21 Apr 2020

ಭಗವಾನ್ ಶ್ರೀ ನಾರಾಯಣ ಗುರುದೇವನ- ಪರಮ ಮಹಾಸಂದೇಶ

!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* !!

*ಓ ಮಿತ್ರ*
*ಭಗವಾನ್ ಶ್ರೀ ನಾರಾಯಣ ಗುರು #ಶೇಂದಿ ಇಳಿಸುವುದರ ಬಗ್ಗೆ ಪರಮ ಸತ್ಯದ ಬಹಳ ಸ್ಪಷ್ಟವಾಗಿರುವ ಸುಂದರವಾದ* *ಉದಾಹರಣೆಯನ್ನು ಒಬ್ಬ ಭಕ್ತಿನಿಗೆ ಹೇಳುತ್ತಾರೆ* *ಹೀಗೆ...ಮಹಾಗುರುಗಳು..*
*ಶೇಂದಿ ಇಳಿಸುವುದು ಒಂದು #ಮಹಾವ್ಯಾದಿ.ಒಂದು ಅಂಗದಲ್ಲಿ ಕುಷ್ಠರೋಗ ಹಿಡಿದರೆ ಆ ದೇಹವೆಲ್ಲ ಕೆಡುವುದು.ಅದರಂತೆ ಕೆಲವರು ಶೇಂದಿ ಇಳಿಸುವುದರಿಂದ #ಸಮಾಜವೇ ಕೆಡುತ್ತದೆ.ರೋಗದ ಅಂಗ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಂತೆ  ಹೆಂಡ ಇಳಿಸುವವರನ್ನು ಸಮಾಜದಿಂದ ಬೇರ್ಪಡಿಸಬೇಕು.ಅವರೊಂದಿಗೆ ಕೂಡಿಕೊಳ್ಳಬಾರದು.ಅವರು ಹೆಂಡದ ವೃತ್ತಿ ತ್ಯಜಿಸಿದರೆ ಅವರನ್ನು ಶುದ್ದೀಕರಿಸಿ ಸ್ವೀಕರಿಸಬಹುದು.*
*ಭಕ್ತ ಕೇಳುತ್ತಾನೆ ಗುರು ಸ್ಥಾಮಿಯಲ್ಲಿ ಜೀವನಕ್ಕೆ ಬೇರೆ ಉಪಾಯವಿಲ್ಲದೆ ಆ ಕೆಲಸಕ್ಕೆ ಹೋಗುವರು...! ಎಂದು..*
*ಅದಕ್ಕೆ ಗುರುದೇವರ ಉತ್ತರ: ಮೂರ್ತೆ ಕತ್ತಿಯಿಂದ ನಾಲ್ಕು ಕ್ಷೌರದ ಕತ್ತಿಗಳನ್ನು ತಯಾರಿಸಿಕೊಂಡು #ಉದ್ಯೋಗ ಮಾಡಿ ಜೀವಿಸುವುದು ಹೆಂಡ ಇಳಿಸುವ ಕೆಲಸಕ್ಕಿಂತ ಅಭಿಮಾನಕರವೂ ಲಾಭಕರವೂ ಆಗಿದೆ. (ಇದನ್ನು ಕೇಳಿ ಮೌನವಾಗಿದ್ದ ಭಕ್ತನೊಡನೆ ಪುನಃ )* *ಹೆಂಡ ಇಳಿಸುವ ಕೆಲಸ ಮಹಾ ಪಾತಕ.ಅದು ಮೀನು ಹಿಡಿಯುವ ಕೆಲಸಕ್ಕಿಂತ ಪಾಪಕರ. ಕಳ್ಳು ತೆಗೆಯುವ ಬದಲು ಕಾಯಿ ತೆಗೆಯುವುದು ಮೇಲು. ಇದರಲ್ಲಿ ಕಷ್ಟ ಕಡಿಮೆ. ಆದರೆ ಕ್ರಮೇಣ ಗೊನೆಯನ್ನು ಬಿಟ್ಟು ಮೇಲೇರಿ* *ಬಿಟ್ಟಾನು,ಜೋಕೆ...!! ( ಗೊನೆ ಬಿಟ್ಟು ಕೊಂಬು ಕತ್ತರಿಸಿ ‌ಬಿಟ್ಟಾನು)" ಆಗ ಎಲ್ಲರೂ ನಕ್ಕರು.*
*ಆಧಾರ: ಬ್ರಹ್ಮ ಶ್ರೀ ನಾರಾಯಣ ಗುರು ಜೀವನ ಚರಿತ್ರೆ 1970 ರಲ್ಲಿ ಮುದ್ರಣಗೊಂಡ ಪುಸ್ತಕದಿಂದ ಸಂಗ್ರಹ.*
*ಪುಟ ಸಂಖ್ಯೆ123 ಮತ್ತು 124.*
*ಪ್ರಚಾರ ಕೃಪೆ : ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.*

https://m.facebook.com/story.php?story_fbid=237832700790935&id=100036926209472?sfnsn=wiwspwa&extid=V9UmvyycxZEsIIVb

No comments:

Post a Comment