4 Dec 2019

ಕಾಂತಬಾರೆ_ಬೂದಬಾರೆ ಅವಳಿವೀರ ಪುರುಷರು ಕಾರಣಿಕ ಶಕ್ತಿಗಳು....!!!

ಕಾಂತಬಾರೆ_ಬೂದಬಾರೆ
ತುಳುನಾಡು ವಿಷೇಶವಾದ ಸಂಸ್ಕ್ರತಿ, ಸಂಪ್ರದಾಯ, ದೈವದತ್ತವಾದ ಸೌಂದರ್ಯ ಈ ಮಣ್ಣಿನ ಕಲೆಯಾಗಿದೆ.
ಇಂತಹ ಮಣ್ಣಲ್ಲಿ ಅಧರ್ಮ ಭುಗಿಲೆದ್ದಾಗ‌ ಮಾನವನ ರೂಪದಲ್ಲಿ ದೈವ ಸಂಭೂತರು ಜನಿಸಿ‌ ಈ ಮಣ್ಣಿನ ಪಾವಿತ್ರ್ಯತೆಯನ್ನು ಮೆರೆದು ಆರಾಧನಾ ಲೋಕದಲ್ಲಿ ಸ್ಥಾನವನ್ನು ಪಡೆದು, ನಂಬಿ ಬಂದಂತಹ ಭಕ್ತರಿಗೆ ಇಂದಿಗೂ ಕಾಯುವ ಶಕ್ತಿಗಳಾಗಿದ್ದಾರೆ. ಇಂತಹ ಶಕ್ತಿಗಳಲ್ಲಿ ಕೋಟಿ ಚೆನ್ನಯರು , ಕಾಂತಬಾರೆ ಬೂದ ಬಾರೆ ಎನ್ನುವ ಅವಳಿ ಸಹೋದರರ ಚಾರಿತ್ರಿಕ ಹಿನ್ನಲೆ ವಿಶೇಷವಾದದ್ದು.
ಕಾಂತಬಾರೆ ಬೂದಬಾರೆ ತಾಯಿ " ಆಚು ಬೈದೆತಿ ‍" ಎನ್ನುವ ತಾಯಿಯ ಪುಣ್ಯಗರ್ಭದಲ್ಲಿ ಜನಿಸಿ, ಮುಲ್ಕಿ ಸೀಮೆಯ ಸುತ್ತ ಮುತ್ತಲಿನಲ್ಲಿ ಅಂದು ಇದ್ದಂತಹ ನೀರಿನ ಸಮಸ್ಯೆ, ಕೃಷಿಯಲ್ಲಿ ಎದುರಿಸುತ್ತಿದ್ದಂತಹ ಹಲವಾರು ಸಮಸ್ಯೆಗಳಿಗೆ ತಾವು ಸುತ್ತಾಡಿ ಅಂತಹ ಪ್ರದೇಶಗಳನ್ನು ಸರಿಪಡಿಸುತ್ತಾ. ಹಗಲು ರಾತ್ರಿ ಎನ್ನದೆ ಜನರು ಎದುರುಸುತ್ತಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮಹಾನ್ ಪುರುಷರಿವರು, ಸತ್ಯ ನ್ಯಾಯ ಧರ್ಮವನ್ನು ಎತ್ತಿ ಹಿಡಿದ ಮಹಾತ್ಮರಿವರು, ಬಪ್ಪನಾಡಿನ ತಾಯಿ , ಮುಂಡ್ಕೂರಿನ ತಾಯಿಯ ದರುಶನವನ್ನು ಪಡೆದು ಮುಲ್ಕಿ ಸೀಮೆಗೆ ಒಳಪಟ್ಟಂತಹ ಗರಡಿಗಳಲ್ಲಿ ಆರದನೆಯನ್ನು ಪಡೆಯುತ್ತಾ ಬಂದಂತಹ ಭಕ್ತರನ್ನು ಪೊರೆಯುವ ವೀರ ಕಾರ್ಣಿಕ ಪುರುಷರಿವರು.
ತುಳುನಾಡಿನಾದ್ಯಂತ ಕೋಟಿ ಚೆನ್ನಯರು, ಕಾಂತಬಾರೆ ಬೂದಬಾರೆ, ಬಬ್ಬು ಸ್ವಾಮಿ, ಬ್ರಹ್ಮ ಮೊಗೆರರು ಇಂತಹ ಹಲವು ವೀರರು ನೈಜ ಜೀವನದಲ್ಲಿ ನಡೆದ ದಾರಿ ಇಂದಿನ ಸಮಾಜವು ತಿಳಿಯಬೇಕಾಗಿದೆ ಇವರ ಚರಿತ್ರೆ ಇವರು ಪಟ್ಟ ಶ್ರಮದ ಬದುಕು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕಾಗಿದೆ.
ಬಿಲ್ಲವ ಸಮಾಜದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಮಗೆ ಸಮಾನುಭಾವತೆಯ ಜ್ಞಾನವನ್ನು ಮನವರೆಸಿದ ಬ್ರಹ್ಮಶ್ರೀ ನಾರಾಯಣಗುರುವನ್ನು ಹೇಗೆ ನೆನಪಿಸುತ್ತೇವೆಯೊ ಅಂತೆಯೆ ಈ ಮಣ್ಣಲ್ಲಿ ಮೇಲು ಕೀಲೆನ್ನುವ ಧರ್ಪವನ್ನು ಮುರಿದ ವೀರರು ಕೋಟಿಚೆನ್ನಯರು
ದುಡಿಮೆ ಶ್ರಮವನ್ನು ಮೆರೆಯುವ ಕಾಂತಬಾರೆ ಬೂದಬಾರೆಯರನ್ನು ನಮ್ಮ ಸಮಾಜ ಮರೆಯಲೇ ಬಾರದು
ಇಂದು ಒಬ್ಬ ಬಿಲ್ಲವ ತನ್ನ ಜಾತಿಯನ್ನು ಗೌರವಿಸಬೇಕಾದರೆ ಅಂತಹ ಗೌರವ ತಂದು ಕೊಟ್ಟವರು ಈ ವೀರರು, ನಮ್ಮ ಸಂಸ್ಕ್ರತಿ ಚಾರಿತ್ರಿಕ ಇತಿಹಾಸ ಹೊರತು
ಯಾವ ರಾಜಕೀಯನು ಅಲ್ಲಾ...
 ಮುಂದಿನ ಯುವ ಪೀಳಿಗೆಯ ಏಳಿಗೆ ನಮ್ಮ ಗುರಿಯಾಗಲಿ.
ಬಡತನ ನಿರ್ಮೂಲನೆ, ವಿಧ್ಯೆಗೆ ಪ್ರೋತ್ಸಾಹ, ನಿರುದ್ಯೋಗಕ್ಕೆ ಪರಿಹಾರ, ಮಾನವೀಯತೆಯ ಗುಣ ನಮ್ಮ ಮೂಲ ಉದ್ದೇಶವಾಗಲಿ.

No comments:

Post a Comment