ಲಲಿತಕಲಾಮೃತ ವಿಶೇಷ ವರದಿ ಮಂಗಳೂರು:
✍️ :ಸುಜಾತ ಸುವರ್ಣ
*ವಿಷಪೂರಿತ ಹಾವು ಕಡಿದಾಗ ಪಾರಂಪಾರಿಕ ನಾಟಿ ವೈದ್ಯ ಪದ್ದತಿಯಿಂದ ಹಲವಾರು ಜೀವಗಳನ್ನು ಉಳಿಸಿದ ಬಡಗ ಬೆಳ್ಳೂರು ಕೊಳತ್ತಮಜಲ್ ಹೊಸ ಮನೆ ಶೀನ ಪೂಜಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.*
ಶ್ರೀಯುತ ಶೀನ ಪೂಜಾರಿ ಕೊಳತ್ತಮಜಲು ಇವರು ಪಾರಂಪರಿಕ ಪ್ರಸಿಧ್ದ ನಾಟಿ ವೈದ್ಯರೆಂದು ಸುತ್ತಮುತ್ತಲಿನ ಊರಿನಲ್ಲಿ ಹೆಸರು ವಾಸಿಯಾಗಿದ್ದು. ವಿಷಪೂರಿತ ಯಾವ ಹಾವು ಕಚ್ಚಿದರು ವಿಷ ತೆಗೆದು ಹಲವಾರು ಜನರ ಪ್ರಾಣ ಉಳಿಸಿದ ಪುಣ್ಯಾತ್ಮರು ಆಗಿದ್ದರು. ಯಾವುದೇ ತರದ ಹಾವೂ ಕಚ್ಚಿದರೂ ದೂರ ದೂರಿಂದಲೂ ಇವರ ಮನೆಗೆ ಚಿಕಿತ್ಸೆಗೆ ಬಂದು ಗುಣಮುಖರಾಗಿ ಹೋದವರ ಸಂಖ್ಯೆ ಅಸಂಖ್ಯಾತ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗೆ ತಿಳಿದಿದ್ದ ನಾಟಿ ಔಷಧಿಯನ್ನು ನೀಡಿ ವಿಷಸರ್ಪ ಕಡಿತಕ್ಕೊಳಗಾದ ಹಲವಾರು ರೋಗಿಗಳಿಗೆ ಧೈರ್ಯದ ಮಾತನ್ನು ಹೇಳಿ ಉಪಚರಿಸಿ, ಅವರನ್ನು ಗುಣಪಡಿಸುತಿದ್ದರು. ವೈದ್ಯಕೀಯ ವಿಜ್ಞಾನ ಸಾಕಷ್ಟು ಪ್ರಗತಿ ಹೊಂದಿರುವ ಇಂದಿನ ದಿನಗಳಲ್ಲೂ ಗ್ರಾಮೀಣ ಭಾಗದಲ್ಲಿ ತಲೆತಲಾಂತರದಿಂದಲೂ ಬಂದ ನಾಟಿ ವೈದ್ಯ ಪದ್ಧತಿಯ ಕಡೆಗೆ ಜನರ ಒಲವು ಈಗಲೂ ಇದೆ. ವಂಶಪಾರಂಪರ್ಯವಾಗಿ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಲಕ್ಷಾಂತರ ರೂಪಾಯಿ ಖರ್ಚು ವೆಚ್ಚಗಳಿಲ್ಲದೆ ಈ ಪ್ರಕೃತಿಯಲ್ಲಿ ಗಿಡಮೂಲಿಕೆಗಳು ಹಾಗೂ ಮಣ್ಣಿನಡಿಯಲ್ಲಿ ಸಿಗುವ ಔಷಧಿಯ ಗಿಡಗಳ ಬೇರುಗಳಿಂದ ಸಿಗುವಂತ ಮದ್ದುಗಳಿಂದಲೇ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಾವೂ ಆರೋಗ್ಯಕರ ಚಿಕಿತ್ಸೆಯನ್ನು ಪಡೆಯಬಹುದು ಎಂಬುದನ್ನು ಭಾರತೀಯ ವೈದ್ಯ ಪರಂಪರೆಯಲ್ಲಿಯೇ ನಾವೂ ಈ ಮೊದಲು ಓದಿ ತಿಳಿದುಕೊಂಡಿದ್ದೆವೆ.
ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ನಾಟಿವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದು ನಿಸ್ವಾರ್ಥ ಸೇವೆಯನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದ್ದ ಸರಳ ಸಜ್ಜನಿಕೆಯ ಶ್ರೀಯುತ ಶೀನ ಪೂಜಾರಿಯವರನ್ನು ಹಲವಾರು ಸಂಘಸಂಸ್ಥೆಗಳು ಈಗಾಗಲೇ ಸನ್ಮಾನಿಸಿ ಗೌರವಿಸಿರುತ್ತಾರೆ. ಶ್ರೀಯುತರಿಗೆ ಈಗ 93
ವರ್ಷ ವಯೋಸಹಜ ಅನಾರೋಗ್ಯದಿಂದಿದ್ದಾರೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಅಥವಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾನವೀಯತೆಯ ನೆಲೆಯಲ್ಲಿ ಸೇವೆಯನ್ನು ನೀಡುವ ನಿಷ್ಕಲ್ಮಷ ಮನಸ್ಸಿನ ಇವರನ್ನು ಹಾಗೂ ಇವರಂತೆ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಅದೆಷ್ಟೋ ನಾಟಿ ವೈದ್ಯರ ಸೇವೆಯನ್ನು ಎಂದೋ ಗುರುತಿಸಿ ಇಂತವರಿಗೆ ಯೋಗ್ಯ ಸ್ಥಾನ-ಮಾನಗಳನ್ನು ನೀಡಲೇಬೇಕಿತ್ತು. ಆದರೂ ತುಂಬಾ ತಡವಾದರೂ ಸಹ ಇವರಿಗೆ ಈಗ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಅತೀವ ಸಂತೋಷದೊಂದಿಗೆ ಅತ್ಯಂತ ಹೆಮ್ಮೆಯ ವಿಷಯ.
ಜಿಲ್ಲೆಯಲ್ಲಿ ಕೆಲವರು ವಂಶಪಾರಂಪರ್ಯವಾಗಿ ನಾಟಿ ವೈದ್ಯ ಪದ್ದತಿಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವಂತೆ ಸಂಸ್ಕಾರದೊಂದಿಗೆ ಈಗ ಇವರ ಸುಪುತ್ರ ಶ್ರೀ ಜನಾರ್ದನ ಎಚ್.ಎಸ್ ಇವರು ತನ್ನ ಪೂಜ್ಯ ತಂದೆಯವರು ನೀಡುತಿದ್ದ ನಾಟಿ ಔಷಧಿಯನ್ನು ಮುಂದುವರಿಸಿಕೊಂಡು ಈ ಪ್ರಕೃತಿಯೂ ನೀಡಿದ ಅಮೂಲ್ಯ ಗಿಡಮೂಲಿಕೆಗಳನ್ನು ಪರಿಚಯ ಮಾಡಿಕೊಂಡು ಔಷಧಿಗಳನ್ನು ನೀಡುತ್ತಾ ಹಲವರಿಗೆ ಜೀವದಾನವನ್ನು ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಈ ವೈದ್ಯವೃತ್ತಿಯಲ್ಲಿ ತಂದೆಯ ಮಾರ್ಗದರ್ಶನದಲ್ಲಿ ಇವರು ಇನ್ನಷ್ಟು ಎತ್ತರಕ್ಕೆ ಬೆಳೆದು ಅನಾದಿ ಕಾಲದಿಂದಲೂ ಬಂದ ಈ ವಿದ್ಯೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ, ಈ ವೃತ್ತಿಯಿಂದ ನೂರಾರು ಸಂಕಷ್ಟದ ಕುಟುಂಬಗಳಿಗೆ ಜೀವದಾನ ನೀಡುವ ಸೇವಾ ಸೌಭಾಗ್ಯ ಇವರಿಗೆ ಲಭಿಸಲಿ.
ಸಾವಿರಾರು ವರ್ಷಗಳ ಈ ನಾಟಿ ವೈದ್ಯ ಪದ್ಧತಿಯ ಜ್ಞಾನವೂ ನೇಪಾಥ್ಯಕ್ಕೆ ಸರಿಯದೆ ಸಾರ್ವಕಾಲಿಕವಾಗಿ ಉಳಿಯುವಂತಾಗಲಿ ಎಂಬ ಶುಭ ಹಾರೈಕೆಯೊಂದಿಗೆ ಶೀನ ಪೂಜಾರಿಯವರಿಗೆ ಶಿರಭಾಗಿ ನಮಿಸುತ್ತಾ. 2021-ರಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ಪಡೆಯಲು ಆಯ್ಕೆಯಾದ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೆನೆ.🙏
No comments:
Post a Comment