15 Apr 2020

ಸಹಾಯಕ್ಕೆ ಬಂದ ಶ್ರೀ ನಾರಾಯಣ ಗುರುದೇವನ ಪರಮ ಭಕ್ತರು ಇವರು

ಮಂಗಳೂರು:ಹಸಿದವನಿಗೆ ಅನ್ನ ನೀಡುವಷ್ಟು ಒಳ್ಳೆಯ ಕಾರ್ಯ ಪ್ರಪಂಚದಲ್ಲಿ ಮತ್ತೊಂದು ಇಲ್ಲ ಎನ್ನುವ ಮಾತು ಇದೆ. ಈಗ ಮಹಾಮಾರಿ ಕೊರೋನ ಜಗತ್ತಿನ ಎಲ್ಲೆಡೆ ಅವರಿಸಿದೆ. ನಮ್ಮ ಭಾರತದಲ್ಲಿಯು ಕೆಲವೆಡೆ ಜನ ಕೆಲಸ ಕೈಂಕರ್ಯ ಇಲ್ಲದೆ  ಹಸಿವಿನಿಂದ ತತ್ತರಿಸಿ ಹೋಗಿದ್ದಾರೆ.ಮಹಾರಾಷ್ಟ್ರದಲ್ಲಿ ಕೊರೋನ ತಾಂಡವ ಆಡುತ್ತಿದ್ದು ನಮ್ಮ ತುಳುನಾಡಿನ ಅದೇಷ್ಟೋ ಯುವಕರು ಹೊಟ್ಟೆ ಪಾಡಿಗೆ ಅಲ್ಲಿ  ದುಡಿಯುತ್ತಿದ್ದಾರೆ.ಅಂತಹ ಯುವಕರು ತಮ್ಮ ಊರಿಗೆ ಬರಲಾಗದೆ ಅಲ್ಲಿಯೇ ತಮ್ಮ ಮನೆಯ ನೆನಪಿನಲ್ಲಿ ಇದ್ದಾರೆ..ಅಂತವರಲ್ಲಿ ನಮ್ಮ ಬಿಲ್ಲವ ಸಮುದಾಯದ ಉಡುಪಿ ಮೂಲದವರಾದ *ರಾಜು ಪೂಜಾರಿಯವರು* ಕ್ಯಾಂಟಿನ್ ಅಲ್ಲಿ ದುಡಿಯುತ್ತಿದ್ದ ಇವರಿಗೆ ಕ್ಯಾಂಟಿನ್ ಮಾಲೀಕರು ವಿಷಯ ತಿಳಿಸಿದೆ ಅವರು ತಮ್ಮ ಊರಿಗೆ ಸೇರಿರುತ್ತಾರೆ. ಅಂತಹ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಾದಾಗ ಬೇರೆ ದಾರಿ ತೋಚದೆ ಕೊನೆಗೆ ಮೊಬೈಲ್ ನಲ್ಲಿ ಒಂದು ಮೇಸೆಜ್ ಪಾರ್ವಡ್ ಮಾಡಿದಾಗ ಇದನ್ನು ನೋಡಿ *ಸುಕೇಶ್ ಜೀ ಅಂಚನ್* ಅವರು *ಮಯೂರ್ ಬಾರ್ ಅಂಡ್ ರೆಸ್ಟರೊಂಟ್ ಮಾಲಿಕರಾದ *ದಯಾನಂದ ಆರ್* ಅವರಿಗೆ ಕಾಲ್ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಅವರು *ವಿಠಲ್ ಅಮೀನ್* ಅವರ ಮೂಲಕ ಅಗತ್ಯ ಸಾಮಗ್ರಿಗಳನ್ನು ತಲುಪಿಸಿ ಅವರ ಹಸಿವನ್ನು ನೀಗಿಸವ ದೊಡ್ಡ ಕಾರ್ಯ ಮಾಡುವಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಅಂತಹ ದೊಡ್ಡ ಮನಸ್ಸಿನ ನಿಮಗೆ ನಾವು ನಂಬಿರುವ ತುಳುನಾಡಿನ ವೀರ ಪುರುಷರು  ಕೋಟಿ ಚೆನ್ನಯರು ,ಮಾತೆ  ದೇವಿ ಬೈದೇತಿ ಇನಷ್ಟು ಒಳ್ಳೆಯ ಸಾಮಾಜಿಕ ಕೆಲಸವನ್ನು ಮಾಡುವ ಶಕ್ತಿ ಆಯುರಾರೋಗ್ಯ  ನೀಡಲಿ  ಎಂದು ಆ ದೇವರಲ್ಲಿ  ಬೇಡಿಕೊಳ್ಳುತ್ತ ತುಂಬು ಹೃದಯದಿ ಧನ್ಯವಾದಗಳನ್ನು ಅರ್ಪಿಸುವ *ಸುಕೇಶ್ ಜೀ ಅಂಚನ್*...🙏🙏🙏
ನಿಮ್ಮ ಈ ಮಹಾಸೇವೆಗೆ ಭಗವಾನ್ ಶ್ರೀ ನಾರಾಯಣ ಗುರುದೇವನ ಪೂರ್ಣ ಕೃಪೆ ಇರುವುದು ಶುಭವಾಗಲಿ ನಿಮಗೆ.
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ

No comments:

Post a Comment