ಮಂಗಳೂರು :*ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ*
*ಗಾಯದ ಮೇಲೆ ಬರೆ ಎಳೆದ ವಿಧಿ*
*ಮಗ ಅಂಗವಿಕಲ, ಮಗಳು ಬುದ್ದಿಮಾಂದ್ಯೆ, ತಂದೆಗೆ ಪಾರ್ಶ್ವವಾಯು*
ಅಂಗವೈಕಲ್ಯದಿಂದ ಬಳಲುತ್ತಿರುವ ಮಗ, ಬುದ್ಧಿಮಾಂದ್ಯೆಯಾದ ಮಗಳ ಆರೈಕೆ ಮಾಡುತ್ತಾ ಮನೆಗೆ ಆಧಾರವಾಗಿದ್ದ ಮನೆಯೊಡೆಯ ಪಾರ್ಶ್ವವಾಯುಗೆ ತುತ್ತಾಗಿ ಆ ಕುಟುಂಬ ದಿಕ್ಕು ಕಾಣದೇ ಕುಳಿತ ಕರುಣಾಜನಕ ಕತೆ ಇದು.
ಪಾಲಕರಿಗೆ 50 ವರ್ಷವಾಗುವ ಹೊತ್ತಿಗೆ ಮಕ್ಕಳು ಉದ್ಯೋಗ ಮಾಡುವ ಹಂತಕ್ಕೆ ಬಂದಿರುತ್ತಾರೆ. ನಮ್ಮ ಬೇಕು ಬೇಡಗಳನ್ನು ಪೂರೈಸುತ್ತಾ ಆಸರೆಯಾಗಬೇಕು ಎಂಬುದು ಎಲ್ಲಾ ಪಾಲಕರ ಆಸೆ. ಆದರೆ ಮುಡಿಗೇರೆ.ಯ ಬಾಳೂರು ಗ್ರಾಮದ ಚನ್ನಡ್ಲಿನ *ಸುಂದರ್ ಪೂಜಾರಿ* ಹಾಗೂ *ಅರುಣಾ ಎಸ್. ಪೂಜಾರಿ* ದಂಪತಿಗಳಿಗೆ ಈ ಭಾಗ್ಯವಿಲ್ಲ. ಏಕೆಂದರೆ ಮಗ ರಾಕೇಶನಿಗೆ ಈಗ 30 ವರ್ಷ. ಎರಡೂ ಕೈಕಾಲುಗಳು ಊನವಾಗಿದೆ. ನೋಡಲು ಪುಟ್ಟ ಹುಡುಗನಂತೆ ಕಾಣುತ್ತಾನೆ. ಕೈಕಾಲುಗಳಲ್ಲಿ ಶಕ್ತಿ ಇಲ್ಲ. ಎತ್ತಲ್ಲೊ ನೋಡಿ ಸುಮ್ಮನೆ ನಗುತ್ತಾನೆ. ವಿಚಿತ್ರ ಚಿತ್ಕಾರ ಹೊರಡಿಸುತ್ತಾನೆ. ಈತನ ತಂಗಿ ರೇಖಾಗೆ 28 ವರ್ಷ. ಈಕೆಯೂ ಮಾತನಾಡಲು ಕಷ್ಟ ಪಡುತ್ತಾಳೆ. ದೈಹಿಕ ನ್ಯೂನತೆ ಜತೆ ಬುದ್ದಿಮಾಂದ್ಯಳು. ಮಕ್ಕಳಿಬ್ಬರಿಗೂ ಮಂಗಳೂರು, ಬೆಂಗಳೂರು, ಕೇರಳದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಣ ಖರ್ಚಾಯಿತೆ ಹೊರತು ಗುಣವಾಗಲಿಲ್ಲ.
ಈಗ ಗಾಯದ ಮೇಲೆ ಬರೆ ಎಳೆದಂತೆ ಈ ಇಬ್ಬರು ಮಕ್ಕಳು ಹಾಗೂ ಮನೆಗೆ ಆಧಾರವಾಗಿದ್ದ ಮನೆ ಯಜಮಾನ *ಸುಂದರ್ ಪೂಜಾರಿ* 2 ದಿನದ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿದ್ದು ದೇಹದ ಒಂದು ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ವೃತ್ತಿಯಲ್ಲಿ ಚಾಲಕರಾಗಿದ್ದ *ಸುಂದರ್ ಪೂಜಾರಿ* ಅವರ ದುಡಿಮೆಯಿಂದಲೆ ಮನೆ ಖರ್ಚು ನಡೆಯುತ್ತಿತ್ತು. ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಸರಿಯಾಗಿ ಕೆಲಸವಿಲ್ಲದೇ ಹೊತ್ತಿನ ಊಟಕ್ಕೆ ತೊಂದರೆಯಾಗಿದ್ದ ಸಂದರ್ಭದಲ್ಲಿ ಸುಂದರ್ ಅವರು ಪಾರ್ಶ್ವವಾಯು ಪೀಡಿತರಾಗಿರುವುದು ಕುಟುಂಬದ ಸದಸ್ಯರಿಗೆ ದಿಕ್ಕೆ ತೋಚದಂತಾಗಿದೆ.
ಬುದ್ದಿಮಾಂಧ್ಯ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುವುದೋ ಅಥವಾ ಪಾರ್ಶ್ವವಾಯು ಪೀಡಿತವಾಗಿ ಹಾಸಿಗೆ ಹಿಡಿದಿರುವ ಗಂಡನನ್ನು ನೋಡಿಕೊಳ್ಳುವುದೋ ತಿಳಿಯುತ್ತಿಲ್ಲ. ನಾಳೆ ದಿನ ನನಗೆನಾದರೂ ಆದರೆ ಇವರನ್ನು ನೋಡಿಕೊಳ್ಳುವುದು ಯಾರು ಎಂದು ಕಣ್ಣೀರಿಡುತ್ತಾರೆ ಸುಂದರ್ ಅವರ ಪತ್ನಿ ಅರುಣಾ.
ಸುಂದರ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದ್ದು ಈ ಕತೆ ಕೇಳಿದ ಮೇಲ ಯಾರಿಗಾದರೂ ಧನಸಹಾಯ ಮಾಡಬೇಕು. ನಾವೂ ಅವರ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ಆಧಾರವಾಗಿ ನಿಲ್ಲಬೇಕು ಎನಿಸಿದರೆ ಸುಂದರ್ ಅವರ ಪತ್ನಿ ಅರುಣ ಅವರ *ಕೊಟ್ಟಿಗೆಹಾರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಖಾತೆ ಸಂಖ್ಯೆ *12269100004988 ಐಎಪ್ಎಸ್ ಸಿ ಕೋಡ್* *ಪಿಕೆಜಿಬಿ0010506* ಗೆ ಧನಸಹಾಯ ಮಾಡಬಹುದು.
ಮಾಹಿತಿಗೆ ಕರೆ ಮಾಡಿ
9481029818
ಈ. ಮನವಿಗೆ ಸ್ಪಂದಿಸ ಬೇಕಾಗಿ
ವಿನಂತಿಸುವ
*ಸೇವಾಲಯ ಸೇವಾ ಸಮಿತಿ ಟ್ರಸ್ಟ್ (ರಿ)*
9110411084
No comments:
Post a Comment