22 Apr 2020

ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾ ದಳ- ನಿರಂತರ ಶ್ರೀ ಕ್ಷೇತ್ರದ ಸೇವೆಯಲ್ಲಿ...

*ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾ ದಳ ನಿರಂತರ ಶ್ರೀ ಕ್ಷೇತ್ರದ ಸೇವೆಯ ಜೊತೆ*
*ಲಾಕ್ ಡೌನ್ ನಿಂದ ಸಂಕಷ್ಟ ಗೊಳಗಾದ  ಜನರಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ  ಕೋವಿಡ್-19 ಅಕ್ಕಿಯನ್ನು ವಿತರಿಸುವಲ್ಲಿ ಸಂಪೂರ್ಣ ಸಹಕಾರ ನೀಡುತ್ತಿರುವ ಗೋಕರ್ಣನಾಥ ಸೇವಾ ದಳ*

ಬ್ರಹ್ಮ ಶ್ರೀ ನಾರಾಯಣಗುರುಗಳಿಂದ ಸ್ಥಾಪಿತವಾಗಿರುವ  ಜಗತ್ಪ್ರಸಿದ್ಧ  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಭಕ್ತರ ಸಂಕಷ್ಟ ವನ್ನು ದೂರ ಮಾಡುವ ಭಕ್ತಿಯ ಕೇಂದ್ರ ಹಾಗೂ  ಮಾನವರೆಲ್ಲರೂ ಸಮಾನರು ಎಂಬ ತತ್ವದಲ್ಲಿ ಪ್ರತಿಯೊಬ್ಬರಲ್ಲಿ  ಇರುವ ದೈವಿಕತೆ ಯನ್ನು ಬೆಳಗಿಸುವ ಸನಾತನ ಮಾನವೀಯ ಧರ್ಮದ ಅರಿವನ್ನು ಮೂಡಿಸುವ ಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದ  ಇರುವ ಮಾನವತೆಯ ಕೇಂದ್ರ ಕೂಡ ಆಗಿದೆ.
    ಇಂತಹ  ಶ್ರೀ ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ಷೇತ್ರಾಡಳಿತ ಸಮಿತಿಯ ಜೊತೆ ಸದಾ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವುದು ಗೋಕರ್ಣನಾಥ   ಸೇವಾ ದಳ. ತನ್ನ ಸೇವೆಯನ್ನು ಭಕ್ತಿಯಿಂದ ಮಾಡುವ ಗೋಕರ್ಣನಾಥ ಸೇವಾದಳ ಲಾಕ್ ಡೌನ್ ನ ಸಂದರ್ಭದಲ್ಲಿ  ಕೂಡ ಮಾನವೀಯ ಸೇವೆಯನ್ನು ಮಾಡುತ್ತಿದೆ ಇದಕ್ಕೆ ಸೇವಾದಳದ ಸರ್ವ ಸದಸ್ಯರು ಅಭಿನಂದನಾರ್ಹರು.

No comments:

Post a Comment