*ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ.), ತೊಕ್ಕೊಟು, ಮಂಗಳೂರು, ದ.ಕ. ಇದರ 2022 - 23 ನೇ ಸಾಲಿನ ಅಧ್ಯಕ್ಷರಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಶ್ರೀ ಕೆ.ಟಿ.ಸುವರ್ಣ ಪುನಾರಾಯ್ಕೆ.*🌹
ದಿನಾಂಕ 01.05.2022 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಗೌರವ ಸಲಹೆಗಾರರಾದ ಚಂದ್ರಶೇಖರ ಉಚ್ಚಿಲ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಘೋಷಣೆ ಮಾಡಿದರು.
ಕಾರ್ಯಧ್ಯಕ್ಷರಾಗಿ ಮಂಗಳೂರು ವಿ.ವಿ. ಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸದಸ್ಯರಾದ *ಸತೀಶ್ ಕರ್ಕೇರ,* ಪ್ರಧಾನ ಕಾರ್ಯದರ್ಶಿಗಳಾಗಿ *ಜೀವನ್ ಕುಮಾರ್ ತೊಕ್ಕೊಟು,* ಕೋಶಾಧಿಕಾರಿ ಗಳಾಗಿ *ಲಕ್ಷ್ಮಣ್ ಪೂಜಾರಿ,* ಉಪಾಧ್ಯಕ್ಷರಾಗಿ *ಹರೀಶ್ ಮುಂಡೋಳಿ,* ಪ್ರಧಾನ ದತ್ತು ಸಂಚಾಲಕರಾಗಿ *ಆನಂದ ಕೆ.ಅಸೈಗೋಳಿ*, ಸಹ ದತ್ತು ಸಂಚಾಲಕರಾಗಿ *ರಾಜೀವ್ ಮಾಸ್ಟರ್,* ಕ್ರೀಡಾ ಕಾರ್ಯದರ್ಶಿಯಾಗಿ *ರಾಜೇಶ್ ಕೆರೆಬೈಲ್,* ಜತೆ ಕ್ರೀಡಾ ಕಾರ್ಯದರ್ಶಿ ಯಾಗಿ *ಭಗವಾನ್ ದಾಸ್*, ಪ್ರಧಾನ ಸಂಘಟನಾ ಕಾರ್ಯದರ್ಶಿ ಯಾಗಿ *ಗೋಪಿನಾಥ್ ಬಗಂಬಿಲ,* ಸಂಘಟನಾ ಕಾರ್ಯದರ್ಶಿ ಯಾಗಿ *ಜಗದೀಶ್ ಕೆರೆಬೈಲ್, ರಾಕೇಶ್ ಬೈಪಾಸ್,* ಸಾಂಸ್ಕೃತಿಕ ಕಾರ್ಯದರ್ಶಿಯಾಗಿ *ಹರೀಶ್ ಅಂಬ್ಲಮೊಗರು,* ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ *ಉದಯ ಆರ್.ಕೆ.,* ಇವರುಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ *ಎ.ಜೆ.ಶೇಖರ್, ಬಾಬು ಶ್ರೀಶಾಸ್ತ ಕಿನ್ಯಾ, ಚಂದ್ರಶೇಖರ ಉಚ್ಚಿಲ್, ಕೆ.ಪಿ.ಸುರೇಶ್, ಚಂದ್ರಹಾಸ ಪಂಡಿತ್ ಹೌಸ್, ದಿನೇಶ್ ಕೆ.ಅತ್ತಾವರ.*
ಮುಂದಿನ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಮತ್ತು ಗ್ರಾಮದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.🌹🌹💐

No comments:
Post a Comment