಸುವ ಸೋಷಿಯಲ್ ಮೀಡಿಯಾ ಒಂದು ಕಡೆಯಾದರೆ ನಿಮ್ಮಂತ ನಿಸ್ವಾರ್ಥ ಸೇವಾ ಕಣ್ಮಣಿ ಗಳನ್ನು ಪರಿಚಯಿಸಬೇಕಾದ ಕಾಲ ಮೂಡಿ ಬಂದಿದೆ.
ಯುವ ಪೀಳಿಗೆ ಬದಲಾವಣೆ ಯ ಪರ್ವಕ್ಕೆ ಮುನ್ನುಡಿ ಬರೆಯಬೇಕಾಗಿದೆ.ನಿಮ್ಮಂತ ನಿಜವಾದ ಸೆಲೆಬ್ರೆಟಿ ಗಳನ್ನು ಸಮಾಜಕ್ಕೆ ಗುರುತಿಸಲು ಉತ್ಸುಕರಾಗಬೇಕಾಗಿದೆ.
ಬಡವ,ಬಲ್ಲಿದರ ಸೇವಾದಾತ. ಬಡವರ ಉದ್ದಾರಕ್ಕಾಗಿ ನಾವು ಸಲ್ಲಿಸಬೇಕಾದ ಸಾಮಾಜಿಕ ಋಣವನ್ನರಿತ ಎಲ್ಲರ ಮೆಚ್ಚುಗೆಗೆ ಪಾತ್ರ ರಾದ ನಿಜವಾದ ಜನ ಸೇವಕರು.
ತನ್ನ ಸಮಯದಲ್ಲಿ ಬಹುಪಾಲು ಸಮಯವನ್ನು ಸಮಾಜದ ಮತ್ತು ಬಡವರ ಸೇವೆಗಾಗಿ ಮೀಸಲಿಡುವ ಪುಣ್ಯವಂತನಿಗೆ ದೇವರು ಸಕಲ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಇನ್ನಷ್ಟು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಗೈಯ್ಯುವ ಶಕ್ತಿಯನ್ನು ನೀಡಲಿ ಎಂದು ದೈವ ದೇವರಲ್ಲಿ ನಮ್ಮ ಪ್ರಾರ್ಥನೆ.
ಕೃಪೆ: ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ
No comments:
Post a Comment