ಮಂಗಳೂರು ಲಲಿತಕಲಾಮೃತ ವಿಶೇಷ ಸುದ್ದಿ:
ಅನ್ನ,ಆಹಾರ,ಆಶ್ರಯ,ಅಕ್ಷರ ಒಟ್ಟಿಗೆ ಸೇವಾ ರೂಪದಲ್ಲಿ ಸಿಗುವ ಜಗತ್ತಿನ ಏಕೈಕ ಜಾಗ ಸಿದ್ದಗಂಗಾ ಮಠ,, ಶ್ರೀ ಶಿವಕುಮಾರ ಸ್ವಾಮಿಗಳು ಇವೆಲ್ಲವನ್ನೂ ಬಿಕ್ಷೆ ಬೇಡಿ ಶುರು ಮಾಡಿದ್ದರಂತೆ,,ಪ್ರಪಂಚದ ಯಾವ ಶ್ರೀಮಂತ ರಾಷ್ಟ್ರವು ಮಾಡಲಿಲ್ಲ,ಮಾಡಲು ಆಗುವುದಿಲ್ಲ,,ಅಲ್ಲಿನ ವಿಸ್ಮಯ ಅಂದ್ರೆ ಜಾತಿ ಧರ್ಮ ಬೇಧವಿಲ್ಲದೆ ಮಕ್ಕಳು ಒಟ್ಟಾಗಿ ಸಮಾನ,,,ಅದಕ್ಕೆ ಮಕ್ಕಳನ್ನು ದೇವರೆಂದವರು..ಉತ್ತರ ಕರ್ನಾಟಕದ ಅತೀ ಹೆಚ್ಚು ಮಕ್ಕಳು ಅಲ್ಲಿದ್ದಾರೆ ಅದರಲ್ಲಿ ಮುಸಲ್ಮಾನ ಧರ್ಮದವರು ಇದಾರೆ,,,ಹುಡುಗನೊಬ್ಬ ಅವರ ಪಾಲಕರಿಗೆ ಫೋನ್ ಕರೆ ಮಾಡಲು ನನ್ ಮೊಬೈಲ್ ಕೇಳಿದ,ಸಂಪೂರ್ಣ ಕನ್ನಡದಲ್ಲಿ ಮಾತನಾಡಿದ,ನಂತರ ಅವನ ಮಾತುಗಳಲ್ಲಿ ಭಾವನೆ ತುಂಬಿತ್ತು,,ಅವರ ತಂದೆ ತಾಯಿ ಇಬ್ಬರೂ ಕೂಲಿ ಮಾಡಿ ಬದುಕುತ್ತಿದ್ದಾರೆ ಅಂತೆ ಅವನಿಗೊಬ್ಬ ತಮ್ಮನೂ ಇದ್ದಾನಂತೆ..ಆ ಹುಡುಗನ ಟ್ರಂಕ್ ನಲ್ಲಿ ದೇವರೊಬ್ಬ ನಾಮ ಹಲವು,,ಶಿಕ್ಷಣವೇ ಶಕ್ತಿ,,ಶಿಕ್ಷಣವೇ ಜೀವನ ಅಂತ ಬರ್ಕೊಂಡಿದ್ದ,,ನಾನು ಮರು ಪ್ರಶ್ನೆ ಮಾಡದೇ ಸುಮ್ಮನಾದೆ...ಸಿದ್ದಗಂಗಾ ಜ್ಞಾನ ಗಂಗಾವಾಗಿದೆ..ದಯವಿಟ್ಟು ನಿಮ್ ಗಮನಕ್ಕೆ ಬರುವ ಯಾವುದೇ ಧರ್ಮದ ಶಿಕ್ಷಣ ವಂಚಿತ ಮಕ್ಕಳಿದ್ದರೆ ಮಠಕ್ಕೆ ತಂದು ಬಿಡಿ,,ಮುಂದೊಂದು ದಿನ ಆ ಮಕ್ಕಳು ಜಗತ್ತಿಗೆ ಶಕ್ತಿಯಾಗಿ,ಸ್ಫೂರ್ತಿಯಾಗಿ ಬದುಕುತ್ತಾರೆ,,,ಅವರ ಜೀವನದುದ್ದಕ್ಕೂ ನಿಮ್ಮನ್ನು ನೆನೆದು ಬದುಕುತ್ತಾರೆ...ಮಕ್ಕಳನ್ನು ಅಕ್ಷರಸ್ತರನ್ನಾಗಿ ಮಾಡಿದರೆ ಸಾಕು,ಅವರಿಗಾಗಿ ಆಸ್ತಿ ಮಾಡಬೇಡಿ...ಆ ಮಗು ಮಠದ ಎಲ್ಲ ಮಕ್ಕಳೊಂದಿಗೆ ಸಂಜೆ ಪ್ರಾರ್ಥನೆಗೆ ಹೋಗುವಾಗ ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಹೋರೋಟೋದ ಆಗ ನನ್ನ ನೆನಪಿಗೆ ಬಂದಿದ್ದು ಮಾತ್ರ ಶಿಶುನಾಳ ಶರೀಫಜ್ಜ...ಮಠದ ಸಂಸ್ಕೃತಿ ಅವನು ಅಲ ಅಳವಡಿಸಿಕೊಂಡಿರುವ ರೀತಿ ಅವನನ್ನು ನಾನು ಅಪ್ಪಿಕೊಳ್ಳುವಂತೆ ಮಾಡಿತು, ಅಪ್ಪಿಕೊಂಡಾಗ,ನನ್ನ ಕಣ್ಣಲ್ಲಿ ನೀರು ಜಿನುಗಲು ಶುರು ಆಯ್ತು..ಅನ್ನಕ್ಕೆ,ಶಿಕ್ಷಣಕ್ಕೆ,ನೀರಿಗೆ,ಗಾಳಿಗೆ ಇಲ್ಲದ ಜಾತಿ ಧರ್ಮ ಇವತ್ತಿದ್ದು ನಾಳೆ ಹೋಗುವ ನಮಗ್ಯಾಕೆ...
ಸಂಜೆ ಪ್ರಾರ್ಥನೆಯಲ್ಲಿ ಮಕ್ಕಳನ್ನು ನೋಡಿದಾಗ ಆಕಾಶದಲ್ಲಿ ಮಿಂಚುವ ದೃಶ್ಯ ನಕ್ಷತ್ರಗಳಂತೆ ಕಂಡವು..
ಅಲ್ಲಿನ ಮಕ್ಕಳಲ್ಲಿ ಸುಸಂಸ್ಕೃತ ನೋಡಿ ಕಲಿಯುವುದು ಜಾಸ್ತಿ ಇದೆ... ಚಿಕ್ಕವಯಸ್ಸಿಲ್ಲಿಯೇ ಅವರ ಕನಸುಗಳು ದೊಡ್ಡ ದೊಡ್ಡದಿವೆ..ಅದರ ಜೊತೆ ಅವರ ಕುಟುಂಬದ ಕಷ್ಟ ಅವರಿಗೆ ಜವಾಬ್ದಾರಿಯಾಗಿ ಕಾಣುತ್ತಿದೆ...ಮಕ್ಕಳಿಗೆ ಹಣ ಕೊಡಲು ಹೋದಾಗ , ನಮಗೆ ಇಲ್ಲಿ ಎಲ್ಲವೂ ಸಿಗುತ್ತದೆ ಹಣದ ಅವಶ್ಯಕತೆ ಇಲ್ಲ,,ಮಠದ ನಿಧಿಗೆ ಹಾಕಿ ಎಂದಾಗ ದುಃಖ ತುಂಬಿ ಬಂದುಬಿಟ್ಟಿತು..ಮರುಮಾತನಾಡದೆ ಮೌನಕ್ಕೆ ಶರಣಾಗಿ ಕೈ ಬೀಸಿ ಬಂದೆ...
ಶ್ರೀ ಶಿವಕುಮಾರ ಸ್ವಾಮಿಗಳ ನಾಡಲ್ಲಿ ನಾವು ಬದುಕುತ್ತಿರುವುದು ನಮಗೆ ಶ್ರೇಷ್ಠ...ಅವರು ನಿಜವಾಗ್ಲೂ ದೇವರೇ,,,
#ಸಿದ್ದಗಂಗಾ
#ಜ್ಞಾನಗಂಗಾ
#ಅಕ್ಷರ_ಗಂಗಾ
#ಆಶ್ರಯ_ಗಂಗಾ
#ಆಹಾರ_ಗಂಗಾ...
ಒಮ್ಮೆ ಬೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಿರಿ..
No comments:
Post a Comment