14 Feb 2020

ವಿಶ್ವ ಬಿಲ್ಲವ ಮಹಿಳಾ ಸಂಘ ಉದ್ಘಾಟನೆ - ಮಾಜಿ ಕೇಂದ್ರ ಹಣಕಾಸು ಸಚಿವರಾದ ಶ್ರೀಯುತ ಜನಾರ್ಧನ ಪೂಜಾರಿಯವರಿಂದ

*ಆತ್ಮೀಯರೇ*, 

*ಸಮಾನ ಮನಸ್ಕರ ಬಳಗವು ಒಂದು ಸೇರಿ ನಮ್ಮ ಸಮುದಾಯದ ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಸಮಸ್ತ  ಬಿಲ್ಲವರನ್ನು ಒಂದುಗೂಡಿಸಿ  ಶ್ರೀ ಗೋಕರ್ಣನಾಥ  ಕ್ಷೇತ್ರ ಕುದ್ರೋಳಿಯಲ್ಲಿ ಬಲವಾದ ಮಹಿಳಾ ಸಂಘವನ್ನು  ರಚಿಸುವ ಸಲುವಾಗಿ  ಸಮಾಲೋಚನಾ ಸಭೆಯನ್ನು ಹಮ್ಮಿಕೊಂಡು. ವಿಶ್ವ ಬಿಲ್ಲವ ಮಹಿಳಾ ಸಂಘವನ್ನು ಸ್ಥಾಪಿಸುವುದೆಂದು ನಿರ್ಣಯಿಸಿ ದಿನಾಂಕ 16-02-2020 ರ ರವಿವಾರದಂದು ಬೆಳಿಗ್ಗೆ 9:30 ಕ್ಕೆ ಕುದ್ರೋಳಿ  ವಿಶ್ವನಾಥ ಕಲ್ಯಾಣ ಮಂಟಪದಲ್ಲಿ (ಗ್ಲಾಸ್ ಹೌಸ್) ಈ‌ ಮಹಿಳಾ ಸಂಘದ ಉದ್ಘಾಟನಾ ಕಾರ್ಯಕ್ರವವನ್ನು ಆಯೋಜಿಸಿರುತ್ತೆವೆ. ಮಾನ್ಯ ಶ್ರೀ ಜನಾರ್ದನ ಪೂಜಾರಿ ದಂಪತಿಗಳು ಈ ಸಂಘವನ್ನು ಉದ್ಘಾಟಿಸಲಿದ್ದಾರೆ. ಬಿಲ್ಲವ ಸಮಾಜದ ಚಿಂತನಶೀಲ‌ ಮಹಿಳೆಯರು ಈ  ಸಭೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸರಿಯಾದ ಸಮಯದಲ್ಲಿ  ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ವಿಗೆ  ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೆವೆ.*

*ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್* 
ಹಾಗೂ 
*ಸಮಾನ ಮನಸ್ಕರ ಬಳಗ* ಮಂಗಳೂರು.

No comments:

Post a Comment